ಮಹಿಳಾ ಜಿಲ್ಲಾಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ TVK ಶಾಸಕ ಅರುಳ್ ವಿಘ್ನೇಶ್ ಅರೆಸ್ಟ್! Arul Vignesh

C. Arul Vignesh, the TVK MLA from Kallakurichi, Tamil Nadu, has been arrested on charges of sexually harassing a female District Collector.
ಮಹಿಳಾ ಜಿಲ್ಲಾಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ತಮಿಳುನಾಡಿನ ಕಲ್ಲಾಕುರಿಚಿ TVK ಶಾಸಕ ಸಿ. ಅರುಳ್ ವಿಘ್ನೇಶ್
Published on: 

ಚೆನ್ನೈ: ಮಹಿಳಾ ಜಿಲ್ಲಾಧಿಕಾರಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಆಡಳಿತಾರೂಢ ಟಿವಿಕೆ ಪಕ್ಷದ ಶಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲಾಕುರಿಚಿ ಜಿಲ್ಲೆಯ ಶಾಸಕ ಸಿ. ಅರುಳ್ ವಿಘ್ನೇಶ್ ಬಂಧಿತ ಜನಪ್ರತಿನಿಧಿಯಾಗಿದ್ದು, ಶುಕ್ರವಾರ ಸಂಜೆ ಟಿ. ರಾಮಸಾಮಿ ನಗರದಲ್ಲಿರುವ ಅವರ ನಿವಾಸದಲ್ಲೇ ಪೊಲೀಸರು ಅರುಳ್ ವಿಘ್ನೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು? ದೂರು ದಾಖಲಾಗಿದ್ದು ಯಾವಾಗ?

ಕಲ್ಲಾಕುರಿಚಿ ಜಿಲ್ಲಾಧಿಕಾರಿಗೆ ಶಾಸಕ ಅರುಳ್ ವಿಘ್ನೇಶ್ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನವೆಂಬರ್ 23 ರಂದು ಜಿಲ್ಲಾಧಿಕಾರಿ ಕಲ್ಲಾಕುರಿಚಿ ಪೊಲೀಸ್ ವರಿಷ್ಠಾಧಿಕಾರಿ ಐ. ಶಾನಾಜ್ ಅವರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ನವೆಂಬರ್ 25ರಂದು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.

ಶಾಸಕರ ವಿರುದ್ಧ ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 (ಲೈಂಗಿಕ ಕಿರುಕುಳ), 78 (ಹಿಂಬಾಲಿಸುವುದು/ಸ್ಟಾಕಿಂಗ್) ಮತ್ತು 132 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read
ಕಾಂಗ್ರೆಸ್‌ಗೂ ಜೈ, ಬಿಜೆಪಿಗೂ ಜೈ: ಒಂದೇ ದಿನ ಮೂರು ಡ್ರೆಸ್ ಬದಲಿಸಿ ನಾಮಪತ್ರ ಸಲ್ಲಿಸಿದ ವಾಟಿ ಕುಮಾರಿ ಗೆದ್ದಿದ್ದು ಹೇಗೆ ಗೊತ್ತಾ? Vati Kumari
C. Arul Vignesh, the TVK MLA from Kallakurichi, Tamil Nadu, has been arrested on charges of sexually harassing a female District Collector.

ಹೈಕೋರ್ಟ್ ವಾರ್ನಿಂಗ್ ಬೆನ್ನಲ್ಲೇ ಬಂಧನ!

ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸಲು ಪ್ರಯತ್ನಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿತ್ತು. ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಕೋರ್ಟ್ ಸೂಚನೆ ಬೆನ್ನಲ್ಲೇ, ತಿರುಪ್ಪೂರ್ ಎಸ್‌ಪಿ ಸೃಷ್ಟಿ ಸಿಂಗ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಲಾಗಿದ್ದು, ಐಜಿಪಿ ಎನ್. ಕಾಮಿನಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ.

ರಾಜಕೀಯ ಕೆಸರೆರಚಾಟ ಶುರು!

ಬಂಧನಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಶಾಸಕ ವಿಘ್ನೇಶ್, ತಮ್ಮ ಮೇಲಿನ ಆರೋಪಗಳನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. ಇತ್ತ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್, ಇದು ವಿರೋಧ ಪಕ್ಷ ಡಿಎಂಕೆ ಮತ್ತು ಸಂಸದೆ ಕನಿಮೊಳಿ ಅವರು ಟಿವಿಕೆ ಸರ್ಕಾರದ ವಿರುದ್ಧ ಸೃಷ್ಟಿಸಿದ ಕಥೆ ಎಂದು ಆರೋಪಿಸಿದ್ದಾರೆ.

ಆದರೆ, ಟಿವಿಕೆ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಮೊದಲಿಗೆ ಸಚಿವರು ಹಾಗೂ ಮೈತ್ರಿ ಪಕ್ಷದ ನಾಯಕರೆಲ್ಲ ಸೇರಿ ಶಾಸಕನಿಗೆ ಕ್ಲೀನ್ ಚಿಟ್ ನೀಡಲು ಯತ್ನಿಸಿದ್ದರು. ಆ ದಿಟ್ಟ ಮಹಿಳಾ ಅಧಿಕಾರಿ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಂತು ದೂರು ನೀಡಿದರು. ಹೈಕೋರ್ಟ್ ಮತ್ತು ಮಹಿಳಾ ಆಯೋಗ ತೀವ್ರ ಛೀಮಾರಿ ಹಾಕಿದ ಮೇಲೆ ಬೇರೆ ದಾರಿಯಿಲ್ಲದೆ ಈಗ ಬಂಧಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ, (ಏಜೆನ್ಸೀಸ್​).