Chikkamagaluru Koppa Kunchuru girl missing(Ai Image) 
ರಾಜ್ಯ

ಬೆಡ್ ಮೇಲೆ ಗೊಂಬೆ ಇಟ್ಟು ಯುವತಿ ಎಸ್ಕೇಪ್​; ಮಗಳಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್..Chikkamagaluru

ಪ್ರಮುಖ ಮುಖ್ಯಾಂಶಗಳು

  • ಮೆಸ್ಕಾಂ ಇಲಾಖೆ ಜ್ಯೂನಿಯರ್ ಇಂಜಿನಿಯರ್ ಅಪ್ಪನನ್ನೇ ಯಾಮಾರಿಸಿದ ಮಗಳು.
  • ಬೆಡ್ ಮೇಲೆ ಮನುಷ್ಯರಂತೆ ಗೊಂಬೆ ಇಟ್ಟು, ರಗ್ ಹೊದಿಸಿ ಮಗಳು ನಾಪತ್ತೆ
  • ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ಘಟನೆ
ಚಿಕ್ಕಮಗಳೂರು: ಬೆಡ್​ ಮೇಲೆ ಗೊಂಬೆ ಇಟ್ಟು ಥೇಟ್​ ತಾನೇ ಮಲಗಿದ್ದೇನೆ ಎನಿಸುವಂತೆ ಸೃಷ್ಟಿ ಮಾಡಿ, ಯುವತಿಯೊಬ್ಬಳು ಸಿನಿಮಾ ಸ್ಟೈಲ್​ನಲ್ಲಿ ಮನೆ ಖಾಲಿ ಮಾಡಿದ ಘಟನೆ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ನಡೆದಿದೆ.
ಹೌದು, ಮೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ (ಜೆಇ) ಆಗಿರುವ ಜಗದೀಶ್ ಅವರ ಪುತ್ರಿ ಜಲನ್ಯ ಎಂಬುವವರೇ ತಂದೆಯನ್ನೇ ಯಾಮಾರಿಸಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಕಂಪ್ಯೂಟರ್​ಗೆ ಹೋಗ್ತಿದ್ದ ಮಗಳು

ಇತ್ತೀಚೆಗೆ ದ್ವಿತೀಯ ಪಿಯುಸಿ ಮುಗಿಸಿ ಮನೆಯಲ್ಲಿದ್ದ ಜಲನ್ಯ, ಕಳೆದ ಎರಡು ತಿಂಗಳ ಹಿಂದೆ ಕೊಪ್ಪ ಪಟ್ಟಣಕ್ಕೆ ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದರು. ಇತ್ತೀಚೆಗೆ ತಂದೆಯ ಜೊತೆ ಶೃಂಗೇರಿ ದೇಗುಲಕ್ಕೆ ಹೋಗಿ ಬಂದಿದ್ದಳು. ಆದರೆ ದೇವಸ್ಥಾನಕ್ಕೆ ಹೋಗಿ ಬಂದ ಮರುದಿನವೇ ಈಕೆ ಯಾರಿಗೂ ತಿಳಿಸದೆ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಲನ್ಯ ಮನೆಯಿಂದ ಎಸ್ಕೇಪ್​ ಆಗುವ ಮುನ್ನ ತಾನೇ ಹಾಸಿಗೆ ಮಲಗಿದ್ದೇನೆ ಎಂದು ನಂಬಿಸಲು ಗೊಂಬೆಯನ್ನು ಮಲಗಿಸಿದ್ದಳು. ಅದಕ್ಕೆ ಬೆಡ್​ಶೀಟ್​ ಹೊದಿಸಿ ಪರಾರಿಯಾಗಿದ್ದಾಳೆ. ಮಗಳು ಮಲಗಿದ್ದಾಳೆ ಎಂದೇ ಭಾವಿಸಿದ್ದ ತಂದೆಗೆ ನಂತರ ಅಲ್ಲಿ ಮಗಳ ಬದಲಿಗೆ ಗೊಂಬೆ ಇರುವುದು ತಿಳಿದು ಶಾಕ್ ಆಗಿದೆ.

ಮೊಬೈಲ್​ ಬಳಸ್ತಿದ್ದ ಜಲನ್ಯ

ಜಲನ್ಯ ತಂದೆಗೆ ತಿಳಿಯದಂತೆ ಮೊಬೈಲ್ ಫೋನ್ ಬಳಸುತ್ತಿದ್ದರು ಎನ್ನುವುದು ತಿಳಿದುಬಂದಿದೆ. ಸದ್ಯ ಜೆಇ ಜಗದೀಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, (ಏಜೆನ್ಸೀಸ್).