ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ
ಬೆಂಗಳೂರು: ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು,ಆಹಾರ ನಿರೀಕ್ಷಣಾಧಿಕಾರಿಗಳು ಹಾಗೂ ವಿಶ್ಲೇಷಕರನ್ನು ಮಾತೃ ಇಲಾಖೆಗೆ ಕಳುಹಿಸುವ ಮತ್ತು ಸೇವೆ ಕುರಿತು ಸರ್ಕಾರವು ‘ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ’ ಎಂಬಂತೆ ವರ್ತಿಸುತ್ತಿದೆ.
ಹಲವು ವರ್ಷಗಳಿಂದ ಕಾಲಕಾಲಕ್ಕೆ ನಿಯೋಜನೆಗೊಂಡ ಅರೋಗ್ಯ ನಿರೀಕ್ಷಕರಗಳ ಅವದಿ ಮುಗಿದಿರುವ ಹಿನ್ನೆಲೆಯಲ್ಲಿ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಲಾಗಿತ್ತು.ಆದರೆ, ಕೆಲವರು ಕೆಎಟಿ, ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಮೇಲೆ ಮುಂದುವರೆದಿದ್ದರು. ಹೇಗಾದರೂ ಮಾಡಿ ಅರೋಗ್ಯ ನಿರೀಕ್ಷಕರುಗಳನ್ನು ವಾಪಾಸ್ ಕಳುಹಿಸಲು ಶತಪ್ರಯತ್ನ ನಡೆಸಿದ್ದರು. ನಿಯೋಜನೆ ಮೇಲೆ ಕಾರ್ಯನಿರ್ವಹಿಸುವ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಯಾವುದಾದರೂ ಒಂದು ಸಣ್ಣ ದೂರು ಬಂದರು ಅಮಾನತ್ತು ಮಾಡಿ ಇವರನ್ನು ಮಾತೃ ಇಲಾಖೆಗೆ ವಾಪಾಸ್ ಕಳಿಸಿದ್ದಾರೆ. ಆದರೆ, ಅದೇ ವೈದ್ಯರ ಮೇಲೆ ಯಾವುದೇ ಗುರುತರ ಆಪಾದನೆ ಬಂದರೂ ಅವರ ಮೇಲೆ ಯಾವುದೇ ಕ್ರಮವಾಗುತ್ತಿಲ್ಲ. ಇಲಾಖೆ ಉನ್ನತಧಿಕಾರಿಗಳ ಇಬ್ಭಾಗ ನೀತಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಆಹಾರ ಸುರಕ್ಷತೆಯಲ್ಲಿನ ಲ್ಯಾಬ್‌ನಲ್ಲಿ ಅಂದರೆ ಬೆಂಗಳೂರು ಲ್ಯಾಬ್ ಬಿಟ್ಟು ಬೇರೆ ಯಾವುದೇ ಲ್ಯಾಬ್ ನವರನ್ನು ಆಹಾರ ಸುರಕ್ಷತಾ ಇಲಾಖೆ ತೆಗೆದು ಕೊಂಡಿರುವುದಿಲ್ಲ. ವೃಂದ ಮತ್ತು ನೇಮಕಾತಿ ನಿಯಮದಲ್ಲಿ ನಿಯಮ (3)ರಲ್ಲಿ 1 ರಿಂದ 6 ರವರೆಗೆ ಇಲ್ಲಿಯೇ ಮುಂಬಡ್ತಿ ಸೇರಿ ಎಲ್ಲ ಸೇವಾ ಸೌಲಭ್ಯಗಳನ್ನು ಕೊಡಬೇಕು ಎಂದು ಆಹಾರ ಸುರಕ್ಷತಾ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದರು. ಇದರಲ್ಲಿ ಕೆಲವರನ್ನು ತೆಗೆದುಕೊಂಡು ಉಳಿದ ಲ್ಯಾಬ್‌ನವರನ್ನು ಬಿಟ್ಟಿರುವುದು ಹಲವು ಅನುಮಾನಕ್ಕೆ ಏಡೆ ಮಾಡಿಕೊಡಲಾಗಿದೆ.
ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ಹಲವು ವರ್ಷಗಳಿಂದ ವೈದ್ಯರು ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಾಧಿಕಾರಿಗಳನ್ನು ಮಾತೃ ಇಲಾಖೆಗೆ ತೆರಳುವಂತೆ ಇಲಾಖೆ ಆದೇಶ ಹೊರಡಿಸಿತ್ತು. ನಿಯೋಜನೆ ಅವಧಿ ಮುಕ್ತಾಯವಾದರೂ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ನಿಯೋಜನೆ ಅವಧಿಯನ್ನು ರದ್ದುಪಡಿಸಲಾಗಿತ್ತು. ಸ್ವಯಂ ಬಿಡುಗಡೆಗೊಂಡು ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆದೇಶದಲ್ಲಿ ಉಲ್ಲೇಖಿಸಿತ್ತು.
ಇದರಲ್ಲಿ ಕೆಲ ವೈದ್ಯರು ಮಾತೃ ಇಲಾಖೆಗೆ ಹಿಂತಿರುಗಿದರೆ, ಇನ್ನೂ ಕೆಲವರು ನಿಯೋಜನೆ ಮೇರೆಗೆ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಕೆಲ ವೈದ್ಯರು ಕೋರ್ಟ್ ಮೊರೆ ಹೋಗಿದ್ದರು. ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿತ್ತು. ಆದರೂ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಮಾತೃ ಇಲಾಖೆಗೆ ತೆರಳಲು ಕೆಲ ವೈದ್ಯರು ನಿರಾಕರಿಸಿದ್ದಾರೆ. ಬಿಬಿಎಂಪಿ ಪಶ್ಚಿಮ ಅಂಕಿತಾಧಿಕಾರಿ ಡಾ.ಶಿವೇಗೌಡ ಅವರ ಕೇಸ್‌ನಲ್ಲಿ ಎಎಜಿ, ಕೋರ್ಟ್‌ನಲ್ಲಿ ಇವರುಗಳಿಗೆ ಯಾವುದೇ ಸ್ಟೇ ಇಲ್ಲ ಎಂದು ತಿಳಿಸಿರುತ್ತಾರೆ. ಆದರೂ ಕೆಲ ಅಧಿಕಾರಿಗಳು ಮತ್ತು ಎಎಸ್ಒರೊಬ್ಬರು ಸಾಂಖ್ಯಿಕ ಇಲಾಖೆಯಿಂದ
ಇಲ್ಲಿಗೆ ಬಂದು 8 ವರ್ಷವಾದರೂ ಮತ್ತೆ ಪದನ್ನೋತಿ ಹೊಂದಿ ಮುಂದುವರಿದಿದ್ದಾರೆ.
2013ರಲ್ಲಿ ಅಂದಿನ ಅರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು, ಜನರಿಗೆ ಒಳ್ಳೆಯ ಅರೋಗ್ಯ ಸೇವೆ ಸಿಗಲಿ ಎಂಬ ಉದ್ದೇಶದಿಂದ ಆಹಾರ ಸುರಕ್ಷತಾ ಮತ್ತ ಗುಣಮಟ್ಟ ಇಲಾಖೆಯಿಂದ ಎಲ್ಲ ವೈದ್ಯರುಗಳನ್ನು ಅರೋಗ್ಯ ಇಲಾಖೆಗೆ ವಾಪಾಸ್ ಕಳಿಸಲಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳು ವೈದ್ಯರ ಸೇವೆಯನ್ನು ಆಹಾರ ಸುರಕ್ಷತಾ ಇಲಾಖೆಯಲ್ಲಿ ಮುಂದುವರಿಸಿಕೊಂಡ ಬರುತ್ತಿವೆ. ಕೆಲ ವೈದ್ಯರು 8 ವರ್ಷದಿಂದ ಇಲ್ಲಿಯೇ ನಿಯೋಜನೆ ಮೇಲೆ ಇದ್ದು, ಅವರು ಮಾತೃ ಇಲಾಖೆಯಲ್ಲಿ ಪದೋನ್ನತಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಮೇಲಾಧಿಕಾರಿಗಳ ಕೃಪಕಟಾಕ್ಷ ಇದೆ. ನಿಯಮಬಾಹಿರಾವಾಗಿ ನಿಯೇಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯರನ್ನು ಮಾತೃ ಇಲಾಖೆಗೆ ಕಳುಹಿಸುವ ಕ್ರಮವನ್ನು ಹೊಸ ಸಚಿವರು ಈ ಹಿಂದೆ 2013 ತೆಗೆದುಕೊಂಡಂತೆ ಆಹಾರ ಸುರಕ್ಷತಾ ಇಲಾಖೆಯಲ್ಲಿ ಸರಪಡಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.