ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್  
ರಾಜ್ಯ

ಸ್ಟಿಂಗ್ ಆಪರೇಷನ್ ಹುಟ್ಟುಹಾಕಿದ್ದೇ ಆರ್​ಎಸ್​ಎಸ್​, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ: ಬಿ ಕೆ ಹರಿಪ್ರಸಾದ್ ಗಂಭೀರ ಆರೋಪ

ಶಿವಮೊಗ್ಗ: ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಘಟಕವಾಗಿದ್ದು, ದೇಶಕ್ಕಿರುವ ಅತ್ಯಂತ ದೊಡ್ಡ ಕಂಟಕ ಅಂದರೆ ಅದು ಆರ್‌ಎಸ್‌ಎಸ್. ಈ ನಡುವೆ ರಾಜಕೀಯದಲ್ಲಿ ನಡೆಯುವ ಸ್ಟಿಂಗ್ ಆಪರೇಷನ್ ಕೃತ್ಯಗಳ ಮೂಲ ಪಿತಾಮಹ ಕೂಡ ಅದೇ ಸಂಘಟನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ಶಿವಮೊಗ್ಗ: ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಘಟಕವಾಗಿದ್ದು, ದೇಶಕ್ಕಿರುವ ಅತ್ಯಂತ ದೊಡ್ಡ ಕಂಟಕ ಅಂದರೆ ಅದು ಆರ್‌ಎಸ್‌ಎಸ್. ಈ ನಡುವೆ ರಾಜಕೀಯದಲ್ಲಿ ನಡೆಯುವ ಸ್ಟಿಂಗ್ ಆಪರೇಷನ್ ಕೃತ್ಯಗಳ ಮೂಲ ಪಿತಾಮಹ ಕೂಡ ಅದೇ ಸಂಘಟನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಎಂಬ ಕೃತ್ಯವೇನೂ ಇತ್ತೀಚೆಗೆ ರೂಪಗೊಂಡಿದ್ದಲ್ಲ. ಕಿತ್ತೂರು ಹಾಗೂ ದೇವೇಂದ್ರಪ್ಪ ಕಾಳಪ್ಪನವರಿಂದ ಹಿಡಿದು ಬಹಳಷ್ಟು ಜನರು ರಾಜಕೀಯ ಸೇಡು ತೀರಿಸಿಕೊಳ್ಳಲು ಇದನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಸ್ಟಿಂಗ್ ಆಪರೇಷನ್ ಎಂಬ ಸಂಪ್ರದಾಯದ ಕೀರ್ತಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಶಿ ಅವರಿಗೆ ಸಲ್ಲುತ್ತದೆ ಎಂಬ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ:ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!

ಇಂದು ಮಹಾತ್ಮ ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದ್ದು, ಅವರನ್ನು ಕೊಂದಿರುವ ಸಂಘಟನೆಗಳು ದೇಶದ ಮೊಟ್ಟಮೊದಲ ಭಯೋತ್ಪಾದಕ ಸಂಘಟನೆಗಳಾಗಿದ್ದು, ಅವರನ್ನು ಕೊಲೆ ಮಾಡಿದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊಟ್ಟಮೊದಲ ಭಯೋತ್ಪಾದಕನಾಗಿದ್ದಾನೆ. ಬಿಜೆಪಿಯವರು ನಿಜವಾದ ದೇಶಭಕ್ತರಾಗಿದ್ದರೆ ಮತ್ತು ಅವರಿಗೆ ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತ ದೇಶದ ಮೇಲೆ ನಂಬಿಕೆ ಇದ್ದರೆ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಸವಾಲು ಹಾಕಿದರು.

ಆರ್‌ಎಸ್‌ಎಸ್ ಸದಾ ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿತ್ತು, ದೇಶವು ಜಾತ್ಯತೀತವಾಗಿರಬೇಕು ಹಾಗೂ ಎಲ್ಲರೂ ಅನ್ಯೋನ್ಯವಾಗಿ ಬಾಳಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಇದಕ್ಕೆ ತೀರ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ದೂರಿದರು.

ಕಾಂಗ್ರೆಸ್‌ನಲ್ಲಿ ಯಾವುದೇ ಸ್ಲಿಪರ್ ಸೆಲ್‌ಗಳಿಲ್ಲ, ಅಂತಹ ಸೆಲ್‌ಗಳಿರುವುದು ಬಿಜೆಪಿಯಲ್ಲಿ. ಪ್ರಸ್ತುತ ಚರ್ಚೆಯಲ್ಲಿರುವ ಸ್ಟಿಂಗ್ ಆಪರೇಷನ್ ನಡೆಸಿದವರು ಯಾರೇ ಆಗಿದ್ದರೂ, ಸಾಕ್ಷಿ ಸಮೇತ ಸಿಕ್ಕಿಬಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.