Bengaluru Vehicle Population 2026 
ರಾಜ್ಯ

ಬೆಂಗಳೂರಿನಲ್ಲಿ 1.2 ಕೋಟಿ ದಾಟಿದ ವಾಹನ ಸಂಖ್ಯೆ; ಈ ಜನ್ಮದಲ್ಲಿ ಟ್ರಾಫಿಕ್​ ಕಡಿಮೆಯಾಗೊಲ್ಲ ಎಂದ ನೆಟ್ಟಿಗರು..Bengaluru Vehicle Population 2026

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪ್ರತಿ ಕಿಲೋಮೀಟರ್‌ ರಸ್ತೆಯಲ್ಲಿ 900 ವಾಹನಗಳ ಸಂಚಾರ
  • ಸಿಲಿಕಾನ್​ ಸಿಟಿ ಬೆಂಗಳೂರಿನ ವಾಹನಗಳ ಖರೀದಿ ಸಂಖ್ಯೆ 1.2 ಕೋಟಿಗೆ ಏರಿಕೆ
  • ಪ್ರತಿ ದಿನ 2,100 ವಾಹನಗಳು ರಸ್ತೆಗೆ ಇಳಿಯುತ್ತಿವೆ ಎಂದ ಸಾರಿಗೆ ಇಲಾಖೆ
ಬೆಂಗಳೂರು: ಐದು ನಿಮಿಷದಲ್ಲಿ ತಲುಪುವ ಸ್ಥಳಕ್ಕೆ ಈಗ ಬೆಂಗಳೂರಿನಲ್ಲಿ 20ರಿಂದ 30 ನಿಮಿಷ ತೆಗೆದುಕೊಳ್ಳುತ್ತಿದೆ. ಕಾರಣ ಟ್ರಾಫಿಕ್(Bengaluru Traffic)​. ಇತ್ತೀಚೆಗೆ ರಿಲೀಸ್​ ಆದ ವರದಿಗಳ ಪ್ರಕಾರ, ನಗರವಾರು ಜಾಗತಿಕ ಮಟ್ಟದಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಸವಾರರು ವರ್ಷಕ್ಕೆ ಸರಾಸರಿ 168 ಗಂಟೆಗಳನ್ನು ಟ್ರಾಫಿಕ್​ನಲ್ಲಿ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅಭಿವೃದ್ಧಿ ಕಾಮಗಾರಿಗಳು ಮಾತ್ರವಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಖರೀದಿಯೂ ಒಂದು.
ಬೆಂಗಳೂರಿನಲ್ಲಿ ಮೊದಲೇ ವಾಹನಗಳನ್ನು ಪಾರ್ಕಿಂಗ್​​ ಮಾಡಲು ಸ್ಥಳವೇ ಇಲ್ಲ ಎನ್ನುವ ಹೊಯ್ದಾಟವಿದೆ. ಇದಕ್ಕಾಗಿ Greater Bengaluru Authority(ಜಿಬಿಎ) ಪಾರ್ಕಿಂಗ್​ ಸ್ಥಳಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡುತ್ತಿದೆ. ಮತ್ತೊಂದು ಕಡೆ, ಪಾದಚಾರಿಗಳಿಗೆ ರಸ್ತೆಯಲ್ಲಿ ನಡೆಯಲೂ ಆಗದಂತೆ ವಾಹನ ಪಾರ್ಕ್​​ ಮಾಡಲಾಗುತ್ತಿದೆ. ಇಂತಹ ಉಸಿರುಗಟ್ಟಿಸುವ ಕಾಲಘಟ್ಟದಲ್ಲಿ ಮಾ.31ರ ವೇಳೆಗೆ ನಗರದಲ್ಲಿ ಒಟ್ಟು ವಾಹನಗಳ ಖರೀದಿ ಸಂಖ್ಯೆ 1.2 ಕೋಟಿಯ ಗಡಿ ದಾಟುವ ಮೂಲಕ ಪಾದಚಾರಿಗಳು ಚಿಂತಿತರಾಗುವಂತೆ ಮಾಡಿದೆ.

ಸಾರಿಗೆ ಇಲಾಖೆ ವರದಿಯಲ್ಲಿ ಏನಿದೆ?

ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ. ಬೆಂಗಳೂರಿನ ಪ್ರತಿ ಕಿಲೋಮೀಟರ್​​ ರಸ್ತೆಯಲ್ಲಿ ಸರಿಸುಮಾರು 900 ವಾಹನಗಳು (Bengaluru Vehicle Population 2026,) ಚಲಿಸುತ್ತವೆ. ವಿಶ್ವದ ಕಿಕ್ಕಿರಿದ ನಗರಗಳಲ್ಲಿ ಬೆಂಗಳೂರಿಗೆ ಹೆಚ್ಚಿನ ಸ್ಥಾನ ಸಿಗ್ತಿರೋದ್ಯಾಕೆ ಎನ್ನುವ ಪ್ರಶ್ನೆಗೆ ಇದೊಂದು ಉದಾಹರಣೆಯಾಗಿದೆ.
2025-26ರ ಆರ್ಥಿಕ ವರ್ಷದಲ್ಲಿ ಸುಮಾರು 7.9 ಲಕ್ಷ ಹೊಸ ವಾಹನಗಳು ರಸ್ತೆಗೆ ಇಳಿದಿವೆ. ಅಂದರೆ, ಪ್ರತಿನಿತ್ಯ 2100ಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ. ಈ ಬಾರಿ ಗಣನೀಯವಾಗಿ ಏರಿಕೆಯಾಗಿದೆ ಎನ್ನಲಾಗಿದೆ.

ಯಾವ್ಯಾವ ವಾಹನ ಎಷ್ಟು ಖರೀದಿ?

ಮಾರ್ಚ್​31ರ ವೇಳೆಗೆ ಖರೀದಿಯಾದ 1.2 ಕೋಟಿ ವಾಹನಗಳಲ್ಲಿ ಹೆಚ್ಚಿನವು ದ್ವಿಚಕ್ರ ವಾಹನಗಳು. 86 ಲಕ್ಷ ಟೂ ವೀಲರ್​ಗಳು ನೋಂದಣಿಯಾಗಿವೆ. ಇನ್ನೂ 24.8 ಲಕ್ಷ ಕಾರು ಖರೀದಿಯಾಗಿದ್ದರೆ, ಟ್ಯಾಕ್ಸಿ ಮತ್ತು ಕ್ಯಾಬ್​ ಹೆಸರಲ್ಲಿ 2.9 ಲಕ್ಷ ವಾಹನ ಖರೀದಿ ಮಾಡಲಾಗಿದೆ. ಇನ್ನು ಆಟೋ ರಿಕ್ಷಾಗಳು 3.8 ಲಕ್ಷ ರಸ್ತೆಗೆ ಇಳಿದಿದೆ ಎನ್ನುವುದಾಗಿ ಸಾರಿಗೆ ಇಲಾಖೆ ವರದಿ ನೀಡಿದೆ.
2025-26ನೇ ಸಾಲಿನಲ್ಲಿ ದ್ವಿಚಕ್ರ ವಾಹನ ಖರೀದಿ 5.2 ಲಕ್ಷ ಖರೀದಿ ಮಾಡಿದ್ದರೆ, ಕಾರುಗಳನ್ನು 1.5 ಲಕ್ಷ ಖರೀದಿ ಮಾಡಲಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬವಿದ್ದ ಅಕ್ಟೋಬರ್​ ಮಾಸದಲ್ಲಿ 86,014 ವಾಹನ ಖರೀದಿ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಗಮನ ಸೆಳೆದಿದ್ದ ಕಾರಣ ಹೆಚ್ಚು ಖರೀದಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

HSR ಲೇಔಟ್​ RTO ಆಫೀಸಿಗೆ ಭಾರಿ ಆದಾಯ

ಕರ್ನಾಟಕದ ಆರ್​ಟಿಒ ಕಚೇರಿಗಳ ಪೈಕಿ ಹೆಚ್​ಎಸ್​ಆರ್​ ಲೇಔಟ್​ ಆರ್​ಟಿಒ ಆಫೀಸು ಹೆಚ್ಚು ಆದಾಯ ಗಳಿಸಿಕೊಂಡಿದೆ. 2025-26ರಲ್ಲಿ ಇದು 1,273 ಕೋಟಿ ರೂ. ಆದಾಯ ಸಂಗ್ರಹಿಸುವ ಮೂಲಕ ಸತತ ಮೂರನೇ ವರ್ಷವೂ ಕರ್ನಾಟಕದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಈ ಪ್ರದೇಶವೂ ಮೂರನೇ ಸ್ಥಾನದಲ್ಲಿದೆ. ಇನ್ನು ಕಸ್ತೂರಿನಗರದ ಆರ್​ಟಿಓ ಕಚೇರಿಯು 1,098 ಕೋಟಿ ರೂ. ಮತ್ತು ಜಯನಗರ ಆರ್‌ಟಿಒ 969 ಕೋಟಿ ರೂ. ಆದಾಯ ಗಳಿಸಿವೆ,(ಏಜೆನ್ಸೀಸ್​).