‘ಎನ್‌ಪಿಎಸ್‌ ವಾತ್ಸಲ್ಯ’ ಯೋಜನೆ 
ರಾಜ್ಯ

ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಭವಿಷ್ಯಕ್ಕೆ ಹಣಕಾಸು ಭದ್ರತೆ: ಎನ್‌ಪಿಎಸ್‌ ವಾತ್ಸಲ್ಯಕ್ಕೆ ಪಾಲಕರಲ್ಲಿ ಹೆಚ್ಚಿದ ಆಸಕ್ತಿ- NPS Vatsalya

ಬೆಂಗಳೂರು: ಪಾಲಕರು ತಮ್ಮ ಮಕ್ಕಳ ಚಿಕ್ಕ ವಯಸ್ಸಿನಿಂದಲೇ ದೀರ್ಘಾವಧಿಯ ಉಳಿತಾಯ ಪ್ರವೃತ್ತಿ ಬೆಳೆಸಲು ಒಲವು ತೋರುತ್ತಿರುವುದರಿಂದ ಆದಿತ್ಯ ಬಿರ್ಲಾ ಸನ್‌ ಲೈಫ್‌ ಪೆನ್ಶನ್‌ ಫಂಡ್‌ನ ‘ಎನ್‌ಪಿಎಸ್‌ ವಾತ್ಸಲ್ಯ’ ಯೋಜನೆ ಗಮನ ಸೆಳೆಯುತ್ತಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಾಗಿರುವ ‘ಎನ್‌ಪಿಎಸ್‌ ವಾತ್ಸಲ್ಯ’ ಯೋಜನೆಯ ಬಗ್ಗೆ ದೇಶದಾದ್ಯಂತ ಹೆಚ್ಚಿನ ಒಲವು ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಆದಿತ್ಯ ಬಿರ್ಲಾ ಸನ್‌ ಲೈಫ್‌ ಪೆನ್ಶನ್‌ ಫಂಡ್‌ನಲ್ಲಿ ಶಾಲಾ ವಯಸ್ಸಿನ ಮಕ್ಕಳೇ ಹೆಚ್ಚಿನ ಸಂಖ್ಯೆಯ ಚಂದಾದಾರರಾಗಿದ್ದಾರೆ.
ಆದಿತ್ಯ ಬಿರ್ಲಾ ಸನ್‌ ಲೈಫ್‌ ಪೆನ್ಶನ್‌ ಫಂಡ್‌ ನ ಒಟ್ಟಾರೆ ಗ್ರಾಹಕರ ಪೈಕಿ 10 ರಿಂದ 14 ವರ್ಷ ವಯಸ್ಸಿನ ಮಕ್ಕಳು ‘ಎನ್‌ ಪಿ ಎಸ್‌ ವಾತ್ಸಲ್ಯ’ ಯೋಜನೆಯ ಶೇ. 36.9ರಷ್ಟು ಗ್ರಾಹಕರಾಗಿದ್ದಾರೆ. ನಂತರ 5–9 ವರ್ಷ ವಯಸ್ಸಿನ ಮಕ್ಕಳು ಶೇ.31.6ರಷ್ಟು ಪಾಲು ಹೊಂದಿದ್ದಾರೆ. 15–19 ವರ್ಷ ವಯಸ್ಸಿನವರು ಶೇ. 21.1ರಷ್ಟು ಇದ್ದರೆ, 0–4 ವರ್ಷ ವಯಸ್ಸಿನ ಮಕ್ಕಳು ಶೇ. 10.4ರಷ್ಟು ಇದ್ದಾರೆ. ಒಟ್ಟಾರೆ ಶೇ.68.5ರಷ್ಟು ಗ್ರಾಹಕರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ಮಕ್ಕಳು ಶಾಲಾ ಶಿಕ್ಷಣದ ಹಂತದಲ್ಲಿ ಇರುವಾಗಲೇ ಅವರಲ್ಲಿ ದೀರ್ಘಾವಧಿಯ ಉಳಿತಾಯ ಪ್ರವೃತ್ತಿ ಬೆಳೆಸಲು ಮತ್ತು ಮಕ್ಕಳ ಭವಿಷ್ಯದ ಅಗತ್ಯಗಳಿಗಾಗಿ ಉಳಿತಾಯಕ್ಕೆ ಒತ್ತು ನೀಡಲು ಗಮನಾರ್ಹ ಸಂಖ್ಯೆಯ ಪಾಲಕರು ಮುಂದಾಗುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.ಮಕ್ಕಳು ವಯಸ್ಕರಾಗುವವರೆಗೆ ಕಾಯುವ ಬದಲು, ಚಿಕ್ಕ ವಯಸ್ಸಿನಿಂದಲೇ ಅವರ ಭವಿಷ್ಯಕ್ಕಾಗಿ ಉಳಿತಾಯ ಆರಂಭಿಸುವ ಪ್ರವೃತ್ತಿಯು ಇತ್ತೀಚಿಗೆ ಪಾಲಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ.