ನನಗೆ ಪ್ರತಿಷ್ಠೆ ಇಲ್ಲ! ಕುಮಾರಸ್ವಾಮಿ ಯೋಜನೆ ಮುಂದುವರೆಸುತ್ತಿದ್ದೇನೆ ಅಷ್ಟೇ: ಸಿಎಂ ಡಿಕೆಶಿ 
ರಾಜ್ಯ

ನನಗೆ ಪ್ರತಿಷ್ಠೆ ಇಲ್ಲ! ಕುಮಾರಸ್ವಾಮಿ ಯೋಜನೆ ಮುಂದುವರೆಸುತ್ತಿದ್ದೇನೆ ಅಷ್ಟೇ: ಸಿಎಂ ಡಿಕೆಶಿ

ಯಾವ ರೀತಿಯಲ್ಲಿ ಮತಗಳ್ಳತನವಾಗಿದೆ ಅಂತ ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಚರ್ಚೆ ಮಾಡ್ತೇವೆ. ಆದಾದ ಮೇಲೆ ಆಲ್ ಪಾರ್ಟಿ ಮೀಟಿಂಗ್ ಕೂಡ ಇದೆ. ವಿರೋಧ ಪಕ್ಷಗಳನ್ನು ದೆಹಲಿಗೆ ಕರೆದಿದ್ದೇವೆ. ಸರ್ವಪಕ್ಷ ನಿಯೋಗವು ಕೇಂದ್ರ ಸರ್ಕಾರವನ್ನು ಭೇಟಿ ಮಾಡಲಿದೆ ಎಂದರು.

ಬೆಂಗಳೂರು: ನಾಳೆ ದೆಹಲಿ ಪ್ರವಾಸ ಕೈಗೊಳ್ಳುವ ಮುನ್ನ ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್ (CM DK Shivakumar)​, ಸಿಡಬ್ಲ್ಯೂಸಿ ಮತ್ತು ಎಸ್​ಐಆರ್​ ವಿಚಾರವಾಗಿ ಚರ್ಚಿಸುವುದಾಗಿ ಹೇಳಿದ್ದಾರೆ.

ಮಾಧ್ಯಮದ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ಅವೆಲ್ಲವೂ ಸತ್ಯವಾಗಿದೆ. ಯಾವ ರೀತಿಯಲ್ಲಿ ಮತಗಳ್ಳತನವಾಗಿದೆ ಅಂತ ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಚರ್ಚೆ ಮಾಡ್ತೇವೆ. ಆದಾದ ಮೇಲೆ ಆಲ್ ಪಾರ್ಟಿ ಮೀಟಿಂಗ್ ಕೂಡ ಇದೆ. ವಿರೋಧ ಪಕ್ಷಗಳನ್ನು ದೆಹಲಿಗೆ ಕರೆದಿದ್ದೇವೆ. ಸರ್ವಪಕ್ಷ ನಿಯೋಗವು ಕೇಂದ್ರ ಸರ್ಕಾರವನ್ನು ಭೇಟಿ ಮಾಡಲಿದೆ ಎಂದರು.

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರ

ಈಗಾಗಲೇ ಆ ಬಗ್ಗೆ ಚರ್ಚೆಯಾಗಿದೆ. ಅದೆಲ್ಲವೂ ದೆಹಲಿಯಲ್ಲಿ ನಡೆಯುತ್ತೆ. ಸೀನಿಯರ್ ಶಾಸಕರಿಗೂ ಸ್ಥಾನಗಳು ನೀಡಬೇಕು. ಸೀನಿಯರ್ ಕಾರ್ಯಕರ್ತರಿಗೂ‌ ಕೊಡಬೇಕಿದೆ. ಎಲ್ಲವೂ ದೆಹಲಿಗೆ ಹೋದಾಗ ಚರ್ಚೆಯಾಗುತ್ತೆ. ಮಹಿಳಾ ಕೋಟಾ ತುಂಬುವ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

