ಸುಪ್ರೀಂಕೋರ್ಟ್ 
ರಾಜ್ಯ

ಆನ್​ಲೈನ್ ಬೆಟ್ಟಿಂಗ್ ಗೇಮ್ ಮೂಲಭೂತ ಹಕ್ಕು ಅಲ್ಲ, ನಿಷೇಧ ಸರಿಯಿದೆ; ಕರ್ನಾಟಕ, ತಮಿಳುನಾಡು ಸರ್ಕಾರ ಪರ ಸುಪ್ರೀಂ ತೀರ್ಪು | Supreme verdict

ನವದೆಹಲಿ: ಆನ್​ಲೈನ್​ ಬೆಟ್ಟಿಂಗ್ ಗೇಮ್​ ಸಂಪೂರ್ಣವಾಗಿ ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಕ್ರಮವನ್ನು ಮಾನ್ಯ ಮಾಡಿರುವ ಸುಪ್ರೀಂಕೋರ್ಟ್(Supreme Court)​, ಕೌಶಲ್ಯದ ಹೆಸರಲ್ಲೂ ಬೆಟ್ಟಿಂಗ್ ನಡೆಸುವ ಯಾವುದೇ ಗೇಮ್​ಗಳಿಗೂ ಸಾಂವಿಧಾನಿಕ ರಕ್ಷಣೆಯಿಲ್ಲ ಎಂದು ಬುಧವಾರ(ಜೂ. 03) ಐತಿಹಾಸಿ ತೀರ್ಪು ನೀಡಿದೆ.
ಆನ್​ಲೈನ್ ಬೆಟ್ಟಿಂಗ್ ನೀಷಧ ಹೇರಿದ್ದ ಎರಡೂ ರಾಜ್ಯ ಸರ್ಕಾರಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ಥಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್​​ ದ್ವಿಸದಸ್ಯ ಪೀಠವು, . ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟಪಡಿಸಿದೆ.
ಆನ್‌ಲೈನ್ ರಮ್ಮಿ ಮತ್ತು ಪೋಕರ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬೆಟ್ಟಿಂಗ್ ನಡೆಸುವ ಅಭ್ಯಾಸವನ್ನು ತೀವ್ರವಾಗಿ ಖಂಡಿಸಿದ ಪೀಠ, ಸಂವಿಧಾನದ ಪ್ರಕಾರ ಬೆಟ್ಟಿಂಗ್ ಮತ್ತು ಜೂಜಾಟದ ಬಗ್ಗೆ ಕಾನೂನುಗಳನ್ನು ಮಾಡುವ ಏಕೈಕ ಅಧಿಕಾರ ರಾಜ್ಯಗಳಿಗೆ ಇದೆ. ಆಟವನ್ನು ಆಡಲು ಕೌಶಲ್ಯ ಅಗತ್ಯವಿದ್ದರೂ, ಅದರ ಮೇಲೆ ಹಣವನ್ನು ಪಣತೊಟ್ಟರೆ ಮಾತ್ರ ಅದು ಜೂಜಾಟದ ವರ್ಗಕ್ಕೆ ಸೇರುತ್ತದೆ ಎಂದು ಹೇಳಿದೆ.
ಆನ್‌ಲೈನ್ ವ್ಯಸನಗಳಿಂದಾಗಿ ಯುವಕರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ನಮ್ಮ ಮುಂದಿವೆ. ಸಮಾಜದ ಹಿತದೃಷ್ಟಿಯಿಂದ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಷೇಧ ಹೇರುವುದು ಸರಿ ಎಂದು ತಿಳಿಸಿದೆ (ಏಜೆನ್ಸೀಸ್).