ಕೊಲೆಯಾದ ಕಿರಣ್  
ರಾಜ್ಯ

ಬೆಂಗಳೂರಿನಲ್ಲಿ ಭಯಾನಕ ಘಟನೆ: ಪ್ರಿಯಕರನನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಗೆಳತಿ | Bengaluru

Bengaluru: ನಗರದಲ್ಲಿ ಭಯಾನಕ ಘಟನೆಯೊಂದು ವರದಿಯಾಗಿದ್ದು, ತನ್ನನ್ನು ಅವೈಡ್ ಮಾಡ್ತಿದ್ದಾನೆ, ಮದುವೆಯಾಗಲ್ಲ ಎಂದು ಭಾವಿಸಿದ ಯುವತಿ, ಪ್ರಿಯಕರನಿಗೆ ವೆಸ್ಟರ್ನ್​ ಸ್ಟೈಲ್​ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ಕುರ್ಚಿಯಲ್ಲಿ ಕೂರಿಸಿ ಕಣ್ಣಿಗೆ ಬಟ್ಟೆ ಮತ್ತು ಕೈಕಾಲುಗಳಿಗೆ ಹಗ್ಗ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.
ದಕ್ಷಿಣ ಬೆಂಗಳೂರಿನ ಅಂಜನಾಪುರದಲ್ಲಿ ಮಂಗಳವಾರ(ಏ. 21) ಘಟನೆ ನಡೆದಿದೆ. ಕಿರಣ್ ಮೃತಪಟ್ಟ ಯುವಕ. 27 ವರ್ಷ ವಯಸ್ಸಿನ ಪ್ರೇರಣಾ ಕೊಲೆ ಮಾಡಿದ ಪ್ರೇಯಸಿ. ಇಬ್ಬರು ರಾಜಾಜಿನಗರದ ಟೆಲಿಕಾಂ ಆಪರೇಟೆರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ತನ್ನನ್ನು ಕಿರಣ್ ನಿರ್ಲಕ್ಷ್ಯ ಮಾಡ್ತಿದ್ದು, ಮದುವೆಯಾಗಲ್ಲ ಎಂದು ಪ್ರೇರಣಾ ಭಾವಿಸಿದ್ದಾಳೆ ಎನ್ನಲಾಗಿದ್ದು, ಇಂದು ಒಬ್ಬಂಟಿಯಾಗಿದ್ದಾಗ ಕಿರಣ್​ನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಮನೆಗೆ ಬಂದ ಬಳಿಕ ಇಬ್ಬರು ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ನಂತರ ಕಿರಣ್​ನನ್ನು ಕುರ್ಚಿಯಲ್ಲಿ ಕೂರಿಸಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಬಳಿಕ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದು, ಕೊಲೆಯ‘ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ.
ಬಳಿಕ ಕೈಕಾಲುಗಳನ್ನು ಕಟ್ಟಿ ಹಾಕಲು ಹೋದಾಗ, ಕಿರಣ್ ಆಕ್ಷೇಪಿಸಿದ್ದಾನೆ. ಆಗ ವಿದೇಶಗಳಲ್ಲಿ ಪ್ರಪೋಸ್ ಮಾಡುವ ರೀತಿ ಪ್ರಪೋಸ್ ಮಾಡ್ತೀನಿ ಎಂದು ಹೇಳಿದ್ದಾಳೆ. ಆಗ ಕಿರಣ್ ಸುಮ್ಮನಾದಾಗ ತಾನು ಮೊದಲೇ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ ಡಿ.ಎಲ್. ನಾಗೇಶ್, ನಾವು ಯುವತಿಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆಗೆ ನಡೆಸಿದಾಗ ಆಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ತನ್ನನ್ನು ಅವೈಡ್ ಮಾಡ್ತಿದ್ದಾನೆ ಎಂದು ಕೊಲೆ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).