ರಾಜ್ಯಪಾಲರನ್ನು ಭೇಟಿಯಾದ ಸಚಿವ ಎಚ್​.ಕೆ ಪಾಟೀಲ್​ ನಿಯೋಗ; ಗವರ್ನರ್​ ಷರತ್ತಿಗೆ ಸರ್ಕಾರ ನಕಾರ 
ರಾಜ್ಯ

ರಾಜ್ಯಪಾಲರನ್ನು ಭೇಟಿಯಾದ ಸಚಿವ ಎಚ್​.ಕೆ ಪಾಟೀಲ್​ ನಿಯೋಗ; ಗವರ್ನರ್​ ಷರತ್ತಿಗೆ ಸರ್ಕಾರ ನಕಾರ | H.K.Patil meet Governor

ಬೆಂಗಳೂರು: ನಾಳೆಯಿಂದ ಆರಂಭವಾಗುವ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್(H.K.Patil meet Governor)​ ನಿರಾಕರಿಸಿದ ಹಿನ್ನಲೆ, ಕಾನೂನು ಸಚಿವ ಹೆಚ್​.ಕೆ ಪಾಟೀಲ್​ ನೇತೃತ್ವದ ನಿಯೋಗ ಭೇಟಿ ಮಾಡಿತ್ತು. ಇದಕ್ಕೆ ರಾಜ್ಯಪಾಲರು ಕೇಲವು ಷರತ್ತುಗಳನ್ನು ವಿಧಿಸಿದ್ದು, ಈ ಸಲಹೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. 
ಈ ಬಗ್ಗೆ ಲೋಕಭವನ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್​.ಕೆ ಪಾಟೀಲ್​, ರಾಜ್ಯಪಾಲರಿಗೆ ಕೆಲವು ಪ್ಯಾರಾಗಳ ಬಗ್ಗೆ ತಮ್ಮದೇ ಅದಂತಹ ವಿನಾಯಿತಿಗಳಿವೆ. ಅಲ್ಲದೆ, ಅವುಗಳಲ್ಲಿ ಕೆಲವು ಮಾರ್ಪಡುಗಳನ್ನು ಮಾಡದಿದ್ದರೆ, ನಾವು ಇಂತಹ ಸಂದರ್ಭಗಳಲ್ಲಿ ಚರ್ಚೆ ಮಾಡುತ್ತೇವೆ. ಆದರೆ, ನಿರ್ದಿಷ್ಟವಾಗಿ ಪ್ಯಾರಾಗಳನ್ನೇ ಕೈಬಿಡಬೇಕಂದ್ರೆ, ಅದು ಸರ್ಕಾರ ನಿರ್ಧಾರದ ವಿರುದ್ಧ ಹೋದಂತಾಗುತ್ತದೆ.
ಮುಂದುವರೆದು ಮಾತನಾಡಿರುವ ಕಾನೂನು ಸಚಿವರು, ರಾಜ್ಯಪಾಲರು ಹಲವು ಪ್ಯಾರಾಗಳನ್ನು ಕೈಬಿಡಬೇಕು ಎನ್ನುವ ಅಭಿಪ್ರಾಯ ಸೂಕ್ತವಲ್ಲ ಎನ್ನುವುದು ನಮ್ಮ ನಿಲುವಾಗಿತ್ತು. ಅವರು ಕೂಡ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದು, ನಾವು ನಮ್ಮ ವಿಚಾರಗಳನ್ನು ಮಂಡಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿರುವ ವಸ್ತುಸ್ಥಿತಿ, ಅಲ್ಲದೆ, ನರೇಗಾದಂತಹ ಯೋಜನೆಯನ್ನು ಜಿ ರಾಮ್​ ಜಿ ಎಂದು ಮರುನಾಮಕರಣ  ಮಾಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಮತ್ತು ಕೃಷಿ ಕಾರ್ಮಿಕರ ಕೆಲಸದ ಹಕ್ಕನ್ನು ಸಹ ಕಿತ್ತುಕೊಂಡಿದೆ. ಇಂತಹ ಮಹತ್ವದ ವಿಷಯದ ಬಗ್ಗೆ ನಾವು ಧ್ವನಿ ಎತ್ತಬಾರದೇ ಎಂದು ಸಚಿವ ಹೆಚ್​.ಕೆ ಪಾಟೀಲ್​ ಪ್ರಶ್ನಿಸಿದ್ದಾರೆ.