ಕೇಳಿದ್ದು 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಟೇಬಲ್​ಗೆ ಬಂದಿದ್ದು ಬೋಟಿ; ಬೆಂಗಳೂರು ಪಬ್​ಗಳ ಮಾರ್ಕೆಟಿಂಗ್​ಗೆ ನೆಟ್ಟಿಗರಿಂದ ಲೇವಡಿ..Chilli Dusted Goldfingers

Chilli Dusted Goldfingers
Chilli Dusted Goldfingers
Published on
Chilli Dusted Goldfingers: "ಪಬ್​ನಲ್ಲಿ ನಾನು ಆರ್ಡರ್​ ಮಾಡಿದ್ದು ಚಿಲ್ಲಿ ಡಸ್ಟಡ್​ ಗೋಲ್ಡ್​ ಫಿಂಗರ್ಸ್​ ಎಂದು ಹೆಸರಿನೊಂದಿಗೆ ನನ್ನ ಗಮನ ಸೆಳೆದ ಖಾದ್ಯವನ್ನು, ವೇಟರ್​ ಅದನ್ನು ತಂದು ನನ್ನ ಮೇಜಿನ ಮೇಲಿಟ್ಟಾಗ ನಿಜಕ್ಕೂ ನಗು ತಡೆಯೋಕೆ ಸಾಧ್ಯ ಆಗ್ಲಿಲ್ಲ. ಯಾಕೆ ಅಂದ್ರೆ, ಅದು ನಾನು ಮನೆಯಲ್ಲಿ ನಿತ್ಯ ತಿನ್ನುತ್ತಿದ್ದ ಬೋಟಿ. ಐದು ರೂಪಾಯಿಗೆ ಸಿಗೋದನ್ನು 150 ರೂ.ಗೆ ತಿಂದ ವ್ಯಕ್ತಿ ನಮ್ಮ ವಂಶದಲ್ಲಿ ನಾನೊಬ್ಬನೇ ಇರಬೇಕು" ಹೀಗೆಂದು ಬರೆದುಕೊಂಡಿರೋದು ಅರುಣ್‌ರಾಜ್ ಪತ್ತರ್ ಎಂಬ ವ್ಯಕ್ತಿ.
ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಒಂದಲ್ಲ ಒಂದು ವಿಚಾರ ವೈರಲ್​ ಆಗುತ್ತಲೇ ಇರುತ್ತದೆ. ಇಲ್ಲಿನ ರೆಸ್ಟೋರೆಂಟ್​ಗಳಲ್ಲಿ ಸಿಗುವ ವಿಚಿತ್ರ ಹೆಸರಿನ ಆಹಾರ, ಅದಕ್ಕೆ ಹಾಕಿರುವ ಬೆಲೆ ಬಗ್ಗೆ ಆನ್​ಲೈನ್​ನಲ್ಲಿ ಮಾತುಕತೆಯಾಗುತ್ತಲೇ ಇರುತ್ತೆ. ಈ ಬಾರಿ ಚರ್ಚೆ ಗ್ರಾಸವಾಗಿರೋದು ಐದು ಬೆರಳಿಗೆ ಒಂದೊದನ್ನು ತಿನ್ನುತ್ತಿದ್ದ ಇಲ್ಲಿನ ಹಳೆಯ ತಿಂಡಿ ಹಾಗೂ 5 ರೂಪಾಯಿ ಬೆಲೆ ಬಾಳುವ ಎಲ್ಲರ ನೆಚ್ಚಿನ ಬೋಟಿ.

ಟ್ವೀಟ್​ನಲ್ಲಿ ಏನಿದೆ?

ಬೆಂಗಳೂರಿನ ಇಂದಿರಾನಗದಲ್ಲಿರುವ ಟೋಯ್ಟ್​​ ಎನ್ನುವ ಪಬ್​ನಲ್ಲಿ ಗ್ರಾಹಕನೊಬ್ಬ ಹೆಸರಿಗೆ ಮಾರು ಹೋಗಿ ಅವಾಂತರಗಳನ್ನು ಎದುರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಸದ್ಯ ಎಕ್ಸ್​ನಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಏನಿದು 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ರಹಸ್ಯ?

ಅರುಣ್‌ರಾಜ್ ಪತ್ತರ್ ಎಂಬಾತ ಟೋಯ್ಟ್​ ಎನ್ನುವ ಪಬ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದನಂತೆ. ಅಲ್ಲಿ ವೇಟರ್​ ಕೊಟ್ಟ ಮೆನುವಿನಲ್ಲಿ 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಎನ್ನುವ ಆಕರ್ಷಕ ಹೆಸರು ಕಂಡು ತನ್ನಲ್ಲೇ ಏನೇನೋ ಗ್ರಹಿಕೆ ಮಾಡಿಕೊಂಡು ಆರ್ಡರ್ ಮಾಡಿದ್ದರಂತೆ. ಅದಕ್ಕೆ 150ರೂ. ಸಹ ಪಾವತಿ ಮಾಡಿದ್ದಾರೆ. ಆರ್ಡರ್​ನ್ನು ವೇಟರ್​ ತಂದಿಟ್ಟಾಗ ದಂಗಾಗಿದ್ದಾರೆ. ಏಕೆಂದರೆ ಅದು ಬೇರೆನೂ ಅಲ್ಲ ನಾವು ಸಣ್ಣವರಿದ್ದಾಗ ಮತ್ತು ಈಗಲೂ ನೆಚ್ಚಿಕೊಂಡು ತಿನ್ನುವ ಬೋಟಿ ಎಂದು.
'ಬೋಟಿ ತಿನ್ನಲು 150 ರೂ.ಕೊಟ್ಟ ವ್ಯಕ್ತಿ ನಮ್ಮ ವಂಶದಲ್ಲಿ ಮೊದಲು ನಾನೇ ಇರಬೇಕು' ಎಂದು ಎಕ್ಸ್​​ನಲ್ಲಿ ಮೆನುಕಾರ್ಡ್​ನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ​ ಇದಕ್ಕೆ ಬೆಂಗಳೂರಿನ ಅಕ್ಕಿ ಹಿಟ್ಟಿನ ಬೀದಿ ಆಹಾರ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದ ತಮಾಷೆ

ಮಾರ್ಕೆಟಿಂಗ್​ ಅಂದರೆ ಹೀಗಿರಬೇಕು. ಬೆಂಗಳೂರಿನಲ್ಲಿ ಹೆಸರಿನಲ್ಲೇ ಎಲ್ಲವೂ ಅಡಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಕಡೆ 5-10 ರೂಪಾಯಿಗೆ ಸಿಗುವ ಈ ಸಂಡಿಗೆಗೆ 150 ರೂಪಾಯಿಯೇ? ಎಂದು ತಮಾಷೆ ಮಾಡಿದ್ದಾರೆ.ಮುಂದೆ ಹುರಿದ ಕಡಲೆಕಾಯಿಗೂ 'ಫ್ಲೇಮ್ ಟಾಸ್ಡ್ ಅರ್ತ್ ನಟ್ಸ್' ಎಂದು ಹೆಸರಿಟ್ಟು 500 ರೂಪಾಯಿ ಚಾರ್ಜ್ ಮಾಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net