ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಪ್ರೊಫೆಸರ್
- ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಪ್ರೊಫೆಸರ್
- ಪಿ.ಇ.ಎಸ್. ಪ್ರೊಫೆಸರ್ ವಿರುದ್ಧ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ದೂರು ದಾಖಲು
- ಆರೋಪಿದ ಅಧ್ಯಾಪಕನನ್ನು ಕೆಲಸದಿಂದ ಹೊರಹಾಕಿದ ವಿವಿ ಕುಲಪತಿ
- ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿರುವ ಕುಲಪತಿ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಒಬ್ಬರು ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಟೆರೆರಿಸ್ಟ್ (Professor Calls Student Terrorist) ಎಂದು ಕರೆದ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಈಗ ಈ ಘಟನೆ ಕುರಿತು ಆಕ್ರೋಶ ಹೊರಹಾಕಿರುವ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಕಾಲೇಜಿನ ಕೊಠಡಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬನನ್ನು ಉಗ್ರಗಾಮಿ ಎಂದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಿದ್ಯಾರ್ಥಿಗೆ ಭಯೋತ್ಪಾದಕ ಎಂದು ಕರೆದಿರುವ ಪ್ರೊ. ಮುರಳಿಧರ್ ದೇಶಪಾಂಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿ ದೂರನ್ನು ನೀಡಿದೆ.
ಪ್ರೊಫೆಸರ್ ಸಸ್ಪೆಂಡ್!
ಈ ರೀತಿಯ ಘಟನೆ ನಮ್ಮ ವಿವಿ ಯಲ್ಲಿ ಇದುವರೆಗೆ ಎಂದಿಗೂ ನಡೆದಿಲ್ಲ, ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೀಡಿರುವ ದೂರನ್ನು ಸ್ವೀಕರಿಸಿರುವ ವಿವಿ ಕುಲಪತಿ, ಆರೋಪಿತ ಪ್ರೊಫೆಸರ್ ಮೇಲೆ ಆಂತರಿಕ ತನಿಖೆ ನಡೆಯುತ್ತಿದ್ದು, ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೆವೆ. ಅಲ್ಲಿಯವರೆಗೆ ಪ್ರೊಫೆಸರ್ ಮುರಳಿಧರ್ ದೇಶಪಾಂಡೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕುಲಪತಿಗಳು ಪ್ರಕಟಣೆ ನೀಡಿದ್ದಾರೆ.
ಪ್ರಕರಣದ ಹಿನ್ನಲೆ
ಪ್ರೊ. ಡಾ. ಮುರಳಿಧರ್ ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅಫ್ನಾನ್ ಎಂಬ ವಿದ್ಯಾರ್ಥಿ, ನಾನು ಒಬ್ಬರನ್ನು ಬೇಟಿ ಮಾಡಲು ಹೋಗಬೇಕು, ನಿಮ್ಮ ಕ್ಲಾಸ್ಗೆ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದ್ದಾನೆ.
ಈ ಮಾತನ್ನು ಕೇಳಿಸಿಕೊಂಡು ಸಿಟ್ಟಿಗೆದ್ದ, ಪ್ರೊ. ಮುರಳಿಧರ್, ನಾನು ಇವತ್ತು ಶಾಂತಯುತವಾಗಿ ತರಗತಿ ನಡೆಸಲು ಬಂದರೆ ಎಲ್ಲಾ ಹಾಳು ಮಾಡಿದಿರಿ. ಈ ಮಾತನ್ನು ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ ಟೆರೆರಿಸ್ಟ್ ಎಂದು ಅಫ್ನಾನ್ ಮೇಲೆ ರೇಗಿದ್ದಾರೆ.
ಇಷ್ಟಕ್ಕೆ ಮಾತನ್ನು ನಿಲ್ಲಿಸದ ಪ್ರೊಫೆಸರ್, ನಿಮ್ಮಿಂದಲೇ ಇರಾನ್ನಲ್ಲಿ ಯುದ್ಧ ನಡೆಯುತ್ತಿದೆ. ನೋಡ್ತಾಯಿರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಮಗೆ ಸರಿಯಾದ ಪಾಠ ಕಲಿಸುತ್ತಾನೆ. ಟ್ರಂಪ್ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಾನೆ, ಗೋ ಟು ಹೆಲ್ ಎಂದು ಪ್ರೊ. ಮುರಳಿಧರ್ ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).