ರಾಜ್ಯ

ಸ್ಟಿಂಗ್ ಆಪರೇಷನ್ ವಿಚಾರ; ಒಬ್ಬ ಕಳ್ಳ ಬೇರೊಬ್ಬ ಕಳ್ಳರಿಗೆ ಹೇಳಿದ ರೀತಿಯಿದೆ: ಸಿಎಂ ಹೇಳಿಕೆಗೆ ಸಿ.ಟಿ.ರವಿ ವ್ಯಂಗ್ಯ | C.T. Ravi

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತಂತೆ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಸಂಪುಟ ಸಚಿವರಿಗೆ ಹೇಳಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ಒಬ್ಬ ಕಳ್ಳ ಬೇರೊಬ್ಬ ಕಳ್ಳರಿಗೆ ಹೇಳಿದ ರೀತಿಯಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತಂತೆ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಸಂಪುಟ ಸಚಿವರಿಗೆ ಹೇಳಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ಒಬ್ಬ ಕಳ್ಳ ಬೇರೊಬ್ಬ ಕಳ್ಳರಿಗೆ ಹೇಳಿದ ರೀತಿಯಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾನುವಾರ(ಅ. 11) ಮಾತನಾಡಿರುವ ಅವರು, ಸಿಎಂ ಸಂಪುಟ ಸಭೆಯಲ್ಲಿ ಹೇಳಬೇಕಾಗಿರೋದು ಸ್ಟಿಂಗ್ ಆಪರೇಷನ್ ಮಾಡುತ್ತಾರೆ ಹುಷಾರಾಗಿರಿ ಅಂತ ಅಲ್ಲ, ಭ್ರಷ್ಟಾಚಾರ ಮಾಡಬೇಡಿ ಅಂತ ಹೇಳಬೇಕಿತ್ತು. ಪ್ರಾಮಾಣಿಕವಾಗಿ ಇರಿ ಅಂತ ಹೇಳಬೇಕಾಗಿತ್ತು ಎಂದಿದ್ದಾರೆ.

ಆದ್ರೆ ಸಿಎಂ ಸಿಎಂ ಹೇಳಿದ್ದು ಯಾವ ರೀತಿ ಇತ್ತು ಅಂದ್ರೆ ಒಬ್ಬ ಕಳ್ಳ ತಮ್ಮ ಸಹೋದ್ಯೋಗಿಗಳಿಗೆ ಹೇಳಿದ ರೀತಿ ಇತ್ತು ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಿತ್ಯ ಭ್ರಷ್ಟಾಚಾರದಲ್ಲಿ ತುಂಬಿದೆ. ನೈತಿಕತೆ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.