Bengaluru techie suicide 
ರಾಜ್ಯ

ನೀರಿದ್ದ ಬಕೆಟ್​ನಲ್ಲಿ ಮುಳುಗಿ 11 ತಿಂಗಳ ಮಗು ಸಾವು; 'ಎಲ್ಲದಕ್ಕೂ ನಾನೇ ಕಾರಣ' ಎಂದು ಡೆತ್​ನೋಟ್​ ಬರೆದಿಟ್ಟು ತಾಯಿ ಆತ್ಮಹತ್ಯೆ..Bengaluru techie suicide

ಪ್ರಮುಖ ಮುಖ್ಯಾಂಶಗಳು

  • ಮಗು ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ
  • ನೀರಿದ್ದ ಬಕೆಟ್​ನಲ್ಲಿ ಬಿದ್ದು ಮೃತಪಟ್ಟ 11 ತಿಂಗಳ ಮಗು ಸಾವು
  • ಬೆಂಗಳೂರಿನ ಚಂದ್ರಾ ಲೇಔಟ್​ ಪೊಲೀಸ್​ ಠಾಣಾ ವ್ಯಾಪ್ತಿ ನಡೆದ ಘಟನೆ
  • ಮಗು ಸಾವಿನ ನಂತರ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಬೆಂಗಳೂರು: ಇಲ್ಲಿನ ಭೈರವೇಶ್ವರ ನಗರದಲ್ಲಿ ಮನಕಲಕುವಂತಹ ಘಟನೆಯೊಂದು ನಡೆದಿದೆ. 11 ತಿಂಗಳ ಮಗು ಬಕೆಟ್​ನಲ್ಲಿ ಮುಳುಗಿ(Child Drowns) ಸಾವನ್ನಪ್ಪಿದ್ದ ಬೆನ್ನಲ್ಲೇ, ನೊಂದ ಸಾಫ್ಟ್​ವೇರ್​ ಟೆಕ್ಕಿ ಅಪರಾಧ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಫ್ಟ್​ವೇರ್​ ಉದ್ಯೋಗಿ ಪ್ರತಿಭಾ(29) ಎಂದು ಗುರುತಿಸಲಾಗಿದ್ದು, ಆಕೆಯ 11 ತಿಂಗಳ ಗಂಡು ಮಗು ಅಗಸ್ತ್ಯ ಎನ್ನಲಾಗಿದೆ. ಬುಧವಾರ ಅಗಸ್ತ್ಯ ಆಕಸ್ಮಿಕವಾಗಿ ಬಕೆಟ್​ನಲ್ಲಿ ಮುಳುಗಿ ಸಾವನ್ನಪ್ಪಿತ್ತು. ಇದರಿಂದ ತೀರ ನೊಂದ ಆಕೆ ಘಟನೆ ನಡೆದು 29 ನಿಮಿಷಗಳ ನಂತರ ಡೆತ್​ನೋಟ್​ ಬರೆದಿಟ್ಟು ಸೂಸೈಡ್​ ಮಾಡಿಕೊಂಡಿದ್ದಾರೆ.

ಏನಿದು ಘಟನೆ?

ಪ್ರತಿಭಾರ ಪತಿ ಮಹಾಂತೇಶ್​ ಕಚೇರಿಗೆ ತೆರಳಿದ್ದರು. ಆಕೆ ಮಗುವಿನೊಂದಿಗೆ ಮನೆಯಲ್ಲಿಯೇ ಇದ್ದರು. ಒಣ ಬಟ್ಟೆಗಳನ್ನು ಮಹಡಿ ಮೇಲಿನಿಂದ ತರಲು ತಾರಸಿಗೆ ತೆರಳಿದಾಗ. ಮಗು ತಿಳಿಯದೆ ಮನೆಯ ಬಚ್ಚಲಿಗೆ ತೆವಳಿಕೊಂಡು ತೆರಳಿದೆ. ನೀರು ತುಂಬಿದ್ದ ಬಕೆಟ್​ ಹಿಡಿದು ನಿಲ್ಲಲು ಹೋದ ಅದು ಆಕಸ್ಮಿಕವಾಗಿ ಬಕೆಟ್​ಗೆ ಉರುಳಿಕೊಂಡಿದೆ ಎಂದು ಅಂದಾಜಿಸಲಾಗಿದೆ.
ಪ್ರತಿಭಾ ಅವರು ಬಟ್ಟೆ ತೆಗೆದುಕೊಂಡು ಕೆಳಕ್ಕೆ ಬಂದಾಗ ಮಗು ಬಕೆಟ್​ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವುದು ಅರಿವಿಗೆ ಬಂದಿದೆ. ಇದರಿಂದ ತೀರ ದುಃಖ ಮತ್ತು ಪಾಪಪ್ರಜ್ಞೆ ಕಾಡಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮೊದಲು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಕೆಲವು ಮಾತ್ರೆಗಳನ್ನು ನುಂಗಿದ್ದಾರೆ. ಆನಂತರ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಕೇಸ್ ಬೆಳಕಿಗೆ ಬಂದಿದ್ದು ಹೇಗೆ?

ಮಹಾಂತೇಶ್​ ಅವರು ಸಂಜೆ 6:30ಗೆ ಕೆಲಸ ಮುಗಿಸಿಕೊಂಡು ವಾಪಸ್ ಬಂದರು. ಮನೆಯ ಬಾಗಿಲು ಲಾಕ್​ ಆಗಿದ್ದ ಕಾರಣ, ಅವರ ಬಳಿ ಇದ್ದ ಮತ್ತೊಂದು ಕೀಲಿ ಬಳಸಿಕೊಂಡು ಡೋರ್​ ಓಪನ್​ ಮಾಡಿ ಮನೆಗೆ ಪ್ರವೇಶಿಸಿದಾಗ ಪತ್ನಿ -ಮಗು ಎರಡು ಮೃತಪಟ್ಟಿರುವುದು ಕಂಡು ದಿಗ್ಭ್ರಾಂತರಾಗಿದ್ದಾರೆ.

ಪೊಲೀಸರು ಏನಂದ್ರು?

ಘಟನಾ ಸ್ಥಳ ಪರಿಶೀಲನೆ ನಡೆಸಿದ ಚಂದ್ರಲೇಔಟ್ ಪೊಲೀಸರು, ಡೆತ್​ನೋಟ್​ ಮತ್ತು 15 ಮಾತ್ರೆಗಳನ್ನು ನುಂಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಡೆತ್​ನೋಟ್​ನಲ್ಲಿ ಏನಿದೆ?

ನನ್ನ ಮಗು ಮತ್ತು ನನ್ನ ಸಾವಿಗೆ ನಾನೇ ಕಾರಣ. ನನ್ನ ಬೇಜವಾಬ್ದಾರಿತನದಿಂದಲೇ ಮಗು ಪ್ರಾಣ ಕಳೆದುಕೊಂಡಿದೆ. ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ, (ಏಜೆನ್ಸೀಸ್​).