ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಡೊನಾಲ್ಡ್ ಟ್ರಂಪ್  
ರಾಜ್ಯ

ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡ್ತಿದ್ದಾರೆ: ಸಿಎಂ ಡಿ.ಕೆ.ಶಿವಕುಮಾರ್ | CM D K Shivakumar

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನು ಕೊಂಡಾಡಿರುವ ಸಿಎಂ ಡಿ.ಕೆ.ಶಿವಕುಮಾರ್(CM D K Shivakumar), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ನಮ್ಮ ಗ್ಯಾಂಟಿಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್​​ನಲ್ಲಿ ನಡೆಯುವ ಮಧ್ಯಂತರ ಚುನಾವಣೆಯಲ್ಲಿ ಸದನ ಮತ್ತು ಸೆನೆಟ್​ನಲ್ಲಿ  ರಿಪಬ್ಲಿಕ್ ಪಕ್ಷ ಬಹುಮತ ಸಾಧಿಸಿದರೆ ಪ್ರತಿ ವಯಸ್ಕ ಅಮೆರಿಕನ್ನರಿಗೂ $5,000 ಡಾಲರ್ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದನ್ನು ಸಿಎಂ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗೆ ಹೋಲಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ(ಸೆ. 14) ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬ್ಲಾಕ್ ಬಾಸ್ಟರ್ ಅಗಿದ್ದು, ಪ್ರತಿ ವಯಸ್ಕ ಅಮೆರಿಕನ್ನರಿಗೆ $5,000 ಡಾಲರ್ ನೀಡುವ ಪ್ರಸ್ತಾಪವನ್ನು ಟ್ರಂಪ್ ಘೋಷಣೆ ಮಾಡಿದ್ದಾರೆ. ಅಮೆರಿಕ ಸರ್ಕಾರವು ಹೆಚ್ಚಿನ ಪ್ರಮಾಣದ ಆದಾಯವನ್ನು ಸಂಗ್ರಹಿಸುತ್ತಿರುವುದರಿಂದ ಅದನ್ನು ನೀಡಬಹುದು ಎಂದಿದ್ದಾರೆ.
ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಟ್ರಂಪ್ ಮೊದಲು ಈ ಘೋಷಣೆ ಮಾಡಿದ್ದರು. ಪ್ರಸ್ತಾವಿತ ಪಾವತಿಗಳನ್ನು ಅಮೆರಿಕಕ್ಕೆ ಹರಿಯುವ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಿಗೆ ಲಿಂಕ್ ಮಾಡಿದ್ದಾರೆ. 
ಭಾನುವಾರ ಐರ್ಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ನನಗೆ ಖಚಿತವಾಗಿ ಗೊತ್ತಿಲ್ಲ, ಆದರೆ ರಿಪಬ್ಲಿಕನ್ನರು ಗೆದ್ದರೆ ಇದು ಸುಲಭವಾಗುತ್ತದೆ. ದೇಶದ ಎಲ್ಲಾ ವಯಸ್ಕರಿಗೆ ತಲಾ 5,000 ಡಾಲರ್ ನೀಡಬಹುದು. ನಮಗೆ ಅಪಾರ ಪ್ರಮಾಣದ ಹಣ ಬರುತ್ತಿರುವುದರಿಂದ ಇದನ್ನು ಸುಲಭವಾಗಿ ನಿಭಾಯಿಸಬಹುದು ಎಂದಿದ್ದಾರೆ (ಏಜೆನ್ಸೀಸ್).