Beluru Gopalakrishna says he will resign tomorrow, 
ರಾಜ್ಯ

ಕೈ ತಪ್ಪಿದ ಸಚಿವ ಸ್ಥಾನ; ನನಗೆ ಮೋಸವಾಗುತ್ತೆ ಅನ್ನೋದು ಗೊತ್ತಿರಲಿಲ್ಲ, ನಾಳೆ ರಾಜೀನಾಮೆ ಕೊಡ್ತೇನೆ ಎಂದ Beluru Gopalakrishna

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ, ನಾಳೆ ರಾಜೀನಾಮೆ ಕೊಡ್ತೇನೆ ಎಂದ ಶಾಸಕ ಬೇಳೂರು ಗೋಪಾಲಕೃಷ್ಣ
  • ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಬೇಸರ ಹೊರ ಹಾಕಿದ ಶಾಸಕ.
  • ಮದ್ಯಾಹ್ನ 3 ಗಂಟೆಗೆ ರಾಜೀನಾಮೆಗೆ ಮುಂದಾದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್.
ಶಿವಮೊಗ್ಗ: 'ಸಚಿವ ಸ್ಥಾನ ಕೊಡ್ತೇವೆ ಎಂದು ಹೈಕಮಾಂಡ್ ವಚನ ಕೊಟ್ಟಿತ್ತು. ಇಂತಹ ವ್ಯವಸ್ಥೆಯಲ್ಲಿ ಇರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಹೀಗಾಗಿ ನಾನು ರಾಜೀನಾಮೆ ಕೊಡ್ತಿದ್ದೇನೆ' ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್​ ಶಾಸಕ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ
ಹೌದು, ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಬಿಕ್ಕಟ್ಟು ಎದುರಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲವು ಶಾಸಕರ ಬೇಸರ ಸದ್ಯ ಸ್ಫೋಟಗೊಂಡಿದ್ದು, ಭಾರೀ ತಲ್ಲಣ ಸೃಷ್ಟಿಯಾಗಿದೆ.

ತನ್ವೀರ್ ಸೇಠ್​ ಅವರಿಗೆ​

ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಅಭಿಮಾನಿ

ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ನಂತರ,

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕೊಡುತ್ತೇನೆ ಎಂದರು. ಸದ್ಯ

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ನಗೆ ಈ ರೀತಿ ಮೋಸ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ.

ನಾಳೆ

ನಿಗಮ ಮತ್ತು ಶಾಸಕ ಸ್ಥಾನ ಎರಡಕ್ಕೂ

ರಾಜೀನಾಮೆ ನೀಡುವುದಾಗಿ

ಮಾಧ್ಯಮಗಳ ಮುಂದೆ

ಬೇಳೂರು ಗೋಪಾಲಕೃಷ್ಣ

ಹೇಳಿಕೊಂಡಿದ್ದಾರೆ.

ನಿಗಮ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ

ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹೇಳಿದರು. ನಮಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದರೆ ಅವರ ಹುನ್ನಾರ ಬೇರೆಯೇ ಇದೆ ಎಂದು

ಬೇಳೂರು ಗೋಪಾಲಕೃಷ್ಣ

ಹೇಳಿದರು.

ಬೇಳೂರು ಗೋಪಾಲಕೃಷ್ಣ

ಅಸಮಾಧಾನ ಹೊರಹಾಕಿದ್ದಾರೆ