siddaramaiah Satish Jarkiholi relationship 
ರಾಜ್ಯ

'ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ 30 ವರ್ಷದ್ದು, ನಮ್ಮ ನಡುವೆ ಗೊಂದಲ ಇಲ್ಲ'; ಸತೀಶ್​ ಜಾರಕಿಹೊಳಿ..Satish Jarkiholi

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಗೊಂದಲ ಇಲ್ಲ ಎಂದ ಸತೀಶ್​ ಜಾರಕಿಹೊಳಿ
  • ಗೊಂದಲ ಸೃಷ್ಟಿಸಿ ಲಾಭ ಪಡೆಯಲು ಹೊಸ ಶಕ್ತಿ ಹುಟ್ಟಿಕೊಂಡಿವೆ ಇದು ಬಹಳ ದಿನ ನಡೆಯುವುದಿಲ್ಲ
  • ನಮ್ಮದು 30 ವರ್ಷಗಳ ಸಂಬಂಧ...ನಮ್ಮ ನಡುವೆ ಗೊಂದಲ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಂಗಳೂರು: 'ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಗೊಂದಲ ಇಲ್ಲ ಹಾಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ' ಎಂದು ಹೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದಲ್ಲಿ ಎದ್ದಿರುವ ಹಲವು ವದಂತಿಗೆ ಬ್ರೇಕ್​ ಹಾಕಿದ್ದಾರೆ.
ಈ ಬಗ್ಗೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ಸಿದ್ದರಾಮಯ್ಯ ಮಧ್ಯೆ ಯಾವುದೇ ಭಿನ್ನಭಿಪ್ರಾಯವಿಲ್ಲ. ಆದರೆ, ಕೆಲವೊಂದು ಶಕ್ತಿಗಳು ನಮ್ಮ ಮಧ್ಯೆ ಗೊಂದಲ ಸೃಷ್ಟಿಸಿ ಲಾಭ ಪಡೆದುಕೊಳ್ಳಲು ಹುನ್ನಾರ ನಡೆಸುತ್ತಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮುಂದುವರೆದು, 'ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ಆತ್ಮೀಯ ಸಂಬಂಧ 30 ವರ್ಷಗಳದ್ದು. ನಾನು ಅವತ್ತು ಮಾತನಾಡಿದ ಸಂದರ್ಭದಲ್ಲಿ ಅವರ (ಸಿದ್ದರಾಮಯ್ಯ) ಹೆಸರು ಬಳಸಿಲ್ಲ. ಅವೆಲ್ಲ ನೀವು ಸೇರಿಸಿದ್ದು' ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಟ್ಟರು

ಸಂಪುಟ ಪುನರ್​ ರಚನೆ ಬಗ್ಗೆ ಹೇಳಿದ್ದಿಷ್ಟು

'ಸುರ್ಜೆವಾಲ, ಕೆಸಿ ಜೊತೆ ಚರ್ಚೆ ಆಯ್ತು. ವಿಶೇಷವಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ಆಗಿದೆ. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಉಳಿದಂತೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬೇಗ ಸಂಪುಟ ವಿಸ್ತರಣೆ ಮಾಡ್ತಾರೆ. ಇದು ಒಳ್ಳೆಯದು. ಹೊಸಬರಿಗೆ ಅವಕಾಶ ನೀಡೋದು ಪಕ್ಷಕ್ಕೆ ಆಸ್ತಿ ಆಸ್ತಿ ಆಗ್ತಾರೆ. ಬೆಳಗಾವಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಲೇ ಬೇಕು. ಜಿಲ್ಲೆಯ ಸಮರ್ಪಕ ಪ್ರತಿನಿಧಿತ್ವಕ್ಕೆ ಆದ್ಯತೆ ನೀಡಬೇಕು' ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು, (ಏಜೆನ್ಸೀಸ್).