ಬೈರಮಂಗಲ ರೈತರ ಮೇಲೆ ಎಫ್​ಐಆರ್

ಮೊದಲಿಗೆ ರಸ್ತೆ ತಡೆ ಯಾರು ಮಾಡಬಾರದು. ಯಾರು ಜಮೀನು ಕೊಡಬೇಡಿ ಅಂತ ಹೇಳಿದ್ದೀನಿ. ಇಷ್ಟ ಇದ್ದವರು ಕೊಡ್ತಾರೆ‌, ಇಲ್ಲದಿದ್ದವರು ಹಾಗೆ ಇರಲಿ. ದುಡ್ಡು ಬೇಕು ಅಂದವರು ಕೊಡುತ್ತಾರೆ, ಬೇಡ ಆದವರು ಬಿಡುತ್ತಾರೆ. ಇಲ್ಲಿ ನನಗೆ ಪ್ರತಿಷ್ಠೆ ಇಲ್ಲ. ಕುಮಾರಸ್ವಾಮಿ ಯೋಜನೆಯನ್ನೇ ಮುಂದುವರೆಸುತ್ತಿದ್ದೇನೆ ಅಷ್ಟೇ ಎಂದು ನೇರವಾಗಿ ಕೇಂದ್ರ ಸಚಿವರನ್ನು ಕುಟುಕಿದರು.

ಚುನಾವಣಾ ಆಯೋಗದ ವಿರುದ್ದ ರಾಜಕೀಯ ಪ್ರೇರಿತ ಹೋರಾಟ ಎಂಬ ವಿಪಕ್ಷ ಆರೋಪ

ನಾವು ಏನು ಹೇಳಿದ್ದೀವಿ, ಅದನ್ನೇ ಚುನಾವಣಾ ಆಯೋಗದವರು ಹೇಳಿದ್ದಾರೆ. ನೀವು ಮಾಡ್ತಿರೋದು ಸರಿಯಲ್ಲ ಎಂದು ಚುನಾವಣಾ ಆಯೋಗದವರು ಹೇಳಿಕೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಅಂದರೆ ಬಹುಮತ. ಇಬ್ಬರು ಕೂಡ ಮಾಡ್ತಿರೋದು ಸರಿಯಲ್ಲ ಎಂದಿದ್ದಾರೆ. ತ್ಯಾಪೆಹಾಕಿ ಹೆದರಿಸಿ ಕುಳ್ಳಿರಿಸಿದ್ದಾರೆ ಎಂದರು.

ಎಇಇ ಮಿಸ್ಸಿಂಗ್ ವಿಚಾರ

ಎಇಇ ಅವರದ್ದು ಏನೋ ಸಮಸ್ಯೆ ಇದೆ. ನಾನು ಕೂಡ ಚರ್ಚೆ ಮಾಡಿದೆ. ಈ ಹಿಂದೆ ಕೂಡ ಗಲಾಟೆ ಮಾಡಿಕೊಂಡು ಹೋಗಿದ್ದ. ಅವನ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕು. ಆತ ಮಾಡುತ್ತಿದ್ದ ಕೆಲಸದ ಬಗ್ಗೆ ನಾಯಕ್ ಅನ್ನೋರು ಗದಗದಲ್ಲಿ ಎರಡ್ಮೂರು ಬಾರಿ ದೂರು ನೀಡಿದ್ದಾರೆ. ಎಇಇ ಕಾನೂನು ಪ್ರಕಾರ ಕೆಲಸ ಮಾಡ್ತಾ ಇರಲಿಲ್ಲ. ಸೈಟ್​ಗಳನ್ನು ವಿಸಿಟ್ ಮಾಡ್ತಾ ಇರಲಿಲ್ಲ. ಈ ಹಿಂದೇನೂ ಇದೆ ರೀತಿ ಹೋಗಿದ್ದ ಎನ್ನಲಾಗಿದೆ ಎಂದರು.

ಕಳೆದ ಬಾರಿ ಅಜ್ಮೀರ್​ನಿಂದ ಪೊಲೀಸರು ಕರೆದುಕೊಂಡು ಬಂದಿದ್ದರು. ಕಾನೂನು ಕೆಲಸ ಮಾಡಬೇಕಲ್ಲ. ಆಫೀಸತರ್​ಗಳು ಕೇಳೆ ಕೇಳ್ತಾರೆ. ಕೆಲಸದ ವಿಡಿಯೋ ಮಾಡಬೇಕು ಅಂತ ಕಾನೂನು ಮಾಡಿದ್ದೇವೆ. ಅದಕ್ಕೆ ಅವನು ಸಹಕಾರ ಕೊಟ್ಟಿರಲಿಲ್ಲ. ಆದಷ್ಟು ಬೇಗ ಎಲ್ಲಿದ್ದಾನೆ ಅಂತ ಪತ್ತೆಹಚ್ಚುತ್ತೇವೆ ಎಂದು ಹೇಳಿದರು.