ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಕುರಿತ ಸುದ್ದಿ ಚಿತ್ರ 
ರಾಜ್ಯ

ಎಸ್‌ಐಆರ್ ಅಂತಿಮ ಪಟ್ಟಿ ರದ್ದುಗೊಳಿಸಿ; ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: 'ಸಿಎಂ ಡಿಕೆಶಿ' ಗೆ ನಿಯೋಗದ ಮನವಿ! SIR Voter List

ಬೆಂಗಳೂರು: ಕರ್ನಾಟಕದಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಂತಿಮ ಪಟ್ಟಿಯನ್ನು ರದ್ದುಗೊಳಿಸಿ, 2025ರ ಮತದಾರರ ಪಟ್ಟಿಯನ್ನೇ ಸಾರ್ವಜನಿಕ ಪರಿಶೀಲನೆಯ ಮೂಲಕ ಪರಿಷ್ಕರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಳಸಬೇಕು ಎಂದು ಆಗ್ರಹಿಸಿ ಎಸ್‌ಐಆರ್ ವಿರೋಧಿ ಒಕ್ಕೂಟದ ನಿಯೋಗ ಶುಕ್ರವಾರ (ನ.27) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿಗಳಿಗೆ SIR ಕುರಿತು ಒತ್ತಾಯ ಪತ್ರ..pdf
Preview

70 ಲಕ್ಷ ಮತದಾದರು ಎಲ್ಲಿದ್ದಾರೆ?

ಕರ್ನಾಟಕದಲ್ಲಿ ಪ್ರಕಟಿಸಿರುವ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯು ಅವೈಜ್ಞಾನಿಕವಾಗಿದ್ದು, ಹಲವು ದೋಷಗಳಿಂದ ಕೂಡಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರ ಜನಸಂಖ್ಯೆ 5.2 ಕೋಟಿ ಇದ್ದು, ಮತದಾರರ ಪಟ್ಟಿಯಲ್ಲಿ 4.5 ಕೋಟಿ ಜನರಷ್ಟೇ ಉಳಿದಿರುವುದಕ್ಕೆ ಕಾರಣವೇನು? ಉಳಿದ 70 ಲಕ್ಷ ಜನರು ಎಲ್ಲಿ ಹೋದರು? ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಕೈಬಿಡಲಾದ ಅರ್ಹ ಮತದಾರರನ್ನು ಗುರುತಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ಮೃತಪಟ್ಟವರ ಪಟ್ಟಿಯನ್ನು ಬೂತ್‌ಗಳಲ್ಲಿ ಪ್ರಕಟಿಸಿ, ಅವರ ಮನೆಗಳಿಗೆ ಮರುಭೇಟಿ ನೀಡಿ ಪರಿಶೀಲಿಸಬೇಕು. ಮನೆ ಬದಲಾಯಿಸಿರುವ ಮತದಾರರನ್ನು ಕೈಬಿಡದೆ, ಅವರ ಹೊಸ ವಿಳಾಸದ ಮಾಹಿತಿ ಪಡೆದು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಎಸ್‌ಐಆರ್ ಅಂತಿಮ ಪಟ್ಟಿಯನ್ನು ರದ್ದುಗೊಳಿಸಬೇಕು, 2025ರ ಮತದಾರರ ಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆ ಮೂಲಕ ಪರಿಷ್ಕರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಳಸಬೇಕು ಹಾಗೂ ಅರ್ಹ ಮತದಾರರ ಮತದಾನದ ಹಕ್ಕು ರಕ್ಷಣೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.

ಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ನಿಯೋಗದಲ್ಲಿ ಹೋರಾಟಗಾರರಾದ ನೂರ್ ಶ್ರೀಧರ್, ಬಡಗಲಪುರ ನಾಗೇಂದ್ರ, ಮಾಜಿ ಸಂಸದ ವೆಂಕಟೇಶ್, ವೀರಸಂಗಯ್ಯ, ತಾಹೇರ್ ಹುಸೇನ್, ಸುನೀಲ್ ಸಿರಸಂಗಿ, ನಾಗೇಶ್ ಹಾಗೂ ನಯನಾ ಉಪಸ್ಥಿತರಿದ್ದರು.