‘ಕೆಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. 
ರಾಜ್ಯ

ಕೆಎನ್‌ಎಸ್ ನಿವೇಶನ ಖರೀದಿಸಿದ ನೂರಾರು ಜನರು: 2024ರ ಹಳೆಯ ಬೆಲೆಯಲ್ಲೇ ಮಾರಾಟ- kns plot

ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 19 ವರ್ಷಗಳ ಅನುಭವ ಹೊಂದಿರುವ ಬೆಂಗಳೂರು ಮೂಲದ ‘ಕೆಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ., ನಾಯಂಡಹಳ್ಳಿಯ ಎಂ.ಆರ್. ಕನ್ವೆನ್ಶನ್ ಹಾಲ್‌ನಲ್ಲಿ ಆಯೋಜಿಸಿರುವ 2 ದಿನಗಳ ‘ದಿ ಗ್ರೇಟ್ ಪ್ಲಾಟ್ ಫೆಸ್ಟ್’ಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಮೊದಲ ದಿನ ನೂರಾರು ಜನರು, ಕುಟುಂಬದ ಸದಸ್ಯರೊಂದಿಗೆ ಮೇಳಕ್ಕೆ ಭೇಟಿ ಕೊಟ್ಟು ನಿವೇಶನ ಖರೀದಿಸಿ ಖುಷಿಪಟ್ಟರು. ಭಾನುವಾರ ಮೇಳಕ್ಕೆ ತೆರೆಬೀಳಲಿದೆ.

600 ಚದರಡಿ ವಿಸ್ತೀರ್ಣದ ನಿವೇಶನ 31 ಲಕ್ಷ ರೂ.ನಿಂದ ಆರಂಭವಾಗಲಿದೆ. ಸ್ಥಳದಲ್ಲಿ ನಿವೇಶನ ಬುಕಿಂಗ್ ಮಾಡಿದವರಿಗೆ ಆಕರ್ಷಕ ರಿಯಾಯಿತಿ ಮತ್ತು 10 ಲಕ್ಷ ರೂ.ವರೆಗೆ ಪ್ರಯೋಜನಗಳು ದೊರೆಯಲಿವೆ. ಹೆಚ್ಚುವರಿಯಾಗಿ 50 ಸಾವಿರ ರೂ.ಮೌಲ್ಯದ ಉಡುಗೊರೆಗಳು ಸಿಗಲಿದೆ. ಲಕ್ಕಿ ಡ್ರಾ ಮೂಲಕ ವಿದ್ಯುತ್‌ಚಾಲಿತ (ಇವಿ) ಸ್ಕೂಟರ್ ಮತ್ತು ವಿದೇಶ ಪ್ರವಾಸ ಗೆಲ್ಲುವ ಅವಕಾಶ ಇದೆ. 2024ರ ಹಳೆಯ ಬೆಲೆಯಲ್ಲೇ ನಿವೇಶನ ಖರೀದಿಸುವ ವಿಶೇಷ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ.
ಮೈಸೂರು ರಸ್ತೆ, ನೆಲಮಂಗಲ, ಕೆಂಗೇರಿ, ಸರ್ಜಾಪುರ, ಹೆಣ್ಣೂರು ರಸ್ತೆ, ಜಿಗಣಿ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಿಡಿಎ, ಬಿಎಂಆರ್‌ಡಿಎ ಮತ್ತು ರೇರಾ ಸೇರಿ ಸಂಬಂಧಿತ ಪ್ರಾಧಿಕಾರಗಳಿಂದ ಅಗತ್ಯ ಕಾನೂನುಬದ್ಧ ಅನುಮೋದನೆ ಹೊಂದಿರುವ ಪ್ರೀಮಿಯಂ ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಈ ಮೇಲಿನ ವಸತಿ ಯೋಜನೆಗಳ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಿದೆ.
ಲೇಔಟ್‌ನಲ್ಲಿ ವಿದ್ಯುತ್, ಬೀದಿದೀಪ, ನೀರಿನ ಸಂಪರ್ಕ, ರಸ್ತೆ, ಟ್ರೀಲೈನ್ ರಸ್ತೆ, ಬಾಕ್ಸ್ ಡ್ರೈನ್, ಮಳೆನೀರು ಕೊಯ್ಲು, ವಾಕಿಂಗ್- ಜಾಗಿಂಗ್ ಟ್ರ್ಯಾಕ್, ಉದ್ಯಾನ, ಭೂಗತ ಕೇಬಲ್, ದಿನದ 24 ಗಂಟೆ ಭದ್ರತೆ ಸೇರಿ ಗೇಟೆಡ್ ಕಮ್ಯೂನಿಟಿ ಸೌಲಭ್ಯ ಹೊಂದಿದೆ.
‘ಕೆಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ, ಗ್ರಾಹಕರ ನಂಬಿಕಸ್ಥ ಸಂಸ್ಥೆಯಾಗಿದೆ. 2013ರಿಂದ ಇದುವರೆಗೆ ನಾನು 4 ನಿವೇಶನ ಖರೀದಿಸಿದ್ದೇನೆ. ಎಲ್ಲ ದಾಖಲೆಗಳು ಪಾರದರ್ಶಕವಾಗಿವೆ. ಇಂತಹ ಮೇಳದಿಂದ ನಿವೇಶನ ಖರೀದಿಸಲು ಗ್ರಾಹಕರಿಗೆ ಅನುಕೂಲವಾಗಲಿದೆ.
ಪ್ರಸನ್ನ, ವಿಲ್‌ಕಾರ್ಟ್ ಸೊಲ್ಯುಷನ್ ಸಿಇಒ.