ಬೆಂಗಳೂರಿನ ದಾಸರಹಳ್ಳಿಯಲ್ಲಿ ರಸ್ತೆಬದಿ ಮಾರಾಟಕ್ಕಿಟ್ಟಿದ್ದ ಗಣೇಶ ಮೂರ್ತಿಯನ್ನು ಕಳ್ಳರು ಟಾಟಾ ಏಸ್ ವಾಹನದಲ್ಲಿ ಕದ್ದೊಯ್ಯುತ್ತಿರುವ ಸಿಸಿಟಿವಿ ದೃಶ್ಯ 
ರಾಜ್ಯ

ಬೆಂಗಳೂರು: ಗಣೇಶ ಹಬ್ಬಕ್ಕೂ ಮುನ್ನ ಗಣಪತಿ ಮೂರ್ತಿಯ ಕಳ್ಳತನ! CCTVಯಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ! Ganesha Idol Theft

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಗೌರಿ-ಗಣೇಶ ಹಬ್ಬ ಬರಲಿದ್ದು, ದೇಶಾದ್ಯಂತ ಶಿವ ಪುತ್ರ ಗಣಪನ ಸ್ವಾಗತಕ್ಕಾಗಿ ಭಕ್ತಗನ ಸಜ್ಜಾಗುತ್ತಿದ್ದಾರೆ. 
ಈ ಹಿನ್ನಲೆಯಲ್ಲಿ ಕುಶಲಕರ್ಮಿಗಳು ಬಹಳ ಶ್ರಮವಹಿಸಿ ವಿವಿಧ ಬಂಘಿಯ, ಆಕಾರ ಹಾಗೂ ವಿನ್ಯಾಸಗಳಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಉದ್ಯಾನ ನಗರಿಯಲ್ಲಿ ರಸ್ತೆ ಬದಿಯಲ್ಲಿ ನಿರ್ಮಿಸಿಟ್ಟ ಗಣಪತಿ ಮೂರ್ತಿ ಕಳ್ಳತನ (Ganesha Idol Theft) ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋನಲ್ಲಿ ಏನಿದೆ? 

ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ದಾಸರಹಳ್ಳಿಯ ಮಾಗಡಿ ರಸ್ತೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಟಾಟಾ ಏಸ್​ ವಾಹನದಲ್ಲಿ ಬಂದ ನಾಲ್ವರು ಯುವಕರು ರಸ್ತೆ ಬದಿಯಲ್ಲಿ ನಿರ್ಮಿಸಿಟ್ಟಿದ್ದ ವಿಘ್ನ ವಿನಾಶಕನ ಮೂರ್ತಿಯನ್ನು ಕದೊಯ್ದಿರುವ ಘಟನೆ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. 
ಪ್ರಕರಣ ದಾಖಲು; ತನಿಖೆ ಆರಂಭ!
ಈ ಮೂರ್ತಿ ಕಳ್ಳತನದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿದ್ದಂತೆ ಮಾಗಡಿ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಪ್ರಕಾರ, ಈ ಕಳ್ಳತನವು ಬೆಳಗಿನ ಜಾವದಲ್ಲಿ ನಡೆದಿದ್ದು ತಿಳಿದು ಬಂದಿದೆ.  
ಇದೇ ರೀತಿಯ ಅನೇಕ ಪ್ರಕರಣಗಳು ನಗರದಲ್ಲಿ ನಡೆಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿರುವ ಹಿನ್ನಲೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಖಾಕಿ ಪಡೆ ಆದಷ್ಟು ಬೇಗ ಈ ಮೂರ್ತಿ ಕಳ್ಳರ ಹೆರೆಮುಡಿ ಕಟ್ಟಲಿ ಎನ್ನುವುದು ನೆಟ್ಟಿಗರ ಒತ್ತಾಸೆಯಾಗಿದೆ, (ಏಜನ್ಸೀಸ್​).