ರಾಜ್ಯ

ಮಾಜಿ ಸಿಎಂ ಸಿದ್ದು ವಿರುದ್ಧದ ಸ್ಟಿಂಗ್ ಆಪರೇಷನ್ ಸಂಚು: ಮಹಾನಾಯಕನ ಪಾತ್ರದ ಬಗ್ಗೆ ಎಚ್​​ಡಿಕೆ ಗಂಭೀರ ಆರೋಪ!

ಬೆಂಗಳೂರು: ಸ್ಟಿಂಗ್ ಆಪರೇಷನ್ (Sting Operation) ವಿಚಾರವಾಗಿ ಸ್ಪಷ್ಟನೆ ನೀಡದೆ ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಆ ಕಾಲ ಯಾವಾಗ ಬರುತ್ತದೆ? ಇದರಲ್ಲಿ ಮಹಾನಾಯಕರ ಪಾತ್ರ ಇರುವುದರಿಂದಲೇ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ಸ್ಟಿಂಗ್ ಆಪರೇಷನ್ (Sting Operation) ವಿಚಾರವಾಗಿ ಸ್ಪಷ್ಟನೆ ನೀಡದೆ ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಆ ಕಾಲ ಯಾವಾಗ ಬರುತ್ತದೆ? ಇದರಲ್ಲಿ ಮಹಾನಾಯಕರ ಪಾತ್ರ ಇರುವುದರಿಂದಲೇ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​​ಡಿಕೆ, ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧವೇ ಅಪಪ್ರಚಾರ ನಡೆಸಲು ಈ ರೀತಿ ಸ್ಟಿಂಗ್ ಆಪರೇಷನ್ ಮಾಡಿಸಿರುವುದು ಅತ್ಯಂತ ಖಂಡನೀಯ ಎಂದರು.

ಅತ್ಯಂತ ಗೌರವಯುತವಾಗಿ ನಡೆದಿದ್ದ ಈ ರಾಜ್ಯದಲ್ಲಿ, ಸ್ವತಃ ಸಂಪುಟ ಸಭೆಯಲ್ಲೇ ಮಂತ್ರಿಗಳನ್ನು ಉಲ್ಲೇಖಿಸಿ ಈ ಕುರಿತು ಮಾತನಾಡಲಾಗಿದ್ದು, ಈ ವಿಷಯವನ್ನು ಬಹಿರಂಗ ಚರ್ಚೆಗೆ ಬಿಟ್ಟವರು ಯಾರು..? ನೀವೇ ಸ್ಟಿಂಗ್ ಆಪರೇಷನ್ ಫೈಲ್ ಹಿಡ್ಕೊಂಡು ತಿರುಗಾಡುವುದನ್ನು ತೋರಿಸಿದ್ದೀರಿ ಮತ್ತು ನಿಮ್ಮವರೇ ಇದರ ಮೂಲವನ್ನು ಲೀಕ್ ಮಾಡಿಸಿರುವುದು ಸ್ಪಷ್ಟವಾಗಿದೆ. ಇದರಿಂದ ಯಾರ ಮರ್ಯಾದೆ ಹೋಗುತ್ತಿದೆ..? ಎಂದು ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:ಜ್ಞಾನೇಶ್ ಕುಮಾರ್ ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡ್ತಿದೆ: ನಮ್ಮ ಪ್ರತಿಭಟನೆಯಿಂದ ಸಿಇಸಿಗೆ ನಿದ್ದೆ ಬರ್ತಿಲ್ಲ ಎಂದ ರಾಹುಲ್​ ಗಾಂಧಿ! | Rahul Gandhi

ಅತಿ ವಿನಯಂ ದೂರ್ತ ಲಕ್ಷಣಂ ಎನ್ನುವಂತೆ, ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಬಗ್ಗೆಯೇ ಈ ರೀತಿಯ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ, ಅವರಿಂದಲೇ ಗೆದ್ದು ಬಂದ ಕಾಂಗ್ರೆಸ್ ನಾಯಕರು ಇಂದು ಬಾಯಿ ಬಿಡದೆ ಮೌನಕ್ಕೆ ಶರಣಾಗಿರುವುದು ಆಶ್ಚರ್ಯ ತಂದಿದೆ ಎಂದ ಕೇಂದ್ರ ಸಚಿವರು, ಮಾಜಿ ಸಿಎಂ ಅವರೊಂದಿಗೆ ಹಳೆಯ ಸಂಬಂಧ ಹಾಗೂ ಅನುಕಂಪ ಇರುವ ಕಾರಣಕ್ಕಾಗಿಯೇ ತಾವು ಧ್ವನಿ ಎತ್ತಿರುವುದಾಗಿ ಸ್ಪಷ್ಟಪಡಿಸಿದರು. ಈ ಸ್ಟಿಂಗ್ ಮಾಡಿದವನು ಯಾರು..? ಆ ವ್ಯಕ್ತಿಗೆ ಇನ್ನೂವರೆಗೆ ಪೊಲೀಸ್ ರಕ್ಷಣೆ ಕೊಟ್ಟುಕೊಂಡು ಕಾಪಾಡುತ್ತಿರುವುದೇಕೆ..? ಎಂದು ಪ್ರಶ್ನಿಸಿದರು.

