PM Modi To Inaugurate Viveka Memorial In Mysuru On Aug. 1
- ರಾಮಕೃಷ್ಣ ಆಶ್ರಮ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ.
- ವಿವೇಕ ಸ್ಮಾರಕ ಉದ್ಘಾಟನೆಗೆಂದು ಆಗಸ್ಟ್ 1ರಂದು ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ.
- 1892 ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ಸ್ಮರಣಾರ್ಥವಾಗಿ ಸ್ಥಾಪನೆ.
ಮೈಸೂರು: ಶ್ರೀ ರಾಮಕೃಷ್ಣ ಆಶ್ರಮ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಾಗೂ ವಿವೇಕ ಸ್ಮಾರಕ ಉದ್ಘಾಟನೆ(Viveka Smaraka Mysuru inauguration) ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಎನ್ನಲಾಗಿದೆ.
ಪ್ರಧಾನಿ ಮೋದಿಯವರ ವೇಳಾಪಟ್ಟಿ ಹೀಗಿದೆ
| ವೇಳೆ | ಸ್ಥಳ | ಮಾರ್ಗ |
|---|
| ಮಧ್ಯಾಹ್ನ 2.55 | ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮನ | ಮಂಡಕಳ್ಳಿ ವಿಮಾನ ನಿಲ್ದಾಣ, ಮೈಸೂರು
|
| ಮಧ್ಯಾಹ್ನ 3.15 | ವಿಮಾನ ನಿಲ್ದಾಣದಿಂದ ನಿರ್ಗಮನ (ವಿಶೇಷ ಹೆಲಿಕಾಪ್ಟರ್ ಬಳಕೆ)
| ಓವಲ್ ಮೈದಾನ, ಮೈಸೂರು
|
| ಮಧ್ಯಾಹ್ನ 3.25 | ವಿವೇಕ ಸ್ಮಾರಕ
| ಓವಲ್ ಮೈದಾನದಿಂದ ರಸ್ತೆಯ ಮೂಲಕ ಪ್ರಯಾಣ
|
| ಮಧ್ಯಾಹ್ನ 3.30 ರಿಂದ ಸಂಜೆ 5.15 | ವಿವೇಕ ಸ್ಮಾರಕ ಉದ್ಘಾಟನೆ.
| ರಾಮಕೃಷ್ಣ ಆಶ್ರಮದ ಕಾರ್ಯಕ್ರಮದಲ್ಲಿ ಭಾಗಿ
|
| ಸಂಜೆ 5.20 | ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ
| ರಾಮಕೃಷ್ಣ ಆಶ್ರಮ
|
| ಸಂಜೆ 5.30 | ಓವಲ್ ಮೈದಾನಕ್ಕೆ ವಾಪಸ್
| ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ
|
| ಸಂಜೆ 5.55 | ದೆಹಲಿಗೆ ವಾಪಸ್.
| ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ
|
ಏನಿದರ ಹಿನ್ನಲೆ
35 ಕೋಟಿ ರೂ. ವೆಚ್ಚದಲ್ಲಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಲಾದ ವಿವೇಕ ಸ್ಮಾರಕವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ. 1892 ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಂಗಿದ್ದ ಸ್ಮರಣಾರ್ಥವಾಗಿ ರಾಮಕೃಷ್ಣ ಆಶ್ರಮವು ಈ ವಿವೇಕ ಸ್ಮಾರಕವನ್ನು ನಿರ್ಮಿಸಿದೆ.
ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಪೊಲೀಸರು ಈಗಾಗಲೇ ಬರಪೂರ ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ವಾಹನ ಸವಾರರು ಆ ದಿನ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ಹೊರಡಿಸಿದ್ದಾರೆ.
1893ರಲ್ಲಿ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನ ಭಾಷಣಕ್ಕೆ ವಿವೇಕಾನಂದರು ಭೇಟಿ ನೀಡುವ ಮೊದಲು 1892 ನವೆಂಬರ್‌ನಲ್ಲಿ ಮೈಸೂರಿಗೆ ಭೇಟಿ ನೀಡಿ ಮೂರು ವಾರ ಇಲ್ಲೆ ತಂಗಿದ್ದರು. ಅಭ್ಯಾಸ ನಟಡೆಸಿದ್ದರು. ಆ ವೇಳೆ ಇದ್ದ ಮೈಸೂರಿನ ಶ್ರೀ ಚಾಮರಾಜ ಒಡೆಯರ್ ಹಾಗೂ ದಿವಾನರಾದ ಸರ್ ಕೆ ಶೇಷಾದ್ರಿ ಅವರೊಂದಿಗೆ ಸಂವಾದ ನಡೆಸಿದ್ದರು ಎನ್ನಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಜಾಗದಲ್ಲಿ ಸ್ಮಾರಕ ತಲೆಯೆತ್ತಲಿದೆ ಎನ್ನಲಾಗಿದೆ.
ಆರ್ಟ್ ಆಫ್ ಲಿವಿಂಗ್ಗೆ ಭೇಟಿ
ಪ್ರಧಾನಿ ಮೋದಿ ಅವರು ಮೇ ಮೊದಲ ವಾರದಲ್ಲಿ ಆರ್ಟ್ಆಫ್ ಲಿವಿಂಗ್ಗೆ ಭೇಟಿ ನೀಡಿದ್ದರು. ಆ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಮ್ಮೆ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೌಶಲ್ಯ. ಕಲೆಗಾಗಿ ಹಾಗೂ ಯೋಗಧ್ಯಾನ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಯುವ ಸಬಲೀಕರಣ ಕೇಂದ್ರ, ಚಿತ್ರಪಟ ಪ್ರದರ್ಶನ ಹಾಗೂ ಸಭಾಂಗಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ವಿವೀಕ ಸ್ಮಾರಕ ಕೇಂದ್ರವನ್ನು ಉದ್ಘಾಟಿಸುತ್ತಿದ್ದಾರೆ, (ಏಜೆನ್ಸೀಸ್).