ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!

ಮೈಸೂರು: ದಸರಾ ಮಹೋತ್ಸವದ ಹಲವು ಪ್ರಮುಖ ಬೆಳವಣಿಗೆಗಳ ಕುರಿತು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರು ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜೆಟ್ಟಿ ಕಾಳಗ ರದ್ದಾಗಿರುವುದು, ಅಂಬಾರಿ ಹೊತ್ತ ಪ್ರಶಾಂತ ಆನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!
Published on: 

ಮೈಸೂರು: ದಸರಾ ಮಹೋತ್ಸವದ ಹಲವು ಪ್ರಮುಖ ಬೆಳವಣಿಗೆಗಳ ಕುರಿತು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರು ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜೆಟ್ಟಿ ಕಾಳಗ ರದ್ದಾಗಿರುವುದು, ಅಂಬಾರಿ ಹೊತ್ತ ಪ್ರಶಾಂತ ಆನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಸರೆಯಲ್ಲಿ ಜೆಟ್ಟಿ ಕಾಳಗ ರದ್ದಾಗಿರುವ ಕುರಿತು ಮಾತನಾಡಿರುವ ಪ್ರಮೋದಾ ದೇವಿ ಒಡೆಯರ್ ಅವರು, ಇದರಿಂದ ನಾಡಿಗೆ ಯಾವುದೇ ಕೆಡಕು ಆಗುವುದಿಲ್ಲ, ಯಾರು ಈ ವಿಚಾರದಲ್ಲಿ ಆತಂಕ ಪಡಬೇಡಿ ಎಂದು ಸಲಹೆ ನೀಡಿದ್ದಾರೆ. ನಾವು ದೇವರನ್ನು ಮಾತ್ರ ನಂಬಿದ್ದೇವೆ ಹೊರತು ಜ್ಯೋತಿಷ್ಯವನ್ನಲ್ಲ. ಜ್ಯೋತಿಷ್ಯ ನಂಬಿ ನಾವು ಯಾವ ಪೂಜೆಯನ್ನೂ ಮಾಡುವುದಿಲ್ಲ. ಇದಕ್ಕೆ ಏನೇನೋ ಅರ್ಥಗಳನ್ನು ಕಲ್ಪಿಸಬೇಡಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಮೈಸೂರು ದಸರಾ ಇತಿಹಾಸದಲ್ಲೇ ಹಿಂದೆಂದೂ ಹೀಗಾಗಿರಲಿಲ್ಲ! ಪ್ರಥಮ ಬಾರಿಗೆ ವಜ್ರಮುಷ್ಠಿ ಕಾಳಗ ನಿಂತಿದ್ದೇಕೆ? | Mysuru Dasara

ನಮ್ಮ ಮನೆಯ ವಿಧಿವಿಧಾನಗಳು ಆಯಾ ಮೂಹರ್ತಕ್ಕೆ ತಕ್ಕಂತೆ ನಡೆಯಬೇಕೇ ಹೊರತು ಮೂಹರ್ತ ಮೀರಿ ನಡೆಸುವುದಿಲ್ಲ. ಹೀಗಾಗಿ ಜೆಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಲಾಗಿದೆ. ಈ ಎಲ್ಲದರ ಬಗ್ಗೆ ವರದಿಯನ್ನು ತರಿಸಿಕೊಳ್ಳುತ್ತಿದ್ದು, ಎಲ್ಲಿ ಏನೇನಾಯಿತು ಎಂಬ ಸಂಪೂರ್ಣ ಮಾಹಿತಿ ಬಂದ ಬಳಿಕ ಒಂದೆರಡು ದಿನಗಳಲ್ಲಿ ತಾವೇ ವಿವರಣೆ ನೀಡುವುದಾಗಿ ತಿಳಿಸಿದರು.