ಎಸ್​ಐಆರ್​ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಎಸ್‌ಐಆರ್ ಪ್ರತಿಭಟನೆಯನ್ನು ಲೇವಡಿ ಮಾಡಿದ ಕುಮಾರಸ್ವಾಮಿ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಹಜ ಪ್ರಕ್ರಿಯೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭೇಟಿಗೆ ಸಮಯ ಕೋರಿರುವ ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೂಲಭೂತ ಶಿಷ್ಟಾಚಾರವೂ (ಪ್ರೋಟೋಕಾಲ್) ತಿಳಿದಿಲ್ಲವೇ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪರಿಶೀಲನೆಯನ್ನು ಉಲ್ಲೇಖಿಸಿದ ಎಚ್‌ಡಿಕೆ, ಅಕ್ರಮ ತಪ್ಪಿಸಲು ಹಾಗೂ ಮೃತಪಟ್ಟವರ ಖಾತೆಗೆ ಹಣ ಜಮೆಯಾಗುವುದನ್ನು ತಡೆಯಲು ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದು ನೀವೇ ಹೇಳುತ್ತೀರಿ. ಆ ತತ್ವ ನಿಮಗೆ ಅನ್ವಯಿಸುವುದಾದರೆ, ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಗೆ ಯಾಕೆ ಅನ್ವಯಿಸುವುದಿಲ್ಲ? ಎಂದು ಸರ್ಕಾರದ ದ್ವಂದ್ವ ನಿಲುವನ್ನು ತರಾಟೆಗೆ ತೆಗೆದುಕೊಂಡರು.

ಅಂಥವರ ವಿರುದ್ಧವೇ ಈ ರೀತಿ ಸಂಚು ರೂಪಿಸಿ, ಸ್ಟಿಂಗ್ ಮಾಡಿದವನಿಗೆ ಇನ್ನೂ ಪೊಲೀಸ್ ರಕ್ಷಣೆ ಕೊಟ್ಟು ಕಾಯುತ್ತಿರುವುದೇಕೆ?" ಎಂದು ಕಟುವಾಗಿ ಪ್ರಶ್ನಿಸಿದರು. ಕಾಂಗ್ರೆಸ್ ನವರು ರಾಜಕೀಯ ಕಾರಣಕ್ಕೆ ಮೌನಕ್ಕೆ ಶರಣಾಗಬಹುದು, ಆದರೆ ಸಿದ್ದರಾಮಯ್ಯ ಅವರ ಜತೆ ಹಳೆಯ ಅನುಕಂಪ ಹಾಗೂ ಸಂಬಂಧವಿರುವ ಕಾರಣ ತಾವು ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ನಡೆದ ಫೋಟೋ ಶೂಟ್ ಕುರಿತು ವ್ಯಂಗ್ಯವಾಡಿದ ಎಚ್‌ಡಿಕೆ, ಮೈಸೂರು ಅರಮನೆಯಲ್ಲಿ ಕೂತು ಫೋಟೋ ಶೂಟ್ ಮಾಡಿಸುತ್ತೀರಿ, ಬದಲಿಗೆ ಹಿಂದಕ್ಕೆ ಹೋಗಿ ದೊಡ್ಡ ಸಿಂಹಾಸನ ಹಾಕಿಕೊಂಡು ಕೂತಿದ್ದರೆ ಆಗುತ್ತಿತ್ತು, ಅದು ಯಾವುದೋ ಹೊಸ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಹೊರಟಿದ್ದಾರೆ. ಮೊದಲೇ ಹೇಳಿದಂತೆ ಇದು ಅತಿ ವಿನಯಂ ದೂರ್ತ ಲಕ್ಷಣಂ ಎಂದು ಲೇವಡಿ ಮಾಡಿದರು.