ಬೆಂಗಳೂರು: ರಾಜ್ಯ ಆಹಾರ ಸುರಕ್ಷತಾಧಿಕಾರಿಗಳ ಸಂಘಕ್ಕೆ ಹಿರಿಯ ಆಹಾರ ಸುರಕ್ಷತಾಧಿಕಾರಿ ಎಲ್. ಶಿವಮೂರ್ತಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ವಿ.ಶ್ರೀನಿಧಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಉದಯ್‌ಕುಮಾರ್, ಕೋಶಾಧ್ಯಕ್ಷರಾಗಿ ಎ.ಶ್ರೀನಿವಾಸಲು. ಜಂಟಿ ಕಾರ್ಯದರ್ಶಿಗಳಾಗಿ ಕೆ.ಚಂದ್ರಶೇಖರ್. ಕೆ.ಕೆ.ಸುರೇಶ್, ಅ.ಎ.ಆನಂದ, ಶಂಕರಗೌಡ ಎಸ್. ಕಂತಲಗಾವಿ, ನಿರ್ದೇಶಕರಗಳಾಗಿ ಎಚ್.ಎನ್. ಸತೀಶ್, ಬಿ ಆರ್.ಮಹಾಲಿಂಗಯ್ಯ. ಕೆ. ರವಿಕುಮಾರ್, ಎಂ.ಎನ್.ಅಮರನಾಥ್, ಎನ್. ರಾಜೇಶ್ ಮತ್ತು ಮಹಿಳಾ ನಿರ್ದೇಶಕಿಯಾಗಿ ಡಿ.ಅನುಸೂಯ ಆಯ್ಕೆಯಾದರು.
ಇದೇ ವೇಳೆ ಸಂಘದ ಲಾಂಛನ ಮತ್ತು ಡೈರಿ ಬಿಡುಗಡೆ ಮಾಡಲಾಯಿತು. ನಿವೃತ್ತ ಆಹಾರ ಸುರಕ್ಷತಾಧಿಕಾರಿಗಳಾದ ರಾಜು, ಎಚ್.ಬಿ.ಶಿವಕುಮಾರ್. ನಾಗರಾಜು. ಅರುಣ್ ವಿ.ಕಾಶಿ ಭಟ್, ಸಿ.ಬಿ,ಬೆಂಗೇರಿ ಅವರನ್ನು ಸನ್ಮಾನಿಸಲಾಯಿತು.ರಾಜ್ಯದ ಎಲ್ಲ ತಾಲೂಕಿನ ಆಹಾರ ಸುರಕ್ಷತಾಧಿಗಳು ಉಪಸ್ಥಿತರಿದ್ದರು.