ಬಾಲಿವುಡ್​ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ 
ರಾಜ್ಯ

ತನ್ನ ಬೆಳೆ ಕಾಪಾಡಿಕೊಳ್ಳಲು ಸನ್ನಿ ಲಿಯೋನ್​ ಮೊರೆ ಹೋದ ಯಾದಗಿರಿ ರೈತ! ವಿಡಿಯೋ ವೈರಲ್​... Sunny Leone

ಪ್ರಮುಖ ಮುಖ್ಯಾಂಶಗಳು

  • ತಮ್ಮ ಹೊಲದಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಪೋಸ್ಟರ್ ಅಳವಡಿಸಿದ ಯಾದಗಿರಿ ರೈತ
  • ಬಿಳಿ ಚಿನ್ನವೆಂದೇ ಖ್ಯಾತಿಯಾಗಿರುವ ಹತ್ತಿ ಗಿಡಗಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ವಿನೂತನ ಐಡಿಯಾ
  • ದಾರಿಯಲ್ಲಿ ಹಾದು ಹೋಗುವವರ ಕಣ್ಣು ಇದೀಗ ಸನ್ನಿ ಲಿಯೋನ್​ ಪೋಸ್ಟರ್​ ಮೇಲೆ ಬೀಳುತ್ತಿದೆ
ಯಾದಗಿರಿ: ಫಲವತ್ತಾಗಿ ಬೆಳೆದು ನಿಂತಿರುವ ತನ್ನ ಹತ್ತಿ ಗಿಡಗಳಿಗೆ ಯಾರೊಬ್ಬರ ದೃಷ್ಟಿ ತಾಗದಿರಲೆಂದು ತಮ್ಮ ಹೊಲದ ಮಧ್ಯೆ ಬಾಲಿವುಡ್​ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ( Sunny Leone ) ಪೋಸ್ಟರ್ ಅಳವಡಿಸುವ ಮೂಲಕ​ ಯಾದಗಿರಿಯ ರೈತನೊಬ್ಬ ಎಲ್ಲರ ಗಮನ ಸೆಳೆದಿದ್ದಾರೆ.
ಬಿಳಿ ಚಿನ್ನವೆಂದೇ ಖ್ಯಾತಿಯಾಗಿರುವ ಹತ್ತಿ ಗಿಡಗಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಯಾದಗಿರಿ ರೈತ ಈ ವಿನೂತನ ಪ್ರಯತ್ನವನ್ನು ಮಾಡಿದ್ದಾರೆ. ಹಳದಿ ಬಣ್ಣದ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿರುವ ಸನ್ನಿ ಲಿಯೋನ್​ ಅವರ ಎತ್ತರದ ಪೋಸ್ಟರ್​ ಅನ್ನು ರೈತ ತಮ್ಮ ಹೊಲದ ಮಧ್ಯೆಯಲ್ಲಿ ಅಳವಡಿಸಿದ್ದಾರೆ.
ದಾರಿಯಲ್ಲಿ ಹಾದು ಹೋಗುವವರ ಕಣ್ಣು ಇದೀಗ ಸನ್ನಿ ಲಿಯೋನ್​ ಪೋಸ್ಟರ್​ ಮೇಲೆ ಬೀಳುತ್ತಿದೆ. ಕೆಲವರಂತೂ ತಮ್ಮ ವಾಹನವನ್ನು ನಿಲ್ಲಿಸಿ ಪೋಸ್ಟರ್​ ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕೆಲವರು ತನ್ನ ಬೆಳೆ ಉಳಿಸಿಕೊಳ್ಳಲು ರೈತ ಮಾಡಿರುವ ವಿನೂತನ ಐಡಿಯಾವನ್ನು ಕೊಂಡಾಡಿದರೆ, ಇನ್ನು ಕೆಲವರು ರೈತನ ಈ ನಡೆ ನಟಿಗೆ ಮಾಡಿದ ಅವಮಾನ ಎಂದು ಟೀಕಿಸುತ್ತಿದ್ದಾರೆ.
ಅಂದಹಾಗೆ, ಹಲವಾರು ರಾಜ್ಯಗಳ ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಬಣ್ಣ ಬಳಿದ ಮುಖಗಳಿಂದ ಹಿಡಿದು ವಿಚಿತ್ರವಾದ ಗೊಂಬೆಗಳನ್ನು ಹೊಲದಲ್ಲಿ ಅಳವಡಿಸುವಂತಹ ಕ್ರಿಯೇಟಿವ್​ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿದ್ದಾರೆ. ಆದರೆ, ಸನ್ನಿ ಲಿಯೋನ್ ಪೋಸ್ಟರ್ ಇದೆಲ್ಲವನ್ನು ಮೀರಿಸಿದ್ದು, ಅನೇಕರನ್ನು ಆಶ್ಚರ್ಯಕ್ಕೆ ದೂಡಿದೆ.
ಫಲವತ್ತಾಗಿ ಬೆಳೆದು ನಿಂತಿರುವ ತಮ್ಮ ಬೆಳೆಯನ್ನು ನೋಡಿ ಅಸೂಯೆ ಪಟ್ಟುಕೊಳ್ಳುವುದನ್ನು ತಡೆಯಲು ಸನ್ನಿ ಲಿಯೋನ್​ ಪೋಸ್ಟರ್​ ಅಂಟಿಸಲಾಗಿದೆ. ಯಾರೇ ಆಗಲಿ ಆ ಮಾರ್ಗದಲ್ಲಿ ಹಾದು ಹೋಗುವಾಗ ಅವರ ಗಮನ ಮೊದಲು ಪೋಸ್ಟರ್​ ಮೇಲೆ ಹೋಗುತ್ತದೆ. ಇದರಿಂದ ತಮ್ಮ ಬೆಳೆಗೆ ದೃಷ್ಟಿ ಆಗುವುದಿಲ್ಲ ಅನ್ನೋದು ರೈತನ ನಂಬಿಕೆಯಾಗಿದೆ. ಈ ನಂಬಿಕೆಯ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ, (ಏಜೆನ್ಸೀಸ್​).