Dakshina Kannada KSRTC Bus Accident
ದಕ್ಷಿಣ ಕನ್ನಡ: ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಜಾಗರೂಕವಾಗಿ ಮತ್ತು ಅತಿ ವೇಗದಿಂದ ವಾಹನ ಚಲಾಯಿಸುತ್ತಿರುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿ, ಅನೇಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದೆ ಝಲ್ ಎನಿಸುವ (Dakshina Kannada KSRTC Bus Accident) ಘಟನೆಯೊಂದು ಬೆಳಕಿಗೆ ಬಂದಿದೆ.
ದ್ವಿತೀಯ ಪಿಯುಸಿ ಮತ್ತು SSLC ಪರೀಕ್ಷೆ ಬರೆಯಲು ಕಾಲೇಜಿಗೆ Karnataka State Road Transport Corporation (ಕೆಎಸ್ಆರ್ಟಿಸಿ) ಬಸ್ನಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು, ಏಕಾಏಕಿ ತೆರೆದುಕೊಂಡ ಡೋರ್ನಿಂದ ರಪ್ಪನೆ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿನಿಯರು ನ್ಯಾಯತರ್ಪು ಗ್ರಾಮದ ಕಲೈತೊಟ್ಟುವಿನ ನಾಗರಾಜ್ ಮತ್ತು ರೂಪ ಎಂಬುವವರ ಮಕ್ಕಳು ಎನ್ನುವುದಾಗಿ ತಿಳಿದುಬಂದಿದೆ.
ಬಸ್ನಿಂದ ರಸ್ತೆಗೆ ಬಿದ್ದ ಅಕ್ಕ-ತಂಗಿ
ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಈ ಕೆಎಸ್ಆರ್ಟಿಸಿ ಬಸ್ನಲ್ಲಿ ಜನದಟ್ಟಣೆ ಭಾರಿ ಇತ್ತು. ಪರೀಕ್ಷೆಗೆ ಸಮಯವಾಗಿದ್ದ ಕಾರಣ, ಬೇಗನೆ ಹೊರಡಲು ವಿಧಿ ಇಲ್ಲದೆ ಇದೇ ಬಸ್ಗೆ ಗೇರುಕಟ್ಟೆ ಬಳಿ ಅಕ್ಕ-ತಂಗಿ ಹತ್ತಿಕೊಂಡರು. ಬಸ್ ರಶ್ ಇದ್ದ ಕಾರಣ ಬಾಗಿಲ ಬಳಿಯೇ ಇಬ್ಬರು ನಿಂತಿದ್ದರು.
ರೇಷ್ಮೆರಸ್ತೆ ಎಂಬಲ್ಲಿನ MRPL ಪೆಟ್ರೋಲ್ ಪಂಪ್ ಬಳಿ ಕೆಎಸ್ಆರ್ಟಿಸಿ ತಿರುವು ತೆಗೆದಯುಕೊಳ್ಳುತ್ತಿದಾಗ ವೇಗವಾಗಿ ಚಲಿಸಿದೆ. ಈ ವೇಳೆ ಡೋರ್ ಇದ್ದಕ್ಕಿಂದ್ದಂತೆ ತೆರೆದುಕೊಂಡಿದೆ. ಮೊದಲು ಅಕ್ಕ ನೆಲಕ್ಕೆ ಬಿದ್ದಳು, ಆಕೆಯನ್ನು ರಕ್ಷಿಸಲು ಹೋಗಿ ತಂಗಿಯೂ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾಳೆ.
SSLC ಮತ್ತು PUC ಪರೀಕ್ಷೆಗೆ ಹೋಗುತ್ತಿದ್ದ ಅಕ್ಕ-ತಂಗಿ
ಅದೃಷ್ಟವಶಾತ್ ರಸ್ತೆಯಲ್ಲಿ ಯಾವುದೇ ಗಾಡಿಗಳು ಸಂಚರಿಸದ ಕಾರಣ ಇಬ್ಬರು ಬದುಕುಳಿದ್ದಿದ್ದಾರೆ. ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದೊಂದಿಗೆ ಬೆಳ್ತಂಗಡಿ ಮತ್ತು ಉಜಿರೆಯ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿದೆ. ಅಕ್ಕ ಎರಡನೇ ವರ್ಷದ ಪಿಯುಸಿ ಪರೀಕ್ಷೆ ಬರೆಯಲು ಹೋಗುತ್ತಿದ್ದಳು ಮತ್ತು ತಂಗಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳುತ್ತಿದ್ದಳು ಎನ್ನಲಾಗಿದೆ.
ಬಸ್ ಸಂಖ್ಯೆ ಹೆಚ್ಚಿಸಿ
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ವಿದ್ಯಾರ್ಥಿನಿಯರು ನೆಲಕ್ಕೆ ಬೀಳುವ ದೃಶ್ಯಾವಳಿಯು ರಸ್ತೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಆಕೆ ಮಾರುದ್ದ ದೂರ ಬೀಳುವುದು. ಅಲ್ಲಿಯೇ ಇದ್ದ ಜನರು ಆಕೆಯ ಸಹಾಯಕ್ಕೆ ಧಾವಿಸುವುದು ದೃಶ್ಯದಲ್ಲಿದೆ. ಈ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದ್ದು, ಬಸ್ ಸಂಖ್ಯೆ ಹೆಚ್ಚಿಸುವಂತೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್).