ಪ್ರಶಾಂತ ಆನೆ ಬಗ್ಗೆ ಆತಂಕ

ಅಂಬಾರಿ ಹೊತ್ತ ಆನೆ ಪ್ರಶಾಂತನ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್ ಅವರು, ಈ ಬಾರಿ ನನಗೆ ಪ್ರಶಾಂತ ಆನೆಯ ಬಗ್ಗೆ ಸ್ವಲ್ಪ ಆತಂಕವಿತ್ತು. ಯಾವ ರೀತಿಯಾಗಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೋ, ಯಾವ ರೀತಿ ನಡೆಯುತ್ತಾನೋ ಎಂಬ ಆತಂಕ ಹಿಂದೆಂದೂ ನನಗೆ ಇರಲಿಲ್ಲ, ಆದರೆ ಈ ಬಾರಿಯೇ ಅಷ್ಟು ಆತಂಕವಿತ್ತು. ಆದರೆ ಎಲ್ಲಾ ಆತಂಕಗಳನ್ನು ಮೀರಿ ಪ್ರಶಾಂತ ಅಚ್ಚುಕಟ್ಟಾಗಿ ಅಂಬಾರಿ ಹೊತ್ತಿದ್ದಾನೆ. ಇದು ನನಗೆ ಬಹಳ ಸಂತೋಷ ತಂದಿದೆ, ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂದು ಸಂತಸಪಟ್ಟರು.

Also Read
ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರ ಅಡ್ಡಿ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!...ಕ್ರಮಕ್ಕೆ ಆಗ್ರಹಿಸಿದ ಎಂಎಲ್‌ಸಿ ಕೆ.ಶಿವಕುಮಾರ್! | Mysuru Dasara
ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!

ಪಕ್ಕದ ರಾಜ್ಯಗಳ ಸಿಎಂ ಬಂದ್ರೆ ತಪ್ಪೇನಿಲ್ಲ: ಯದುವೀರ್ ಒಡೆಯರ್

ದಸರಾ ಶಿಷ್ಟಾಚಾರದ ಕುರಿತು ಮಾತನಾಡಿರುವ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಅವರು, ಮೊದಲು ಶಿಷ್ಟಾಚಾರ ಏನು ಎಂಬುದು ಸರ್ಕಾರ ಸ್ಪಷ್ಟಪಡಿಸಲಿ, ಇಲ್ಲಿ ಶಿಷ್ಟಾಚಾರ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದರು. ಪುಷ್ಪಾರ್ಚನೆ ಮತ್ತು ನಂದಿ ಧ್ವಜ ಪೂಜೆ ವೇಳೆ ಕಡಿಮೆ ಜನವಿದ್ದರೆ ಒಳ್ಳೆಯದು. ಮುಖ್ಯಮಂತ್ರಿಗಳ ಜೊತೆಗೆ ಒಂದಿಬ್ಬರು ಇದ್ದರೆ ಸಾಕು, ಎಲ್ಲರೂ ಅಲ್ಲಿಗೆ ಯಾಕೆ ಹೋಗಬೇಕು..? ಎಲ್ಲಾ ವಿಧಿವಿಧಾನಗಳಿಗೂ ಸ್ಪಷ್ಟ ನಿಯಮಗಳು ಇರಬೇಕು, ಅದನ್ನು ಸರ್ಕಾರವೇ ಮಾಡಲಿ ಎಂದು ಆಗ್ರಹಿಸಿದರು.

ಇನ್ನು ಪುಷ್ಪಾರ್ಚನೆಗೆ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನ ಕರೆದ ವಿಚಾರದಲ್ಲಿ ತಪ್ಪೇನಿಲ್ಲ, ಅತಿಥಿಯಾಗಿ ಸಿಎಂಗಳನ್ನ ಕರೆದ ಮೇಲೆ ಪುಷ್ಪಾರ್ಚನೆಗೆ ಕರೆಯದಿದ್ದರೆ ತಪ್ಪಾಗುತ್ತದೆ, ಆದರೆ ಆ ಆಹ್ವಾನಿತರನ್ನು ಬಿಟ್ಟು ಉಳಿದವರು ಬಂದಿರುವ ಬಗ್ಗೆ ಸರ್ಕಾರವೇ ಸ್ಪಷ್ಟೀಕರಣ ನೀಡಬೇಕು. ಈಗ ತಾವು ಏನೇ ಮಾತನಾಡಿದರೂ ಅದು ರಾಜಕೀಯ ಆಗುತ್ತದೆ, ನಂದಿ ಧ್ವಜ ಮತ್ತು ಪುಷ್ಪಾರ್ಚನೆಗೆ ನಿಖರವಾದ ಸೂಕ್ತವಾದ ಚೌಕಟ್ಟು ಬೇಕಿದ್ದು, ಸರ್ಕಾರ ಆ ಕೆಲಸ ಮಾಡಿದರೆ ಮುಂಬರುವ ವರ್ಷದಿಂದ ಹಾಗೆಯೇ ನಡೆದುಕೊಳ್ಳಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net