BY Vijayendra > ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ 
ರಾಜ್ಯ

'ಅಕ್ರಮ ಬಾಂಗ್ಲಾ ವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸಿ ಕಾಂಗ್ರೆಸ್ ಹಲ್ಕಾ ಕೆಲಸ ಮಾಡ್ತಿದೆ': ವಿಜಯೇಂದ್ರ ವಾಗ್ದಾಳಿ.. BY Vijayendra

  • ಕೆಪಿಎಸ್ಸಿ, ಬರ ನಿರ್ವಹಣೆ ‌ಮಾಡಲಾಗದೆ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ನಾಟಕ.

  • ಸಿಎಂ ಡಿಕೆ ಶಿವಕುಮಾರ್ ಮಾಡಿರೋ ಆರೋಪ ಪ್ರೂವ್ ಮಾಡದಿದ್ರೆ ರಾಜೀನಾಮೆ ನೀಡಬೇಕು.

  • ಮತದಾರರ ಪಟ್ಟಿ ಸ್ವಚ್ಚ ಮಾಡಲು ನಮಗೆ ಹಕ್ಕನ್ನು ಚುನಾವಣಾ ಆಯೋಗ ಕೊಟ್ಟಿದೆ.

ಮತದಾರರ ಪಟ್ಟಿ ಸ್ವಚ್ಚ ಮಾಡಲು ಚುನಾವಣಾ ಆಯೋಗ ಬಿಜೆಪಿಗೆ ಹಕ್ಕು ಕೊಟ್ಟಿದೆ. ಅಕ್ರಮ ಬಾಂಗ್ಲಾ ವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಹಲ್ಕಾ ಕೆಲಸವನ್ನು ಮಾಡುತ್ತಿದೆ. ಸಿಎಂ ಡಿಕೆ ಶಿವಕುಮಾರ್​ ಅವರು ಮಾಡಿರುವ ಆರೋಪ ಸಾಬೀತು ಮಾಡ್ಬೇಕು ಇಲ್ಲ, ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್​​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದರು.

ಸಿಎಂ ಡಿಕೆ ಶಿವಕುಮಾರ್​ ಅವರು ಸಚಿವ ಸಂಪುಟ ಸಭೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗದ ಮುಂದೆ ಕಪಟ ಪ್ರತಿಭಟನೆ ನಡೆಸಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ನಾಟಕವನ್ನು ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ವಿರುದ್ಧ ಬಿವೈವಿ ಕಿಡಿ

ಸಿಎಂ ಡಿಕೆ ಶಿವಕುಮಾರ್​ ಅವರು ನಿನ್ನೆ ಸಚಿವ ಸಂಪುಟ ಸಭೆ ಕ್ಯಾನಲ್ ಮಾಡಿ ಚುನಾವಣೆ ಆಯೋಗದ ಮುಂದೆ ಕಪಟ ಪ್ರತಿಭಟನೆ ಮಾಡಿದ್ದಾರೆ. ಈ ಮೂಲಕ ದೇಶದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ 1.30 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. ಅಕ್ಕಪಕ್ಕದ ರಾಜ್ಯದವರು ಅಲ್ಲಿ ಅಕ್ರಮವಾಗಿ ಬಂದು ಮತ ಹಾಕುತ್ತಿರುವುದು ನಮ್ಮ ಅಲ್ಪಸಂಖ್ಯಾತ ‌ಮೋರ್ಚಾದ ಅನಿಲ್ ಥಾಮಸ್ ವಿಚಾರಿಸಿದಾಗ ತಿಳಿದುಬವಂದಿದೆ ಎಂದರು

ಅಲ್ಪಸಂಖ್ಯಾತರು ಎಲ್ಲಿ ಹೆಚ್ಚಾಗಿದ್ದಾರೆ ಅಲ್ಲಿ ಮತವನ್ನು ಸೇರಿಸುತ್ತಾರೆ. ಮಂಗಳೂರಿನಲ್ಲೂ ಹೊರರಾಜ್ಯದಲ್ಲಿ ಮತವನ್ನು ಸೇರಿಸಿದ್ದಾರೆ. ಬಿಜೆಪಿ ಪಾರ್ಮ್ 7 ಬಳಿಸಿ ಅಹಿಂದ ಮತಗಳನ್ನು ಕೈ ಬಿಡುವ ಕುತಂತ್ರ ಮಾಡಿದೆ ಎಂದಿದ್ದಾರೆ. 5-10 ಸಾವಿರ ಮತ ಕೈ ಬಿಡುವ ಕೆಲಸ ಆಗಿದೆ ಎಂದು ಆರೋಪ ಮಾಡಿದ್ದಾರೆ. 50 ಲಕ್ಷ ಮತಗಳನ್ನು ತೆಗೆಯಲು ಹೊರಟಿದ್ದಾರೆ ಎಂದಿದ್ದಾರೆ. ಈವರೆಗೆ 25 ಸಾವಿರ ಫಾರ್ಮ್ 7 ಅರ್ಜಿ ಸಲ್ಲಿಕೆ ಯಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದ ಜನತೆಗೆ ಗುಡ್​ ನ್ಯೂಸ್​: ಇನ್ಮುಂದೆ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡ್ಕೊಳ್ಳಿ, ಅನ್ನ ಸೇವೆ ಮೊಬೈಲ್ ಆ್ಯಪ್ ಲೋಕಾರ್ಪಣೆ! Anna Seve Mobile App

