ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರ ಅಡ್ಡಿ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!...ಕ್ರಮಕ್ಕೆ ಆಗ್ರಹಿಸಿದ ಎಂಎಲ್‌ಸಿ ಕೆ.ಶಿವಕುಮಾರ್! | Mysuru Dasara

ಮೈಸೂರು, ಅ.21: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ ಪತ್ರಕರ್ತರ ಮೇಲೆ ದುರ್ವರ್ತನೆ ತೋರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯರಾದ ಕೆ.ಶಿವಕುಮಾರ್‌ ಅವರು ಆಗ್ರಹಿಸಿದ್ದಾರೆ.
ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!...ಕ್ರಮಕ್ಕೆ ಆಗ್ರಹಿಸಿದ ಎಂಎಲ್‌ಸಿ ಕೆ.ಶಿವಕುಮಾರ್
ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!...ಕ್ರಮಕ್ಕೆ ಆಗ್ರಹಿಸಿದ ಎಂಎಲ್‌ಸಿ ಕೆ.ಶಿವಕುಮಾರ್
Published on: 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ ಪತ್ರಕರ್ತರ ಮೇಲೆ ದುರ್ವರ್ತನೆ ತೋರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯರಾದ ಕೆ.ಶಿವಕುಮಾರ್‌ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯ ಕಾರ್ಯದರ್ಶಿ, ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದಿರುವ ಅವರು, ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ನಾಡಿನ ಹೆಮ್ಮೆಯ ಆಚರಣೆಯಾಗಿದೆ. ದಸರಾ ಮಹೋತ್ಸವದ ಯಶಸ್ಸಿಗೆ ಸಾವಿರಾರು ಮಂದಿ ಶ್ರಮಿಸುತ್ತಾರೆ. ಅದರಂತೆ ಪತ್ರಕರ್ತರೂ ಕೂಡ ದಸರಾ ಹಬ್ಬದಲ್ಲಿ ಜರುಗುವ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಸೇರಿದಂತೆ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯನ್ನು ಜನರ ಮನೆಮನೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಈ ಬಾರಿ ಪತ್ರಕರ್ತರಿಗೆ ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಪತ್ರಕರ್ತರು ವರದಿ ಮಾಡಲು ಅಡಚಣೆ ಉಂಟಾಗಿರುತ್ತದೆ. ಪ್ರತಿ ಬಾರಿ ಜಂಬೂಸವಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅರಮನೆಯ ಕರಿಕಲ್ಲು ತೊಟ್ಟಿ ಮೂಲಕ ಪ್ರವೇಶ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಬ್ರಹ್ಮಪುರಿ ಗೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿರುವುದು ಸರಿಯಷ್ಟೇ. ಆದರೆ, ಸದರಿ ಪ್ರವೇಶದ್ವಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಪೊಲೀಸರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ.

ಹಿರಿಯ ಪತ್ರಕರ್ತರ ಮೇಲೆ ಹಲ್ಲೆ ಯತ್ನ!

ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಧಿಕೃತವಾಗಿ ದಸರಾ ವರದಿಗಾಗಿ ನೀಡಿದ್ದ ಗುರುತಿನ ಚೀಟಿ ಹೊಂದಿದ್ದ ಪತ್ರಕರ್ತರನ್ನು ನಕಲಿ ಪಾಸ್ ಮಾಡಿಸಿಕೊಂಡು ಬಂದಿದ್ದೀರಾ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ದುರ್ವರ್ತನೆ ತೋರಿರುತ್ತಾರೆ. ಅಲ್ಲದೆ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೂ ಯತ್ನಿಸಿರುವುದನ್ನು ಖಂಡಿಸಿ ಪತ್ರಕರ್ತರು ಸ್ಥಳದಲ್ಲಿಯೇ ಪ್ರತಿಭಟನೆ ಮಾಡಿರುತ್ತಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಧಿಕೃತ ವಾಹನ ಪಾಸ್ ಹೊಂದಿದ್ದ ಸರ್ಕಾರಿ ವಾಹನದಲ್ಲಿ ಆಗಮಿಸಿದ ಪತ್ರಕರ್ತರನ್ನು ಬ್ರಹ್ಮಪುರಿ ಪ್ರವೇಶ ದ್ವಾರದ ಬಳಿ ತಡೆದು ನಿಲ್ಲಿಸಿದ್ದಾರೆ. ಇದರಿಂದ ನಿಗದಿತ ಅವಧಿಗೆ ಕಾರ್ಯಕ್ರಮಗಳ ವರದಿ ಮಾಡಲು ಪತ್ರಕರ್ತರಿಗೆ ಸಾಧ್ಯವಾಗಿರುವುದಿಲ್ಲ. ಬಳಿಕ ಕಾಲ್ನಡಿಗೆಯಲ್ಲಿ ಬಂದ ಅನೇಕ ಪತ್ರಕರ್ತರಿಗೆ ಈ ದ್ವಾರದಲ್ಲಿ ಪ್ರವೇಶವಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ಅರಮನೆ ಆವರಣದಲ್ಲಿ ಪತ್ರಕರ್ತರಿಗಾಗಿ ವ್ಯವಸ್ಥೆ ಮಾಡಿದ್ದ ಮಾಧ್ಯಮ ಗ್ಯಾಲರಿಗೆ ಒಮ್ಮೆ ಮಾತ್ರ ಪ್ರವೇಶ ನೀಡಿ ಗ್ಯಾಲರಿಯನ್ನು ಸಂಪೂರ್ಣವಾಗಿ ಮುಚ್ಚಿರುತ್ತಾರೆ.

Also Read
ಶಿವಮೊಗ್ಗ ಆನೆ ಘಟನೆ ಬೆನ್ನಲ್ಲೇ ಕಟ್ಟುನಿಟ್ಟಿನ ನಿಯಮಕ್ಕೆ ಸೂಚನೆ ನೀಡಿದ ಸಚಿವ ರಾಮಲಿಂಗ ರೆಡ್ಡಿ! | Shivamogga Dasara Elephant
ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!...ಕ್ರಮಕ್ಕೆ ಆಗ್ರಹಿಸಿದ ಎಂಎಲ್‌ಸಿ ಕೆ.ಶಿವಕುಮಾರ್

ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ವರದಿ ಮಾಡಿ ನಿಗದಿತ ವೇಳೆಗೆ ಸುದ್ದಿ ಮನೆಗೆ ತಲುಪಿಸುವುದು ವರದಿಗಾರರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಈ ರೀತಿಯಲ್ಲಿ ಪೊಲೀಸರು ಅಸಭ್ಯವಾಗಿ ವರ್ತಿಸುವುದು ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಾಧ್ಯಮ ಪ್ರತಿನಿಧಿಗಳ ಮೇಲೆ ದುರ್ವರ್ತನೆ ತೋರಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಮುಂದಿನ ಬಾರಿ ಜಿಲ್ಲಾಡಳಿತವು ಇಂತಹ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಬೇಕು ಎಂದು ಅವರು ಎಂಎಲ್​ಸಿ ಕೆ.ಶಿವಕುಮಾರ್​ ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net