- ಬೆಂಗಳೂರಿನಲ್ಲು ಬುಧವಾರ ಸಂಜೆ ಸಂಪೂರ್ಣ ಕಾಣಿಸಿಕೊಂಡ ಮಳೆ
- ಬುಕ್ವರ್ಮ್ ಪುಸ್ತಕ ಮಳಿಗೆಯೊಳಗೆ ನುಗ್ಗಿದ ನೀರು, ಲಕ್ಷಕ್ಕೂ ಹೆಚ್ಚು ನಷ್ಟ
- 14 ಲಕ್ಷಕ್ಕೂ ಹೆಚ್ಚು ಮೌಲ್ಯದ ಪುಸ್ತಕಗಳು ನೀರು ಪಾಲು ಎಂದು ಮಳಿಗೆ ಪೋಸ್ಟ್
Bengaluru Bookworm : ಬಿಸಿಲಿನ ಬೇಗೆಗೆ ಸಿಲಿಕಾನ್ ಸಿಟಿ ಜನರು ಬೆಂಡಾಗಿದ್ದರು. ಬುಧವಾರ ಒಂದೇ ಸಮನೇ ಸುರಿದ ಮಳೆಯು ಇಳೆಯನ್ನು ತಂಪೆರೆಯಿತಾದರೂ..ಸಾವು-ನೋವು, ಆಸ್ತಿ-ಪಾಸ್ತಿ ನಾಶವನ್ನು ಕಂಡರು.ಈ ಮಧ್ಯೆ ಮಳೆಯ ಸಡಗರವೇ ಇರಲಿಲ್ಲ. ಶಿವಾಜಿನಗರದ ಸಮೀಪವಿದ್ದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಉರುಳಿ ಏಳು ಮಂದಿ ಮೃತಪಟ್ಟರೆ, ಅನೇಕ ಭಾಗದಲ್ಲಿ ಮರಗಳು ಬುಡಮೇಲಾಗಿದ್ದವು. ಇನ್ನು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಹಳೆಯ ಬುಕ್ ವರ್ಮ್ ಮಳಿಗೆಗೆ ನೀರು ನುಗ್ಗಿ ಸಾವಿರಕ್ಕೂ ಹೆಚ್ಚು ಪುಸ್ತಕಗಳು ನೀರುಪಾಲಾಗಿ ಲಕ್ಷಕ್ಕೂ ಹೆಚ್ಚು ನಷ್ಟವನ್ನು ಮಳಿಗೆ ಅನುಭವಿಸಿದೆ.
ಬುಕ್ ವರ್ಮ್ ಮಳಿಗೆಯು ಎಂಜಿ ರಸ್ತೆಯ ಚರ್ಚ್ ಶೀಟ್ ಬಳಿ ಕಳೆದ 25 ವರ್ಷಗಳಿಂದ ಅಕ್ಷರ ಪ್ರೇಮಿಗಳಿಗಾಗಿ ನೆಲೆಯೂರಿದೆ. ಆಧುನಿಕ ಜಗತ್ತಿನಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಇದ್ದರೂ ಸಹ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿ ಹೆಸರುವಾಸಿ ಮಾಡಿಕೊಂಡಿದೆ.
ಆದರೆ, ನಿನ್ನೆ 4ರಿಂದ ಒಂದೇ ಸಮನೇ ಸುರಿಯಲು ಶುರುವಿಟ್ಟುಕೊಂಡ ಮಳೆರಾಯ ರಾತ್ರಿ 10ರವರೆಗೂ ಧೋ ಎಂದು ಸುರಿಯುತ್ತಲೇ ಇದ್ದ. ಬೆಂಗಳೂರಿನ ರಿಚ್ಮಂಡ್ ಸರ್ಕಲ್, ಎಂಜಿ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದವು. ಇದ್ರಿಂದಾಗಿ ಡೌನ್ನಲ್ಲಿರುವ ಬುಕ್ ವರ್ಮ್ ಮಳಿಗೆಗೂ ನೀರು ನುಗ್ಗಿದ ನೆಲದಡಿ ಶೆಲ್ಫ್ಗಳಲ್ಲಿದ್ದ ಪುಸ್ತಕಗಳು ಒದ್ದೆಯಾಗಿವೆ. ಒಟ್ಟಾರೆಯಾಗಿ ನಾಲ್ಕು ಸಾವಿರದಿಂದ ಐದು ಸಾವಿರ ಪುಸ್ತಕ ನೀರು ಪಾಲಾಗಿದ್ದು ಮಳಿಗೆಗೆ ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
4ರಿಂದ5 ಸಾವಿರ ಪುಸ್ತಕ ನೀರು ಪಾಲು
ಪ್ರಸಿದ್ಧ ಆಸ್ಟರಿಕ್ಸ್ ಮತ್ತು ಒಬೆಲಿಕ್ಸ್ ಸರಣಿಗಳು, ವಾಲ್ಟರ್ ಐಸಾಕ್ಸನ್ ಅವರ ಎಲೋನ್ ಮಸ್ಕ್ , ರೂಪಾ ಪೈ ಅವರ ಕಬ್ಬನ್ ಪಾರ್ಕ್: ದಿ ಗ್ರೀನ್ ಹಾರ್ಟ್ ಆಫ್ ಬೆಂಗಳೂರು ಮತ್ತು ರಿಕ್ ರಿಯೋರ್ಡನ್ ಅವರ ಪರ್ಸಿ ಜಾಕ್ಸನ್ ಮತ್ತು ದಿ ಒಲಿಂಪಿಯನ್ಸ್ ಸರಣಿಗಳ ಪ್ರತಿಗಳು ಸೇರಿವೆ ಎನ್ನಲಾಗಿದೆ.
ಬುಕ್ವರ್ಮ್ನಲ್ಲಿ ತುಂಬಿದ್ದ ನೀರು ಹೊರತೆಗೆದು ಸಹಜ ಸ್ಥಿತಿಗೆ ತರಲು ಯತ್ನಸುತ್ತಿದ್ದೇವೆ, ಪುಸ್ತಕ ಕೊಂಡುಕೊಳ್ಳುವವರು ಧಾರಾಳವಾಗಿ ಮಳಿಗೆಗೆ ಬರಬಹುದು ಎಂದು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).