ರಾಜ್ಯ ಗುತ್ತಿಗೆದಾರರ ಸಂಘ 
ರಾಜ್ಯ

ರಾಜ್ಯ ಗುತ್ತಿಗೆದಾರರ ಸಂಘದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಬೇಡಿಕೆ ಈಡೇರಿಕೆ ಹಾಗೂ ಬಾಕಿ ಬಿಡುಗಡೆ ಕೊಡದಿದ್ದರೆ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಮಾ.5ರಿಂದ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ವಾತನಾಡಿ, ಕಾಮಗಾರಿ ನಿರ್ವಹಿಸಿದ್ದ ಬಾಕಿ ಬಿಲ್ ಬಿಡುಗಡೆ ಮಾಡಲು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕ ಪರ್ಸೆಂಟೇಜ್ ನೀಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ .ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 37,370.76 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಡುಗಡೆಗೆ ಎಷ್ಟು ಪರ್ಸೆಂಟೇಜ್ ಹಣ ನೀಡಬೇಕಾಗಿದೆ ಎಂಬುದನ್ನು ಈಗ ಹೇಳುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಗುತ್ತಿಗೆದಾರರ ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಿ. ಆ ಸಭೆಯಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೆ ಎಲ್ಲ ಮಾಹಿತಿ ನೀಡಲಾಗುವುದು. ಗುತ್ತಿಗೆದಾರರ ಕಷ್ಟಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.
ಬಾಕಿ ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆಯಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಗೆ ಸಮಯವಕಾಶ ಕೇಳಲಾಗಿದೆ. ಶ್ರೀಘದಲ್ಲೇ ರಾಜ್ಯಪಾಲರನ್ನು ಭೇಟಿ ವಾಡಿ ಮನವಿ ಪತ್ರ ಸಲ್ಲಿಕೆ ವಾಡುವುದಾಗಿ ತಿಳಿಸಿದರು.
ಮಧ್ಯವರ್ತಿಗಳ ದರ್ಬಾರ್
ನಗರಾಭಿವದ್ಧಿ ಇಲಾಖೆಯಲ್ಲಿ ಮಧ್ಯರ್ವತಿಗಳ ಹಾವಳಿ ಹೆಚ್ಚಾಗಿದ್ದು, ಮಧ್ಯವರ್ತಿಗಳೇ ಇಂಜಿನಿಯರ್‌ಗಳನ್ನು ತಾವಿರುವ ಜಾಗಕ್ಕೆ ಕೆರೆಯಿಸಿಕೊಳ್ಳುತ್ತಾರೆ. ಅವರು ಹೇಳಿದವರಿಗೆ ಗುತ್ತಿಗೆ ನೀಡಲಾಗುತ್ತಿದೆ. ಆರ್.ಆರ್.ನಗರ ಮತ್ತು ಆರ್.ಟಿ ನಗರಕ್ಕೆ ಇಲಾಖಾವಾರು ಇಂಜಿನಿಯರ್ ಕರೆಸಿಕೊಳ್ಳಲಾಗುತ್ತಿದೆ. ಈ ರೀತಿಯ ಪರಿಸ್ಥಿತಿ ಈ ಹಿಂದೆ ನೋಡಿರಲಿಲ್ಲ ಎಂದು ಆರ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ನಮ್ಮನ್ನು ಕೆಣುಕಬೇಡಿ
ನಮ್ಮ ಹಣಕ್ಕೆ ಸರ್ಕಾರ ಗ್ಯಾರಂಟಿ ನೀಡಬೇಕು. ನಮ್ಮನ್ನು ಕೆಣಕುವ ಕೆಲಸ ಸರ್ಕಾರದಿಂದ ಆಗಬಾರದು. ಲೋಕೋಪಯೋಗಿ ಇಲಾಖೆ ಮತ್ತು ಜಿಬಿಎ ಹೊರತುಪಡಿಸಿ ಬೇರೆ ಯಾವುದೇ ಇಲಾಖೆಯಲ್ಲಿ ಜ್ಯೇಷ್ಠತೆ ಪಾಲಿಸುತ್ತಿಲ್ಲ. ಸಿಎಂ, ಡಿಸಿಎಂ ಹಾಗೂ ವಿವಿಧ ಇಲಾಖೆಗಳ ಸಚಿವರನ್ನು ಎರೆಡೆರಡು ಬಾರಿ ಭೇಟಿ ವಾಡಿ ಮನವಿ ವಾಡಿದರೂ ಗುತ್ತಿಗೆದಾರರ ಸಂಕಷ್ಟಗಳನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬಾಕಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಈಗಗಾಲೇ ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರರೊಬ್ಬರು ವಿಷ ಸೇವಿಸಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ. ನಂದಕುವಾರ್ ಆಕ್ರೋಶ ವ್ಯಕ್ತಪಡಿಸಿದರು.
ಒಂದೇ ಒಂದು ರೂ. ಟೆಂಡರ್ ಆಗಿಲ್ಲ
ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಮೀಸರಿಸಲಾಗಿದೆ. ಆದರೆ ಹೊಸ ಬಜೆಟ್ ಬಂದರೂ ಈವರೆಗೆ ಒಂದೇ ಒಂದು ರೂಪಾಯಿ ಟೆಂಡರ್ ಕರೆದಿಲ್ಲ ಎಂದು ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಬೇಸರ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕಕ್ಕೆ ಬಹಳ ಅನ್ಯಾಯ ಆಗುತ್ತಿದೆ. ಏಳು ಮಂದಿ ಸಚಿವರಿದ್ದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಎಲ್ಲ ಸಚಿವರನ್ನು ಭೇಟಿ ವಾಡಿ ಸಮಸ್ಯೆ ಹೇಳಿಕೊಂಡು ಸಾಕಾಗಿದೆ ಎಂದು ದೂರಿದರು.
ಬಾಕಿ ಹಣ (ಕೋಟಿ ರೂ.ಗಳಲ್ಲಿ)
ಜಲಸಂಪನ್ಮೂಲ ಇಲಾಖೆ 13,000
ಲೋಕೋಪಯೋಗಿ ಇಲಾಖೆ 8,370
ಆರ್.ಡಿ.ಪಿ.ಆರ್ ಇಲಾಖೆ 3,800
ಸಣ್ಣ ನೀರಾವರಿ ಇಲಾಖೆ 3,000
ವಸತಿ ಮತ್ತು ವಕ್ಫ್ 2,600
ಜಿಬಿಎ 2,600
ನಗರಾಭಿವದ್ಧಿ ಇಲಾಖೆ 2,000
ಕಾರ್ಮಿಕ ಇಲಾಖೆ 2,000
ಒಟ್ಟು ಮೊತ್ತ 37,370