- ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವು
- ಇಂದು ಮತ್ತೊಂದು ಮೃತ, ಸಾವಿನ ಸಂಖ್ಯೆ 29ಕ್ಕೆ ಏರಿಕೆ
- ಮಂಗಳವಾರ ವರದಿ ಕೈಸೇರಲಿದೆ
ಬೆಳಗಾವಿ: ಮಾರಣಾಂತಿಕ ಕಾಯಿಲೆಗೆ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ದಾರುಣ ಸಾವನ್ನಪ್ಪಿತು. ಇಂದು ಮತ್ತೊಂದು ಮೃತಪಟ್ಟಿದ್ದು, ಇದೀಗ ಸಾವಿನ ಸಂಖ್ಯೆ 29ಕ್ಕೆ ಏರಿದೆ.
ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನವೆಂಬರ್ 13ರಂದು ಮೊದಲು 8 ಕೃಷ್ಣಮೃಗಗಳು ಸಾವಿಗೀಡಾಯಿತು. ನಂತರದಲ್ಲಿ, ನ.15ರಂದು 20 ಕೃಷ್ಣಮೃಗಗಳು ದಾರುಣ ಅಂತ್ಯ ಕಂಡಿತು. ಆರಂಭದಲ್ಲಿ ಸಾವನ್ನಪ್ಪಿದ್ದ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಎಲ್ಲಾ ಸ್ಯಾಂಪಲ್ ಅನ್ನು ಮೈಸೂರಿನ ಲ್ಯಾಬ್ಗೆ ರವಾನಿಸಲಾಯಿತು.
ಕೃಷ್ಣಮೃಗಗಳು ಮಾರಣಾಂತಿಕ ಬ್ಯಾಕ್ಟಿರಿಯಾದಿಂದ ಮೃತಪಟ್ಟಿವೆ ಎಂದು ವೈದ್ಯರು ಶಂಕಿಸಿದ್ದಾಗಿ ತಿಳಿಸಲಾಗಿದೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿವೆ. ಇವುಗಳಲ್ಲಿ ಇಲ್ಲಿಯವರೆಗೆ 29 ಸಾವಿಗೀಡಾಗಿವೆ. ಸ್ಥಳಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಲ್ಯಾಬ್ ವರದಿ ಕೈಸೇರಲಿದ್ದು, ಕೃಷ್ಣಮೃಗಗಳ ಸರಣಿ ಸಾವಿನ ಹಿಂದಿರುವ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ.