Rukmini Vasanth bikini video viral case Fake profiles 
ರಾಜ್ಯ

Rukmini Vasanth​ ಬಿಕಿನಿ ವಿಡಿಯೋ ವೈರಲ್ ಕೇಸ್; ಪೊಲೀಸರಿಗೆ ತಲೆನೋವಾದ ನಕಲಿ ಪ್ರೊಫೈಲ್ಸ್, ಮೆಟಾ AIಗೆ ಪತ್ರ!

ಪ್ರಮುಖ ಮುಖ್ಯಾಂಶಗಳು

  • ಕಾಂತಾರ ನಟಿ ರುಕ್ಮಿಣಿ ವಸಂತ್ ಡೀಪ್​ಫೇಕ್​ ವಿಡಿಯೋ ರಿಲೀಸ್ ಕೇಸ್.
  • ದೂರು ದಾಖಲಾಗಿ 11 ದಿನ ಕಳೆದ್ರೂ ಇದುವರೆಗೂ ಸಿಕ್ಕಿಲ್ಲ ಕ್ಲೂ, ಮೆಟಾ ಎಐಗೆ ಪತ್ರ.
  • ಬಹುತೇಕ ಎಲ್ಲಾ ನಕಲಿ ಖಾತೆಗಳು ಹಿನ್ನಲೆ ಎಷ್ಟೇ ಜಾಲಾಡಿದ್ರೂ ನೋ ಯೂಸ್.
ಬೆಂಗಳೂರು: ನಟಿ ರುಕ್ಮಿಣಿ ವಸಂತ್​ ಅವರು ಬಿಕಿನಿ ತೊಟ್ಟು ಸ್ವಿಮ್ಮಿಂಗ್​ ಪೂಲ್​ನಿಂದ ಹೊರಗೆದ್ದು ಬಂದಂತೆ ಎಐ ಸಹಾಯದಿಂದ ಕ್ರಿಯೇಟ್ ಮಾಡಿದ್ದ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿತ್ತು. ಈ ಬಗ್ಗೆ ನಟಿ ದೂರು ನೀಡಿದ್ದರು. ಸದ್ಯ ಬೆಂಗಳೂರು ಸೈಬರ್​ ಪೊಲೀಸರಿಗೆ ಇದೊಂದ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ಪೊಲೀಸರು ಎಷ್ಟೇ ಜಾಲಡಿದರೂ ಸಹ ನಕಲಿ ಖಾತೆಯ ಹಿಂದಿರುವ ಕೈವಾಡ ಯಾರದ್ದು ಅನ್ನೋದು ಮಾತ್ರ ತಿಳಿಯುತ್ತಿಲ್ಲ ಎನ್ನಲಾಗುತ್ತಿದೆ.
ಕೆಲ ವಾರದ ಹಿಂದೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಿಕೊಂಡು ಕಿಡಿಗೇಡಿಗಳು ರುಕ್ಮಿಣಿ ವಸಂತ್​ ಅವರ ಡೀಪ್​ಫೇಕ್​ ವಿಡಿಯೋವನ್ನು ರಿಲೀಸ್​ ಮಾಡಿದ್ದರು. ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ಕುರಿತು ನಟಿ ರುಕ್ಮಿಣಿ ವಸಂತ್​ ಅವರು ಬೇಸರ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಕಳೆದ ಕೆಲವು ದಿನದ ಹಿಂದೆ 29 ಸೋಶಿಯಲ್​ ಮೀಡಿಯಾ ಖಾತೆಯ ವಿರುದ್ಧ ದಾಖಲಾದ ಬಗ್ಗೆ ಮಾಹಿತಿ ಹೊರಬಿದ್ದಿತ್ತು.

