ಹೊಸ ಸ್ಕ್ರಾಂಬ್ಲರ್ ಬೈಕ್‌ಗಳ ಅನಾವರಣ 
ರಾಜ್ಯ

ಹೊಸ ಸ್ಕ್ರಾಂಬ್ಲರ್ -2 ಬೈಕ್ ಅನಾವರಣ: ಯೆಜ್ಡಿ, ಬಿಎಸ್‌ಎ ಒಟ್ಟಾಗಿ ವಿನ್ಯಾಸ-Yezdi

ಬೆಂಗಳೂರು:ಪ್ರಸಿದ್ಧ ಮೋಟಾರ್‌ಸೈಕಲ್ ಬ್ರಾಂಡ್‌ಗಳಾದ ಯೆಜ್ಡಿ ಮತ್ತು ಬಿಎಸ್‌ಎ ಮೊದಲ ಬಾರಿಗೆ ಒಟ್ಟಾಗಿ 350 ಸಿಸಿ ಮತ್ತು 650 ಸಿಸಿ ಸಾಮರ್ಥ್ಯದ ಎರಡು ಹೊಸ ಸ್ಕ್ರಾಂಬ್ಲರ್ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.
ನಗರ, ಹೆದ್ದಾರಿ ಸೇರಿ ಇತರ ಮಾದರಿಯ ರಸ್ತೆಗಳ ಪ್ರಯಾಣಗಳಿಗೆ ಸೂಕ್ತವಾಗಿರುವ ಈ ಬೈಕ್‌ಗಳು, ಆಧುನಿಕ ರೈಡರ್‌ಗಳ ಅಗತ್ಯ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಕಂಪನಿಯು, ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಭಾರತದಲ್ಲಿ ಅತಿ ಕಡಿಮೆ ತೂಕ ಹೊಂದಿರುವ ‘ಯೆಜ್ಡಿ ಸ್ಕ್ರಾಂಬ್ಲರ್ 350 ಸಿಸಿ’, ಹೊಸ ಕಟರ್ ಲಿಕ್ವಿಡ್ ಕೂಲ್ಡ್ ಇಂಜಿನ್ ಹೊಂದಿದೆ. ಇದು 30 ಬಿಎಚ್‌ಪಿ ಶಕ್ತಿ ಮತ್ತು 30 ಎನ್‌ಎಂ ಟಾರ್ಕ್ ನೀಡುವ ಜತೆಗೆ ಅಂದಾಜು 30 ಕಿ.ಮೀ. ಮೈಲೇಜ್ ನೀಡಲಿದೆ. 174 ಕಿಲೋಗ್ರಾಂ ತೂಕದ ಈ ಬೈಕ್, ನಗರ ರಸ್ತೆಗಳಲ್ಲಿ ವೀಕೆಂಡ್ ಟ್ರಿಪ್‌ಗಳಿಗೆ ಅತ್ಯಂತ ಸೂಕ್ತವಾಗಿದೆ. ಈ ಬೈಕ್‌ನ ಬೆಲೆ 1,99,950 ರೂ.ನಿಂದ ಆರಂಭವಾಗಲಿದೆ.
ಬಿಎಸ್‌ಎ ಸ್ಕ್ರಾಂಬ್ಲರ್ 650ಸಿಸಿ ಬೈಕ್ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದ್ದು, 45 ಬಿಎಚ್‌ಪಿ ಶಕ್ತಿ ಮತ್ತು 55 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ರಿಟಿಷ್ ಇಂಜಿನಿಯರಿಂಗ್ ಪ್ರೇರಿತ ವಿನ್ಯಾಸ ಮತ್ತು ಬಲಿಷ್ಠ ನಿರ್ಮಾಣವು ಈ ಬೈಕ್‌ಗೆ ವಿಶೇಷ ಆಕರ್ಷಣೆ ನೀಡುತ್ತದೆ. ಬೈಕ್‌ನ ಪ್ರಾರಂಭಿಕ ಬೆಲೆ 3,24,950 ರೂ.ನಿಂದ ಆರಂಭವಾಗಲಿದೆ. ಬೈಕ್‌ಗಳಿಗೆ 4 ವರ್ಷ ಅಥವಾ 50,000 ಕಿ.ಮೀ. ವಾರಂಟಿ ನೀಡಲಾಗಿದೆ.ವಿಸ್ತರಿತ ವಾರಂಟಿ ಹಾಗೂ ರಸ್ತೆ ಸಹಾಯ ಸೇವೆಗಳೂ ಲಭ್ಯವಿವೆ.