Bengaluru Secures 13th Spot In World's 20 Best Cities For Food In 2026
- ವಿಶ್ವದ ಟಾಪ್ 20 ಅತ್ಯುತ್ತಮ ಆಹಾರದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸಿಕ್ತು 13ನೇ ಸ್ಥಾನ
- 2026ರ ವಿಶ್ವದ 20 ಅತ್ಯುತ್ತಮ ಆಹಾರದ ನಗರಗಳ ಸಾಲಿನಲ್ಲಿ ಭಾರತಕ್ಕೆ ಸ್ಥಾನ
- ಮೊದಲು ಲಿಮಾ ನಂತರದ ಸ್ಥಾನ ಥೈಲಾಂಡ್ ಎನ್ನಲಾಗಿದೆ
Bengaluru Secures 13th Spot In World Best Cities For Food In 2026: ಟೈಮ್ ಔಟ್ ಎನ್ನುವ ಸಂಸ್ಥೆ ರಿಲೀಸ್ ಮಾಡಿರುವ 2026ರ ವಿಶ್ವದ 20 ಅತ್ಯುತ್ತಮ ಆಹಾರದ ನಗರಗಳ ಸಾಲಿನಲ್ಲಿ ಭಾರತ 13ನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಇಂದಿರಾನಗರ, ಕೋರಮಂಗಲ, ಎಂಜಿ ರಸ್ತೆಗಳಲ್ಲಿರುವ ರೆಸ್ಟೋರೆಂಟ್ಗಳಲ್ಲಿ ಸಿಗುವ ಆಹಾರ ಅದ್ಭುತ ಎನ್ನಲಾಗಿದೆ. ಭಾರತದ ಪರವಾಗಿ ಬೆಂಗಳೂರು 13ನೇ ಸ್ಥಾನ ಅಲಂಕರಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ.
ಸದಾ ಟ್ರಾಫಿಕ್, ಕಸದ ಸಮಸ್ಯೆ, ಕೊಳಚೆ ನೀರು ಎನ್ನುವ ವಿಚಾರಕ್ಕೆ ಸುದ್ದಿಯಾಗುವ ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ರುಚಿಕರ ಆಹಾರ, ಕಾಫಿ, ದೋಸೆ ಹೀಗೆ ನಾನಾ ವಿಚಾರಕ್ಕೆ ನಮ್ಮ ಬೆಂಗಳೂರು ಫೇಮಸ್ ಆಗಿದೆ. ಹಾಗಾದ್ರೆ ಮೊದಲ ಮತ್ತು ನಂತದ ಸ್ಥಾನವನ್ನು ಯಾವ ದೇಶ ಗಿಟ್ಟಿಸಿಕೊಂಡಿದೆ ಎನ್ನುವುದನ್ನು ನೋಡೋಣ
ಬೆಂಗಳೂರು ನಮ್ಮ ಹೆಮ್ಮೆ
"2026ರ ವಿಶ್ವದ 20 ಅತ್ಯುತ್ತಮ ಆಹಾರದ ನಗರಗಳು ಪಟ್ಟಿಯಲ್ಲಿ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು 13ನೇ ಸ್ಥಾನ ಪಡೆದುಕೊಂಡಿದೆ. ಹೆಮ್ಮೆಯ ವಿಚಾರ ಎಂದರೆ, ಅತ್ಯತ್ತಮ ಆಹಾರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಗರ ಬೆಂಗಳೂರು ಮಾತ್ರವಾಗಿದೆ. ಈ ವರದಿಗಾಗಿ ವಿಶ್ವದಾದ್ಯಂತ 24,000 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ.
ಇಲ್ಲಿನ ಆಹಾರಲ್ಲೆ ಜಗತ್ತೇ ಫಿದಾ
ಬೆಂಗಳೂರಿಗೆ ಭೇಟಿ ನೀಡುವ ಪ್ರತಿ ವಿದೇಶಿಗರು ಇಲ್ಲಿನ ಇಡ್ಲಿ, ವಡೆ, ನಾನಾ ರೀತಿಯ ದೋಸೆಗಳನ್ನು ನೆಚ್ಚಿಕೊಂಡಿದ್ದಾರೆ. ಟಿಫಿನ್ ರೂಮ್‌ಗಳು, ಮಿಲಿಟರಿ ಹೋಟೆಲ್‌ಗಳ ಡೊಣ್ಣೆ ಬಿರಿಯಾನಿ, ತಡರಾತ್ರಿಯವರೆಗೆ ಸಿಗುವ ಸ್ಟ್ರೀಟ್ ಫುಡ್‌ಗಳು, ಫಿಲ್ಟರ್ ಕಾಫಿಯನ್ನು ನೆಚ್ಚಿಕೊಂಡಿರುವ ಕಾರಣ ಬೆಂಗಳೂರನ್ನು ಜಾಗತಿಕ ಮ್ಯಾಪ್‌ನಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿವೆ.
ಈ ಪ್ರದೇಶದ ಆಹಾರಕ್ಕೆ ಫಿದಾ
ಕೋರಮಂಗಲ, ಇಂದಿರಾನಗರ, ಪ್ರತಿಷ್ಠಿತ ಪ್ರದೇಶವಾದ ಎಂಜಿ ರಸ್ತೆಗಳಲ್ಲಿ ಇರುವ ಫೇಮಸ್ ರೆಸ್ಟೋರೆಂಟ್ ಅಲ್ಲಿ ಸಿಗುವ ಆಹಾರದ ಬಗ್ಗೆ ಉಲ್ಲೇಖವಾಗಿದೆ ಎಂದು 2026ರ ವಿಶ್ವದ 20 ಅತ್ಯುತ್ತಮ ಆಹಾರದ ನಗರಗಳು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ದೇಶಕ್ಕೆ ಯಾವ ಸ್ಥಾನ
2026ರ ವಿಶ್ವದ 20 ಅತ್ಯುತ್ತಮ ಆಹಾರದ ನಗರಗಳು ಪಟ್ಟಿಯಲ್ಲಿ ಲಿಮಾ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ಥೈಲ್ಯಾಂಡ್‌ನ ಬ್ಯಾಂಕಾಕ್ ದ್ವಿತೀಯ ಸ್ಥಾನದಲ್ಲಿದೆ ಹಾಗೂ ಮೆಕ್ಸಿಕೋ ಸಿಟಿ ಮೂರನೇ ಸ್ಥಾನದಲ್ಲಿದೆ. ಲಂಡನ್ನ ಇಟಾಲಿಯನ್ ಭಕ್ಷ್ಯಗಳಿಗೆ ಜನ ಮನಸೋತಿದ್ದಾರೆ. ಕೋಪನ್ ಹ್ಯಾಗನ್ 19ನೇ ಸ್ಥಾನ ಪಡೆದುಕೊಂಡಿದ್ದರೆ, ಕೊನೆಯ ಸ್ಥಾನವನ್ನು ಕೋಪನ್ ಹ್ಯಾಗನ್ ಗಿಟ್ಟಿಸಿಕೊಂಡಿದೆ,(ಏಜೆನ್ಸೀಸ್).