ಕರ್ನಾಟಕದ ಯುವಕ ಗೋವಾದ ಬಾಗಾ ಬೀಚ್‌ನಲ್ಲಿ ಜಲಸಮಾಧಿ
- ಗೋವಾದ ಬಾಗಾ ಬೀಚ್‌ನಲ್ಲಿ ಭೀಕರ ದುರಂತ!
- ಬೃಹತ್ ಬಂಡೆ ಮೇಲೆ ಕುಳಿತಿದ್ದ ವಿಜಯಪುರ ಮೂಲದ ಯುವಕ ಸಮುದ್ರದ ಅಲೆಗೆ ಸಿಲುಕಿ ಜಲಸಮಾಧಿ
- ಕರ್ನಾಟಕದ ಯುವಕ ಸಾಹಸ್ ಮಾಸ್ಲಿ ಸಮುದ್ರದ ಪಾಲು!
ಪಣಜಿ: ಭದ್ರತಾ ಸಿಬ್ಬಂದಿಗಳ ಎಚ್ಚರಿಕೆಯ ನಡುವೆಯೂ ಸಮುದ್ರದಲ್ಲಿ ಹುಚ್ಚಾಟ ಮೆರೆಯಲು ಹೋದ ವಿಜಯಪುರದ ಯುವಕನೊಬ್ಬ ಗೋವಾದ ಬಾಗಾ ಬೀಚ್‌ನಲ್ಲಿ (Goa Beach Tragedy) ಜಲಸಮಾಧಿಯಾದ ಘಟನೆ ವರದಿಯಾಗಿದೆ.
ಮಾಹಿತಿ ಪ್ರಕಾರ, ಮೃತನನ್ನು 33 ವರ್ಷದ ಸಾಹಸ್ ಅಶ್ಪಕ್ ಮಾಸ್ಲಿ (Sahas Ashpak Masali) ಎಂದು ಗುರುತಿಸಲಾಗಿದ್ದು, ಇತನು ಬಾಗಾ ಬೀಚ್ನಲ್ಲಿದ್ದ ಒಂದು ಬಂಡೆ ಮೇಲೆ ಕುಳಿತಿದ್ದು, ನಂತರ ತೆರೆ ಬಂದು ಅಪ್ಪಳಿಸಿದ ಹೊದೆತಕ್ಕೆ ಸಮುದ್ರದ ಪಾಲಾಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್!
ಈ ಸಾಹಸ್ ಅಶ್ಪಕ್ ಮಾಸ್ಲಿ (Sahas Ashpak Masali) ಬಾಗಾ ಬೀಚ್ನ ಬೃಹತ್ ಬಂಡೆ ಮೇಲೆ ಕುಳಿತುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋನಲ್ಲಿ ಬಂಡೆಯೊಂದನ್ನು ಏರಿ ಇತ ಕುಳಿತಿದ್ದು, ತನ್ನ ಬಳಿ ತೆರೆ ಬರುವುದಿಲ್ಲ ಎಂದ ಅತಿಯಾದ ಆತ್ಮವಿಶ್ವಾಸವನ್ನು ನಾವು ನೋಡಬಹುದಾಗಿದೆ. ಇನ್ನೊಂದು ಕಡೆ ಅಲ್ಲಿಂದ ಆದಷ್ಟು ಇಳಿದು ಬರುವಂತೆ ಜನ ಹೇಳುತ್ತಿರುವುದು ವಿಡಿಯೋನಲ್ಲಿ ದಾಖಲಾಗಿದೆ.
ಆದರೆ, ಈ ಮಾತಿಗಳಿಗೆ ಕಿವಿಗೊಡದ ಸಾಹಸ್ ಅದೇ ಬಂಡೆ ಮೇಲೆ ಕುಳಿತ್ತಿದ್ದಾನೆ. ಕೆಲವೇ ಕ್ಷಣದಲ್ಲಿ ಬೃಹತ್ ಅಲೆಯೊಂದ ಅಪ್ಪಳಿದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಇತ ಸಮುದ್ರಕ್ಕೆ ಬಿದ್ದಿದ್ದಾನೆ. ಇವನ ರಕ್ಷಣೆಗೆ ಜನ ಮುಂದಾಗುವ ಮೊದಲೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾನೆ. ಕೆಲ ಸಮಯದ ಬಳಿದ ರಕ್ಷಣಾ ಕಾರ್ಯ ಆರಂಭವಾಗಿದ್ದು, ದೂರದ ತೀರಕ್ಕೆ ಸಾಹಸ್ನ ಹೆಣ ಬಂದು ತಲುಪಿದೆ. ಈಗ ಈ ಕುರಿತು ಪೊಲೀಸರಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ,(ಏಜನ್ಸೀಸ್).