ಕೊನೆಗೂ ಸಿಎಂ ಡಿಕೆಶಿ ಸಂಧಾನ ಯಶಸ್ವಿ! 2000 ರೂ. ಹೆಚ್ಚಳಕ್ಕೆ ಒಪ್ಪಿಗೆ ಬೆನ್ನಲ್ಲೇ ಅಹೋರಾತ್ರಿ ಧರಣಿ ಕೈಬಿಟ್ಟ 'ಆಶಾ'| ASHA Workers

ASHA Workers
ಕೊನೆಗೂ ಸಿಎಂ ಡಿಕೆಶಿ ಸಂಧಾನ ಯಶಸ್ವಿ! 2 ಸಾವಿರ ರೂ.ಗೆ ಒಪ್ಪಿದ ಬೆನ್ನಲ್ಲೇ ಅಹೋರಾತ್ರಿ ಧರಣಿ ಕೈಬಿಟ್ಟ ಆಶಾ ಕಾರ್ಯಕರ್ತೆಯರು
Published on: 

ಬೆಂಗಳೂರು: ಮಾಸಿಕ ವೇತನವನ್ನು 15 ಸಾವಿರ ರೂ.ಗೆ ಏರಿಸುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟು, ಅಹರ್ನಿಶಿ ಹೋರಾಟವನ್ನು 12ನೇ ದಿನಕ್ಕೆ ದೂಡಿದ್ದ ಆಶಾ ಕಾರ್ಯಕರ್ತೆಯರು, ಇದೀಗ ದಿಢೀರ್​ ಸಿಎಂ ಡಿಕೆ ಶಿವಕುಮಾರ್​ ನೇತೃತ್ವದ ಸರ್ಕಾರ ನೀಡಿದ 2 ಸಾವಿರ ರೂ. ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿ ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದಾರೆ.

ಆರಂಭದಿಂದಲೂ ಸಿಎಂ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಆಶಾ ಕಾರ್ಯಕರ್ತೆಯರು ಇಂದು 12ನೇ ದಿನದ ಪ್ರತಿಭಟನೆಯಲ್ಲಿಯೂ ವೇತನವನ್ನು ಹೆಚ್ಚಿಸುವಂತೆ ಪಟ್ಟು ಹಿಡಿದು ಕುಳಿತ್ತಿದ್ದರು. ಆದರೆ, ಡಿಕೆ ಶಿವಕುಮಾರ್​ ನೇತೃತ್ವದ ತಂಡ ಸಭೆ ನಡೆಸಿ, ಅಂತಿಮವಾಗಿ 2 ಸಾವಿರ ರೂ. ಹೆಚ್ಚಳ ಮಾಡುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಆಶಾ ಪಡೆ, ಯಾವುದೇ ಕಾರಣಕ್ಕೂ ಇಷ್ಟೇ ಮೊತ್ತದ ಹೆಚ್ಚಳ ನಮಗೆ ಬೇಡವೆಂದು ಧರಣಿ ಮುಂದುವರಿಸಿದ್ದರು. ಆದರೀಗ, ಸಿಎಂ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಪ್ರತಿಭಟನೆ ಕೊನೆಗೊಳಿಸುವ ವಿಚಾರದಲ್ಲಿ ಸರ್ಕಾರ ಮತ್ತು ಕಾರ್ಯಕರ್ತೆಯರ ನಡುವೆ ನಡೆದ ಮೂರನೇ ಸುತ್ತಿನ ಮಾತುಕತೆ ಇದೀಗ ಸಫಲವಾಗಿದೆ. ಆಶಾ ಕಾರ್ಯಕರ್ತೆಯರ ಮನವೊಲಿಸಲು ಸಿಎಂ ಡಿಕೆಶಿ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸಭೆಯು ಯಶಸ್ವಿಯಾಗಿದೆ. 2 ಸಾವಿರ ರೂ. ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಅಹೋರಾತ್ರಿ ಧರಣಿಯನ್ನು ನಿಲ್ಲಿಸುವುದಾಗಿ ಮಾತು ಕೊಟ್ಟಿದ್ದಾರೆ.

Also Read
ದೇವರಿಗೆ ಮುಡಿಕೊಡುವ ಪ್ರವೃತ್ತಿ ಶುರುವಾಗಿದ್ದು ಹೇಗೆ ಗೊತ್ತಾ? ತಿಮ್ಮಪ್ಪನಿಗೆ ನೀವು ಅರ್ಪಿಸೋ ಕೂದಲಿಗಿದೆ ಸಖತ್​ ಡಿಮಾಂಡ್​ | Hair Offering
ASHA Workers

ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ನಿರಂತವಾಗಿ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರು ಸಿಎಂ ಭರವಸೆ ಬಳಿಕ ಅವರಿಗೆ ಸನ್ಮಾನ ಮಾಡಿ, ಹೋರಾಟವನ್ನು ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ಈ ಮೂಲಕ 12 ದಿನಗಳ ಸತತ ಧರಣಿಗೆ ಕೊನೆಗೂ ಬ್ರೇಕ್​ ಹಾಕಿದ್ದಾರೆ.