ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರು 
ರಾಜ್ಯ

ಸಿಎಂ ಸಂಧಾನ ವಿಫಲ: 2,000 ರೂ ಹೆಚ್ಚಳಕ್ಕೆ ನಕಾರ; ಫ್ರೀಡಂ ಪಾರ್ಕ್‌ನಲ್ಲಿ ಮುಂದುವರಿದ 'ಆಶಾ'ಗಳ ಹೋರಾಟ! ASHA Workers

ಬೆಂಗಳೂರು: ತಮ್ಮ ಮಾಸಿಕ ವೇತನವನ್ನು 15 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಳೆದ ಹನ್ನೆರಡು ದಿನಗಳಿಂದ ಆಶಾ ಕಾರ್ಯಾಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆಶಾ ಕಾರ್ಯಾಕರ್ತೆಯರ ಈ ತೀವ್ರ ಪ್ರತಿಭಟನೆಯನ್ನು ಗಮನಿಸಿದ ಸಿಎಂ ಡಿ.ಕೆ. ಶಿವಕುಮಾರ ಸಭೆ ನಡೆಸಿ 2,000 ರೂ. ಹೆಚ್ಚಳ ಮಾಡುವುದಾಗಿ ಸೂಚಿಸಿದ ಹಿನ್ನಲೆ ತಮ್ಮ ಹೋರಾಟವನ್ನು ಹಿಂಪಡೆಯುವುದಾಗಿ ಆಶಾಗಳು ತಿಳಿಸಿದ್ದರು.

ಆದರೆ, ಈದೀಗ ಮುಖ್ಯಮಂತ್ರಿಗಳು ನಡೆಸಿದ ಸಂಧಾನ ಸಭೆಯ ತೀರ್ಮಾನಗಳಿಗೆ ತಮ್ಮ ಒಪ್ಪಿಗೆ ಇಲ್ಲವೆಂದು ಹೇಳಿಕೆ ನೀಡಿರುವ ಹೋರಾಟ ಸಂಘಟನೆಯ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಜ. 1 ರಿಂದ ಗೌರವಧನ ಹೆಚ್ಚಳ!

ಆಶಾ ಕಾರ್ಯಕರ್ತೆಯರ ಸಂಕಷ್ಟ ಮತ್ತು ನೋವನ್ನು ಅರ್ಥಮಾಡಿಕೊಂಡು, ಜನವರಿ 1ರಿಂದ ಮಾಸಿಕ ಗೌರವಧನದಲ್ಲಿ 2,000 ರೂ. ಹೆಚ್ಚಳ ಮಾಡುವ ಭರವಸೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಭಿನಂದಿಸುತ್ತೇನೆ.

ಮಹಿಳೆಯರ ಧ್ವನಿಗೆ ಸರ್ಕಾರ ಸ್ಪಂದಿಸಿದಾಗಲೇ ಪ್ರಜಾಪ್ರಭುತ್ವದ ಆಶಯಗಳು ಅರ್ಥಪೂರ್ಣವಾಗುತ್ತವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ತಮ್ಮ ಬೇಡಿಕೆಗಳು ಇನ್ನೂ ಈಡೇರಿಲ್ಲ, ಸರ್ಕಾರದ ಜತೆ ನಮ್ಮ ಮಾತುಕತೆ ಸಫಲವಾಗಿಲ್ಲ ಎಂದಿರುವ ಆಶಾ ಕಾರ್ಯಾಕರ್ತೆಯರ ಹೋರಾಟ ಈಗ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.