Ballari Tourists In Dubai | ಬಳ್ಳಾರಿಯ 50 ಪ್ರವಾಸಿಗರು ದುಬೈನಲ್ಲಿ ಲಾಕ್ 
ರಾಜ್ಯ

ದುಬೈನಲ್ಲಿ ಬಳ್ಳಾರಿಯ ಪ್ರವಾಸಿಗರು ಲಾಕ್; ರಕ್ಷಣೆಗಾಗಿ ಎದುರು ನೋಡುತ್ತಿವೆ 50 ಕುಟುಂಬಗಳು! | Ballari Tourists In Dubai

​ದುಬೈ/ಬಳ್ಳಾರಿ: ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ ಸುಮಾರು ಐವತ್ತು ಜನರ ತಂಡವೊಂದು ಯುದ್ಧದ ಸನ್ನಿವೇಶದಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿದ್ದು (Ballari Tourists In Dubai), ಭಾರತಕ್ಕೆ ಮರಳಲಾಗದೆ ಸಂಕಷ್ಟದಲ್ಲಿದ್ದಾರೆ.
​​ಬಳ್ಳಾರಿಯಿಂದ ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಈ ತಂಡವು ಶನಿವಾರ ರಾತ್ರಿ ಒಂಬತ್ತು ಗಂಟೆಯ ವಿಮಾನದ ಮೂಲಕ ಭಾರತಕ್ಕೆ ಮರಳಬೇಕಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಮಧ್ಯಾಹ್ನವೇ ವಿಮಾನ ನಿಲ್ದಾಣಕ್ಕೆ ತಂಡ ತಲುಪಬೇಕಿತ್ತು. ಆದರೆ, ಅಷ್ಟರಲ್ಲೇ ಯುದ್ಧದ ಘೋಷಣೆಯಾಗಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
​ಮಧ್ಯಾಹ್ನ ಮೂರು ಗಂಟೆಯೊಳಗೆ ನಿಲ್ದಾಣಕ್ಕೆ ಬಂದವರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಈ ತಂಡ ತಡವಾಗಿ ಬಂದ ಕಾರಣ ವಿಮಾನ ನಿಲ್ದಾಣದ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ​ಸದ್ಯ ಪ್ರವಾಸಿಗರ ಬಳಿ ಇದ್ದ ಹಣವೂ ಖಾಲಿಯಾಗಿದ್ದು, ಅಲ್ಲಿನ ಹೋಟೆಲ್ ಅಥವಾ ಲಾಡ್ಜ್‌ಗಳಲ್ಲಿ ಉಳಿಯಲು ಹೋದರೆ ದಿನಕ್ಕೆ ಹದಿನೈದರಿಂದ ರಿಂದ ಇಪ್ಪತ್ತು ಸಾವಿರ ರೂ. ಬಾಡಿಗೆ ಕೇಳುತ್ತಿದ್ದಾರೆ.
ಕೈಯಲ್ಲಿ ಹಣವೂ ಇಲ್ಲದೆ, ಅತ್ತ ವಿಮಾನ ನಿಲ್ದಾಣದ ಒಳಿಗೂ ಹೋಗಲಾಗದೆ ಪ್ರವಾಸಿಗರು ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ಪ್ರವಾಸಿಗರು ಶಾಸಕರಾದ ಭರತ್ ರೆಡ್ಡಿ , ಬಿ. ನಾಗೇಂದ್ರ ಅವರನ್ನು ಸಂಪರ್ಕಿಸಿ, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಸುರಕ್ಷಿತವಾಗಿ ಭಾರತಕ್ಕೆ ಮರಳಲುನ ನಮಗೆ ವ್ಯವಸ್ಥೆ ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ‌.