ಮುಂದುವರೆದು, ಬಿಜೆಪಿಗರು ಮಾತ್ರ ಅಲ್ಲ. ಕಾಂಗ್ರೆಸ್ ಅವರು ಅಲ್ಲಿ ಅರ್ಜಿ ಕೊಟ್ಟಿದ್ದಾರೆ. ನಿಮ್ಮ ಬ್ಲಾಕ್ ಲೆವೆಲ್ ಆಫೀಸರ್ ರಾಜ್ಯದಲ್ಲಿ ಇದ್ದಾರೆ. ನಾವು ಅಕ್ರಮವಾಗಿ ಪಾರ್ಮ್ 7 ಕೊಟ್ಟಿಲ್ಲ. ಅದು ಚುನಾವಣಾ ಆಯೋಗ ನಮಗೆ ಕೊಟ್ಟಿರೋ ಹಕ್ಕು. ಮತದಾರರ ಪಟ್ಟಿ ಸ್ವಚ್ಚ ಮಾಡಲು ನಮಗೆ ಹಕ್ಕು ಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.

ಸಿಎಂ ರಾಜೀನಾಮೆ ಕೊಡ್ಬೇಕು

ಅಕ್ರಮ ಬಾಂಗ್ಲಾ ನಿವಾಸಿಗಳ ಸೇರ್ಪಡೆ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ಅಕ್ರಮ ಬಾಂಗ್ಲಾ ವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಕಾಂಗ್ರೆಸ್​ ಹಲ್ಕಾ ಕೆಲಸ ಮಾಡ್ತಿದೆ. ಈಗ ಸಿಎಂ ಡಿಕೆ ಶಿವಕುಮಾರ್​ ಅವರು ಚುನಾವಣಾ ಆಯೋಗದ ಮೇಲೆ ಮಾಡಿರುವ ಆರೋಪವನ್ನು ಪ್ರೂವ್ ಮಾಡಬೇಕು. ಇಲ್ಲದಿದ್ದರೇ ಅವರು ರಾಜೀನಾಮೆ ನೀಡಬೇಕು. ಅವರ ಕ್ರಮ ಚುನಾವಣಾ ಆಯೋಗವನ್ನು ಬೆದರಿಸುವ ಪ್ರಯತ್ನ ಆಗಿದೆ ಎಂದು ಕಿಡಿಕಾರಿದರು.

ಪಿಎಂ ಮಾಡುವ ಕನಸು

ಕಾಂಗ್ರೆಸ್​ ಸರ್ಕಾರ ರಾಹುಲ್​ ಗಾಂಧಿಯವರನ್ನು ಪ್ರಧಾನಿ ಮಾಡುವ ಹಗಲುಗನಸ್ಸನ್ನು ಕಾಣುತ್ತಿದೆ. ಆದರೆ ಈಗ ಕುಣಿಯಲು ಬಾರದೇ ನೆಲ ಡೊಂಕು ಎನ್ನುವಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಬಲ್ಕ್ ಎಸ್‌ಐಆರ್ (SIR) ಫಾರ್ಮ್ ಹಂಚಿ ಅಕ್ರಮ ಮತದಾರರನ್ನು ಸೇರಿಸುವ ಪ್ರಯತ್ನ ನಡೆದಿದ್ದು, ಈ ಬಗ್ಗೆ ನಾವು ನೀಡಿದ ದೂರಿಗೆ ಏನು ಉತ್ತರ? ಎಂದು ಕೇಳಿದರು.

ಸಿಎಂ ವಿಫಲ

ಕೆಪಿಎಸ್ಸಿ ,ಬರ ನಿರ್ವಹಣೆ ‌ಮಾಡೋದ್ರಲ್ಲಿ ಸಿಎಂ ವಿಫಲ ಆಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ‌ಮಾಡಿ ಕಪಟ ನಾಟಕ ಮಾಡಿದ್ದಾರೆ. ಕಾಂಗ್ರೆಸ್ ಎಸ್ ಐ ಆರ್ ಫಾರ್ಮ್ ಬಲ್ಕ್ ಆಗಿ ಕೊಟ್ಟಿದೆ. ಪಾರ್ಮ್ ೭ ಬಲ್ಕ್ ‌ಕೊಡೋದು ಮಹಾ ಅಪರಾಧವಾ? ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, (ಏಜೆನ್ಸೀಸ್).