‘ನವರತನ್ ಜುವೆಲ್ಲರ್ಸ್‌ 
ರಾಜ್ಯ

ಗ್ರಾಂ ಚಿನ್ನ ಖರೀದಿಸಿದರೆ ಒಂದು ಗ್ರಾಂ ಬೆಳ್ಳಿ ಉಚಿತ: ಹಲವು ಕೊಡುಗೆ ಘೋಷಿಸಿದ ನವರತನ್ ಜುವೆಲ್ಲರ್ಸ್​​​​-Navratan Jewellers

ಬೆಂಗಳೂರು: ಅಕ್ಷಯ ತೃತೀಯಾ ಪ್ರಯುಕ್ತ ‘ನವರತನ್ ಜುವೆಲ್ಲರ್ಸ್‌’ ಚಿನ್ನಾಭರಣಗಳ ಖರೀದಿ ಮೇಲೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ.
ಒಂದು ಗ್ರಾಂ ಚಿನ್ನ ಖರೀದಿಸಿದರೆ ಒಂದು ಗ್ರಾಂ ಬೆಳ್ಳಿ, ಒಂದು ಗ್ರಾಂ ಕ್ಯಾರೆಟ್ ವಜ್ರ ಖರೀದಿಸಿದರೆ ಒಂದು ಗ್ರಾಂ ಚಿನ್ನ ಹಾಗೂ ಒಂದು ಕೆ.ಜಿ. ಬೆಳ್ಳಿ ಖರೀದಿಸಿದರೆ 20 ಗ್ರಾಂ ಬೆಳ್ಳಿ ಉಚಿತವಾಗಿ ಸಿಗಲಿದೆ.ರಾಜಾಜಿನಗರ, ಜಯನಗರ, ಎಂ.ಜಿ. ರಸ್ತೆ, ಸಿಟಿ ಸ್ಟ್ರೀಟ್, ಕನಕಪುರ ರಸ್ತೆ ಮತ್ತು ಕೆ.ಆರ್. ಪುರದ ನವರತನ್ ಜುವೆಲ್ಲರ್ಸ್‌ ಮಳಿಗೆಗಳಲ್ಲಿ 20ವರೆಗೆ ಈ ಆಫರ್​ ಇರಲಿದೆ. ಗ್ರಾಹಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು.
ಮಳಿಗೆಯಲ್ಲಿ ಸಾವಿರಕ್ಕೂ ಅಧಿಕ ವಿನ್ಯಾಸದಿಂದ ತಯಾರಿಸಲಾಗಿರುವ ಚಿನ್ನ ಮತ್ತು ವಜ್ರಾಭರಣಗಳು ನೋಡುಗರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಧರಿಸುವ ಕಾಲಾತೀತ ಚಿನ್ನ, ಬೆರಗುಗೊಳಿಸುವ ವಜ್ರಾಭರಣ ನೋಡುಗರ ಗಮನ ಸೆಳೆಯತ್ತಿದೆ.
ಜುಮುಕಿ, ಕಿವಿಯೋಲೆ, ಡ್ರಾಪ್ಸ್, ಉಂಗುರ, ನೆಕ್ಲೇಸ್, ಕಿವಿಯೋಲೆ, ಬಳೆ, ತೋಳಬಂದಿ, ಡಾಬು ಸೇರಿ ಸಾವಿರಕ್ಕೂ ಅಧಿಕ ಬಗೆಯ ವಿನ್ಯಾಸ ಚಿನ್ನಾಭರಣಗಳಿವೆ. ವಿಕ್ಟೋರಿಯನ್ ಕಲೆಕ್ಷನ್ಸ್, ಆ್ಯಂಟಿಕ್ ಕಲೆಕ್ಷನ್ಸ್, ವಜ್ರಾಭರಣಗಳು, ಪೋಲ್ಕಿ, ಚಿನ್ನ ಹಾಗೂ ವಜ್ರದ ವಿವಿಧ ವಿನ್ಯಾಸದ ಬಳೆಗಳಿವೆ. ಪುರುಷರು, ಮಹಿಳೆಯರು ಧರಿಸಬಹುದಾದ ವೈಟ್‌ಗೋಲ್ಡ್, ಮಹಿಳೆಯರಿಗೆ ಒಪ್ಪುವ ರೋಸ್‌ಗೋಲ್ಡ್, ಇಟಾಲಿಯನ್ ಸೆಟ್, ಹೊಸ ಶೈಲಿಯ ವಜ್ರದ ನೆಕ್ಲೆಸ್, ಹಾರ, ಚಾನ್‌ಬಾಲಿ, ಲೈಟ್‌ವೇಟ್ ಚೋಕರ್ಸ್‌, ಪ್ಯೂಷನ್, ಟ್ರೆಡಿಷನಲ್, ಸಾಲಿಟರ್ಸ್, ಬ್ರೈಡಲ್ ಸೆಟ್ಸ್ ವಜ್ರಾಭರಣಗಳಿವೆ.