ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ವಿನಯ್
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ
- ವಕೀಲರ ಬದಲಾವಣೆಗೆ ಮುಂದಾದ ಆರೋಪಿ ವಿನಯ್ ಕೋರ್ಟ್ ಆವರಣದಲ್ಲೇ ಕಿರುಚಾಟ
- ಆರೋಪಿ ವಿನಯ್ ಕೆನ್ನೆಗೆ ಐದಾರು ಬಾರಿ ಚಟಾರನೆ ಬಾರಿಸಿದ ವಕೀಲ ನಟರಾಜ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್(RENUKASWAMY MURDER CASE)ನಲ್ಲಿ ಎ10 ಆಗಿರುವ ವಿನಯ್ಗೆ ಅವರ ವಕೀಲರಿಂದಲೇ ಕಪಾಳ ಮೋಕ್ಷವಾಗಿರುವ ಘಟನೆ ಬೆಂಗಳೂರಿನ ಕೋರ್ಟ್ ಆವರಣದಲ್ಲಿ ನಡೆದಿದೆ.
ವಿನಯ್ ಕಪಾಳಕ್ಕೆ ಹೊಡೆದ ವಕೀಲರು
ಎ10 ವಿನಯ್ ಸ್ಟೋನಿಬ್ರೂಕ್ ಮಾಲೀಕ. ಇತ್ತೀಚೆಗೆ ಆರೋಪಿ ವಕೀಲರ ಬದಲಾವಣೆಗೆ ಮುಂದಾಗಿದ್ದರು. ಈ ಬಗ್ಗೆ ಮತ್ತೆ ತಕರಾರು ತೆಗೆದಿದ್ದರು. ಇದರಿಂದ ಸದ್ಯ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇಂದು(ಮಾ.9) ರಂದು ನಟರಾಜ್ ಅವರು ವಿನಯ್ ಪರ ವಕಾಲತ್ತು ವಹಿಸಲು ಬಂದಿದ್ದರು. ಈ ವೇಳೆ ಅವರ ಬಳಿ ಬದಲಾವಣೆ ಬಗ್ಗೆ ವಾಗ್ವಾದಕ್ಕೆ ವಿನಯ್ ಇಳಿದಿದ್ದರು. ಮಾತನಾಡುವ ಬರದಲ್ಲಿ ಕೊರ್ಟ್ ಆವರಣದಲ್ಲೇ ವಕೀಲರ ಮೇಲೆ ಕಿರುಚಾಡಿದ್ದಾರೆ. ಅವರ ವರ್ತನೆಯಿಂದ ಸಿಟ್ಟಾದ ವಕೀಲರು ಕಾರಿಡಾರ್ನಲ್ಲಿ ಐದಾರು ಬಾರಿ ಅವರ ಕೆನ್ನೆಗೆ ಬಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏನಿದು ಘಟನೆ?
2024 ಜೂನ್8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಮೃತದೇಹವು ಪತ್ತೆಯಾಗಿತ್ತು. ಕೊಲೆಯ ಜಾಡು ಹಿಡಿದ ಕಾಮಾಕ್ಷಿ ಪಾಳ್ಯ ಪೊಲೀಸರು ಮೊದಲಿಗೆ ಬಂಧಿಸಿದ್ದು ನಟ ದರ್ಶನ್ ಅವರನ್ನು. ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತರಲಾಗಿತ್ತು. ಈ ವೇಳೆ ದರ್ಶನ್ ಮತ್ತು ಅವರ ಗ್ಯಾಂಗಿನವರಿಂದ ಆತನ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಕೇಳಿಬಂದಿತ್ತು. ಸದ್ಯ ಜಾಮೀನಿನ ಬಳಿಕ ದರ್ಶನ್ ಮತ್ತು ಗ್ಯಾಂಗ್ ಮತ್ತೆ ಜೈಲುವಾಸ ಅನುಭವಿಸುತ್ತಿದ್ದಾರೆ. (ಏಜನ್ಸಿಸ್).