ಬೆಂಗಳೂರು: ಮನೆಯಂಗಳದಲ್ಲಿದ್ದ ಆಟವಾಡಿತ್ತಿದ್ದ ಒಂದುವರೆ ವರ್ಷದ ಹೆಣ್ಣು ಮಗುವೊಂದು ಒಂದನೇ ಮಹಡಿಯಿಂದ ರಸ್ತೆಗೆ ಬಿದ್ದ(Bengaluru Babay Falls) ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಎಕ್ಸ್ನಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದು, ಮೇಲಿಂದ ಮಗು ನೆಲಕ್ಕೆ ಬೀಳುವ ದೃಶ್ಯವು ಕರುಳು ಕಿವುಚಿದಂತಾಗಿ, ಎದೆ ಝಲ್ ಎನಿಸುವಂತಿದೆ.
ಸೋಮವಾರ ಏಪ್ರಿಲ್6ರಂದು ಸಂಜೆ 6:30ರ ಸುಮಾರಿಗೆ ಒಂದು ವರ್ಷದ ಸಹನಾ ಎಂಬ ಹೆಸರಿನ ಮಗು ಮೂರನೇ ಮಹಡಿಯಿಂದ ರಸ್ತೆಗೆ ಬಿದ್ದಿದೆ. ವಿಚಾರ ತಿಳಿದ ಪೋಷಕರು ಆಕೆಯನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಮಗು ಬದುಕ್ಕಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ವಿಡಿಯೋದಲ್ಲಿ ಏನಿದೆ?
ಸೋಮವಾರ ಏಪ್ರಿಲ್6ರಂದು ಸಂಜೆ 6:30ರ ಸುಮಾರಿಗೆ ಬಾಲಕಿ, ಮನೆಯ ಬಾಗಿಲಿನಿಂದ ಹೊರಬಂದು, ಮಹಡಿಗೆ ಹಾಕಿದ್ದ ಕಬ್ಬಿಣದ ಗ್ರಿಲ್ ಹಿಡಿದು ಅಲ್ಲೇ ಇಟ್ಟಿದ್ದ ಕುರ್ಚಿ ಮೇಲೆ ಹತ್ತಿ ಕುಳಿತುಕೊಂಡಿದ್ದಾಳೆ. ಈ ವೇಳೆ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾಳೆ. ಅದೇ ಪ್ರದೇಶದಲ್ಲಿದ್ದ ಸ್ಥಳೀಯರು ಆಕೆಯ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಮಗುವನನ್ನು ಬಸವನಗುಡಿಯ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋದ ತುಣುಕನ್ನು ಕರ್ನಾಟಕ ಪೋರ್ಟ್ ಫೋಲಿಯೋ ಎನ್ನುವ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಮುಂದುವರೆದು, ಮಗುವಿನ ತಲೆಗೆ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದೆ. ಘಟನೆಯನ್ನು ನೋಡಿದ ತಾಯಿ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದಳು. ಕುಟುಂಬ ಸದಸ್ಯರು ತಕ್ಷಣ ಮಗುವನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪ್ರಸ್ತುತ, ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸುವಾಗ ಪೋಷಕರು ತೀವ್ರ ದುಃಖಿತರಾಗಿದ್ದಾರೆ ಮತ್ತು ಕಣ್ಣೀರು ಹಾಕುತ್ತಿದ್ದಾರೆ.
ಪೋಷಕರು, ಪೊಲೀಸರು ಏನಂದ್ರು?
ಮಗು ಕುರ್ಚಿ ಮೇಲೆ ಹತ್ತಿ ಗ್ರಿಲ್ ಹಿಡಿದುಕೊಳ್ಳಲು ಹೋಗಿ ನೆಲಕ್ಕೆ ಬಿದ್ದಿದ್ದಾಳೆ. ಒಬ್ಬಳೆ ಮಗಳು. ನಾನಾಗ ಒಲೆ ಮೇಲೆ ಹಾಲಿಟ್ಟಿದ್ದೆ. ಹೀಗಾಗಿ ಮಗು ಅಲ್ಲಿಗೆ ತೆರಳಿದ್ದನ್ನು ನೋಡಿಕೊಂಡಿಲ್ಲ. ಈ ವಿಚಾರವಾಗಿ ನಾವು ಯಾರನ್ನು ದೂರೋದಿಲ್ಲ. ಮಗಳು ಸುರಕ್ಷಿತವಾಗಿದ್ದಾಳೆ. ತಲೆಗೆ ಪೆಟ್ಟಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ದಂಪತಿ ಮತ್ತು ಪೊಲೀಸರು ಮಾಹಿತಿ ಹಂಚಿಕೊಂಡರು, (ಏಜೆನ್ಸೀಸ್).