ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುಣಾಲ್ ಕಾಮ್ರಾ ಅವರ ಶೋ ರದ್ದು 
ರಾಜ್ಯ

ಹಿಂದೂ ಧರ್ಮದ ಅವಹೇಳನ..: ಕುಣಾಲ್​ ಕಾಮ್ರಾಗೆ ಸಿಲಿಕಾನ್​ ಸಿಟಿ ಛೀಮಾರಿ; ವೈಟ್​ಫೀಲ್ಡ್​​ನಲ್ಲಿ ನಡೆಯಬೇಕಿದ್ದ ಕಾಮೆಡಿ ಶೋ ಕ್ಯಾನ್ಸಲ್​! Kunal Kamra Show Cancel

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುಣಾಲ್ ಕಾಮ್ರಾ ಅವರ ಶೋ ರದ್ದು
  • ಹಿಂದೂ ಧರ್ಮದ ಅವಹೇಳನದ ಆರೋಪ ಹಾಗೂ ಪ್ರತಿಭಟನೆಯ ಎಚ್ಚರಿಕೆ
  • ವೈಟ್‌ಫೀಲ್ಡ್‌ನಲ್ಲಿ ನಡೆಯಬೇಕಿದ್ದ ಶೋ ಕೋರಮಂಗಲಕ್ಕೆ ಸ್ಥಳಾಂತರ
ಬೆಂಗಳೂರು: ಸನಾತನ ಹಿಂದೂ ಧರ್ಮದ ಕುರಿತು ವ್ಯಂಗ್ಯವಾಗಿ ಮಾತನಾಡುತ್ತಾ, ಸದಾ ವಿವಾಧದಲ್ಲಿರುವ ಸ್ಟ್ಯಾಂಡ್-ಅಪ್ ಕಾಮೆಡಿಯನ್​ ಕುಣಾನ್​ ಕಾಮ್ರಾ (Kunal Kamra Show Cancel) ಅವರ ಬೆಂಗಳೂರಿನಲ್ಲಿ ನಡೆಯಬೇಕಿದ್ದ, ಕಾರ್ಯಕ್ರಮಗಳನ್ನು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಣಾಲ್​ ಕಾಮ್ರಾ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸದಂತೆ ಕೆಲ ಹಿಂದೂ ಪರ ಸಂಘಟನೆಗಳು ಪೊಲೀಸರಲ್ಲಿ ದೂರನ್ನು ನೀಡಿರುವ ಹಿನ್ನಲೆಯಲ್ಲಿ ವೈಟ್​ಫೀಲ್ಡ್​​ನಲ್ಲಿ ನಡೆಯಬೇಕಿದ್ದ, ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ.

ನಿಮ್ಮ ಹಣವನ್ನು ರಿಫಂಡ್​ ಮಾಡುತ್ತೇವೆ!

ಕುಣಾಲ್​ ಕಾಮ್ರಾ ಹಿಂದೂ ದೇವರೆಗಳಿಗೆ ಹಾಗೂ ಸನಾತನ ಧರ್ಮದ ಕುರಿತು ಅಪಹಾಸ್ಯವನ್ನು ಈ ಮೊದಲು ಮಾಡಿದ್ದಾನೆ. ಹೀಗಾಗಿ ಅವರ ಕಾರ್ಯಕ್ರಮ ವೈಟ್​ಫೀಲ್ಡ್​​ನಲ್ಲಿ ನಡೆದರೆ, ಜನ ದಾಂದಕೆ ಎಬ್ಬಿಸುವ ಸನ್ನಿವೇಶ ಎದುರಾಗಬಹುದೆಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ದೂರನ್ನು ನೀಡಿದ್ದ ಹಿನ್ನಲೆ ಕಾಮ್ರಾನ ಕಾರ್ಯಕ್ರಮ ರದ್ದಾಗಿದೆ.

ಈ ರದ್ದತಿಗೆ ಪ್ರತಿಕ್ರಿಯಿಸಿರುವ ಕುಣಾಲ್​ ಕಾಮ್ರಾ, ಕೆಲ ಅಡೆತಡೆಗಳಿಂದ ವೈಟ್​ಫೀಲ್ಡ್​​ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದ್ದು, ಇದನ್ನು ನಾವು ಕೋರಮಂಗಲದಲ್ಲಿ ನಡೆಸಲಿದ್ದೇವೆ. ಈಗಾಗಲೇ ಟಿಕೆಟ್​ಗಳನ್ನು ಪಡೆದವರಿಗೆ ಅವರ ಹಣವನ್ನು ಮರುಳಿಸಲು ಮುಂದಾಗಿದ್ದು, ಕೋರಮಂಗಲದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಿ, ಆನಂದಿಸಿ ಎಂದು ಅವರು ಬರೆದುಕೊಂಡಿದ್ದಾರೆ.


ಅವನ ಕಾರ್ಯಕ್ರಮ ಇಲ್ಲಿ ನಡೆಯೊಲ್ಲ!


ಕುಣಾಲ್​ ಕಾಮ್ರಾ ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿ ಕಾಮೆಡಿ ಕಾರ್ಯಕ್ರಮ ನಡೆಸಲು ನಮ್ಮ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಬಿಡೊಲ್ಲ. ಅವನು ನಮ್ಮ ಧರ್ಮ, ನಮ್ಮ ದೇವರಾದ ಪ್ರಭು ಶ್ರೀರಾಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಅವನ ಕಾರ್ಯಕ್ರಮ ಇಲ್ಲಿ ನಡೆದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಂದರ್ಭ ಎದುರಾಗಲಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಮೂದಿಸಲಾಗಿದೆ, (ಏಜನ್ಸೀಸ್​).