ಮೆಟಾ ಎಐಗೆ ಪತ್ರ ಬರೆದ ಪೊಲೀಸರು

ಆದರೆ ಸಮಸ್ಯೆ ಎಂದರೆ, ರುಕ್ಮಿಣಿ ವಸಂತ್ ಅವರು ದೂರು ದಾಖಲಿಸಿ ಹನ್ನೊಂದು ದಿನ ಕಳೆದರೂ ಸಹ ನಕಲಿ ಖಾತೆಗಳು ಹಿನ್ನಲೆ, ಹ್ಯಾಂಡಲ್​ ಮಾಡುತ್ತಿರುವವರು ಯಾರು ಎಂದು ಕ್ಲೂ ಸಿಕ್ಕಿಲ್ಲ. ಹೀಗಾಗಿ, ಸೈಬರ್​ ಕ್ರೈಂ ಪೊಲೀಸರು ನಕಲಿ ಅಕೌಂಟ್​ಗಳ ಬಗ್ಗೆ ವಿವರವನ್ನು ನೀಡುವಂತೆ ಮೆಟಾ ಎಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ನಕಲಿ ಖಾತೆ ಮಾಹಿತಿ ನೀಡಯವಂತೆ ಉಲ್ಲೇಖ

ನಟಿ ರುಕ್ಮಿಣಿ ವಸಂತ ಕೊಟ್ಟಿರೋ ಎಲ್ಲಾ ಐಡಿಗಳು ಹಾಗೂ ಪೊಲೀಸರ ತನಿಖೆ ವೇಳೆ ಕಂಡು ಬಂದ ಅನುಮಾನಿತ ಸೋಷಿಯಲ್ ಮೀಡಿಯಾ ಖಾತೆಗಳ ಪಟ್ಟಿಯನ್ನು ಕೊಟ್ಟು, ಯಾವ ಮೂಲ ಐಡಿಯಿಂದ ಪೋಸ್ಟ್ ವೈರಲ್ ಆಗಿದೆ ಎನ್ನುವ ವಿವರ ಕೊಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇಸಕ್ಕೂ ಮುನ್ನ ಸೈಬರ್​ ಕ್ರೈಂ ಪೊಲೀಸರು ಈ ವಿಡಿಯೋ ಫೋಟೋಗಳು ಎಐ ಜನರೇಟೆಡ್​ ಆ ಎನ್ನುವುದನ್ನು ತನಿಖೆ ನಡೆಸಿದ್ದರು.. ತನಿಖೆಯಿಂದ ಇದು ಕೃತಕ ಬುದ್ಧಿಮತ್ತೆಯಿಂದ ತಯಾರಾಗಿದ್ದು ಎಂದು ತಿಳಿಯುತ್ತಲೇ ಮೆಟಾಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ರುಕ್ಮಿಣಿ ವಸಂತ್ ಹೇಳಿದ್ದೇನು?

ಸೋಶಿಯಲ್​ ಮೀಡಿಯಾದಲ್ಲಿ ನನ್ನ ಫೋಟೋ ದುರ್ಬಳಕೆ ಮಾಡಿಕೊಂಡು, ಇನ್ಯಾರದ್ದೋ ದೇಹಕ್ಕೆ ಫೋಟೋ ಅಟ್ಯಾಚ್​ ಮಾಡಿ ಡೀಪ್​ಫೇಕ್​ ವಿಡಿಯೋ ಪೋಸ್ಟ್ ಮಾಡಲಾಗಿದೆ. ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ನಾನು ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದೇನೆ ಎಂದು 6 ಫೇಸ್​ಬುಕ್, 9 ಇನ್​ಸ್ಟಾಗ್ರಾಮ್​ ಹಾಗೂ 14 ಎಕ್ಸ್​ ಖಾತೆ ಸೇರಿದಂತೆ ಒಟ್ಟು 29 ಸೋಶಿಯಲ್​ ಮೀಡಿಯಾ ಖಾತೆ ವಿರುದ್ಧ ದೂರು ಕೊಟ್ಟಿದ್ದರು, (ಏಜೆನ್ಸೀಸ್).