- ಬೆಂಗಳೂರಿನಲ್ಲಿ ಮುಂದುವರಿದ ಸೈಬರ್ ವಂಚನೆ ಪ್ರಕರಣ
- ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿ
- ಉತ್ತರ ವಿಭಾಗ ಸೈಬರ್ ಪೊಲೀಸರಿಂದ ಮುಂದುವರಿದ ತನಿಖೆ
ಬೆಂಗಳೂರು: ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಾತ್ರವಾಗಿದ್ದ ಬೆಂಗಳೂರು ಈಗ ಸೈಬರ್ ಅಪರಾಧ (Cyber Crime) ಗಳ ರಾಜಧಾನಿಯಾಗಿ ಕುಖ್ಯಾತಿಯನ್ನು ಗಳಿಸುತ್ತಿದ್ದೆ. ಈದೀಗ ಗೆಳೆಯನಿಗೆ ಸಹಾಯ ಮಾಡಲೆಂದು ಬ್ಯಾಂಕ್ ವಿವರಗಳನ್ನು ನೀಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ ಎಂದು ವರದಿಯಾಗಿದೆ.
ಬೆಂಗಳೂರಿನ ಪ್ರತಿಷ್ಟಿತ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ 19 ವರ್ಷದ ಹುಡುಗನೊಬ್ಬ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಸುಮಾರು 7 ಕೋಟಿ ಮೌಲ್ಯದ ಸೈಬರ್ ಅಪರಾಧ ಪ್ರಕರಣದಲ್ಲಿ ಸಿಲುಕಿ ಕೊಂಡಿರುವ ಬಗ್ಗೆ ವರದಿಯಾಗಿದೆ.
ಬಂಧಿತ ವಿದ್ಯಾರ್ಥಿಯ ಪ್ರಕಾರ ಆತನ ಗೆಳೆಯ ಎಂದು ಹೇಳಲಾಗಿರುವ ಆಯುಷ್ ಎಂಬ ವಿದ್ಯಾರ್ಥಿ ಕಳೆದ ವರ್ಷ ನವೆಂಬರ್ನಲ್ಲಿ ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ, ಸ್ವಲ್ಪ ದಿನದ ಮಟ್ಟಿಗೆ ನಿನ್ನ ಬ್ಯಾಂಕ್ ಖಾತೆಯನ್ನು ಬಳಸಿತ್ತೆನೆ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಈ ವಿದ್ಯಾರ್ಥಿ ತನ್ನ ಬ್ಯಾಂಕ್ ಖಾತೆ ವಿವರಗಳು, ಎಟಿಎಮ್ ಕಾರ್ಡ್, ಸಿಮ್ ಕಾರ್ಡ್ ಸಮೇತ ಎಲ್ಲಾ ಪಾಸ್ವರ್ಡಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾನೆ.
ಸ್ವಲ್ಪ ದಿನ ಎಲ್ಲಾ ಚೆನ್ನಾಗಿಯೇ ನಡೆದಿದೆ. ಆದರೆ ಒಂದು ದಿನ ಬ್ಯಾಂಕ್ ಸಿಬ್ಬಂದಿಯಿಂದ ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಸುಮಾರು 7 ಕೋಟಿ ರೂಪಾಯಿ ವರ್ಗಾವಣೆಯಾಗಿದೆ, ಕೂಡಲೇ ಬ್ಯಾಂಕಿಗೆ ಬನ್ನಿ ಎಂಬ ಸಂದೇಶ ಬಂದಿದೆ. ಈ ಸಂದೇಶವನ್ನು ನೋಡಿ ಗಾಬರಿಗೊಂಡ ವಿದ್ಯಾರ್ಥಿ ತನ್ನ ಸ್ನೇಹಿತ ಆಯುಷ್ ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ತನ್ನ ಬ್ಯಾಂಕ್ ಖಾತೆಯನ್ನು ಸೈಬರ್ ವಂಚನೆಗೆ ಬಳಸಿಕೊಳ್ಳಲಾಗಿದೆ ಎಂದು ತಿಳಿದ ವಿದ್ಯಾರ್ಥಿ ತಕ್ಷಣ ತನ್ನ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾನೆ ಮತ್ತು ಪೊಲೀಸರಲ್ಲಿ ಪ್ರಕರಣ ದಾಖಲಿದ್ದಾನೆ. ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಸುಮಾರು 7 ಕೋಟಿ ಹಣ ವರ್ಗಾವಣೆಯಾಗಿದೆ, ಆದರೆ ವಂಚನೆಯ ಮೊತ್ತ ಸುಮಾರು 70 ಕೋಟಿ ಇರಬಹುದು ಎಂದು ಉತ್ತರ ಸೈಬರ್ ಠಾಣಾ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಸೈಬರ್ ಪೊಲೀಸರು ಆರೋಪಿ ಆಯುಷ್ ನನ್ನು ಹುಡುಕಲು ಪ್ರಾರಂಭಿಸಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).