ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಇಲಾಖೆಯಿಂದ ಪರಿಶೀಲನೆ! Food Department
- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ
- ಥ್ರೀ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ
- ಆಹಾರಗಳ ಮಾದರಿ ಪರಿಶೀಲನೆಗಾಗಿ ಆಹಾರ ಸುರಕ್ಷತೆ ಇಲಾಖೆಯು ಜಿಲ್ಲಾವಾರು ವಿಶೇಷ ತಂಡಗಳನ್ನು ರಚಿಸಿದೆ
- ಅವಧಿ ಮೀರಿದ ಆಹಾರ ಹಾಗೂ ಕಳಪೆ ಗುಣಮಟ್ಟ ಪತ್ತೆಯಾದರೆ ಕಾಯ್ದೆಯಡಿ ಕಠಿಣ ಕ್ರಮ ವರದಿ ನೀಡಲು ಸೂಚಿಸಲಾಗಿದೆ
ಬೆಂಗಳೂರು: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ( Food Department ) ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿನ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಮಾದರಿಗಳ ಪರಿಶೀಲನೆ ಕೈಗೊಂಡಿದೆ.
3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನೆ ಕೈಗೊಳ್ಳಲಾಗಿದೆ. ಈ ಸಂಬಂಧ ವಿಶೇಷ ಅಭಿಯಾನ ಆರಂಭಿಸಿರುವ ಇಲಾಖೆ, ಆಹಾರಗಳ ಮಾದರಿ ಪರಿಶೀಲನೆಗೆ ಜಿಲ್ಲಾವರು ತಂಡಗಳನ್ನು ರಚಿಸಿದೆ.
ಅವಧಿ ಮೀರಿದ ಆಹಾರ ಉತ್ಪನ್ನಗಳ ಬಳಕೆ, ಕಳಪೆ ಗುಣಮಟ್ಟದ ಆಹಾರ ವಿತರಣೆ ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕ್ರಮ ಕೈಗೊಂಡು ವರದಿ ಸಲ್ಲಿಸಲು ಇಲಾಖೆ ಆಯುಕ್ತ ಶ್ರೀನಿವಾಸ ಸೂಚಿಸಿದ್ದಾರೆ.
ಅಧಿಕಾರಿಗಳು ರಾಜ್ಯದ ವಿವಿಧೆಡೆ ಸ್ಟಾರ್ ಹೋಟೆಲ್‌ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿ, ಆಹಾರ ಮಾದರಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ.