ರಾಯ್ಪುರ್: ಮುಖ್ಯಮಂತ್ರಿ ಭೂಪೇಶ್ ಬಘೇಲ್ 10 ಮತ್ತು 12ನೇ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳಿಗೆ ಹೆಲಿಕಾಫ್ಟರ್ ರೈಡ್ ಕರೆದೊಯ್ಯುವ ಆಶ್ವಾಸನೆ ನೀಡಿದ್ದರು. ಇದೀಗ ಅವರು ನುಡಿದಂತೆ ನಡೆದಿದ್ದಾರೆ. ಟಾಪರ್ ವಿದ್ಯಾರ್ಥಿಗಳು ಹೆಲಿಕಾಫ್ಟರ್ ರೈಡಿಂಗ್ ಮಾಡಿ ಖುಷಿಯಾಗಿದ್ದಾರೆ.
ಛತ್ತೀಸ್‌ಗಢ ಸರ್ಕಾರವು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆಗೆ ಪ್ರೇರೇಪಿಸುವ ಸಲುವಾಗಿ ತರಗತಿಯ ಟಾಪರ್ಗಳಿಗೆ ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸುವ ಅವಕಾಶ ನೀಡಿತ್ತು. ಅದರಂತೆ ಇಂದು ವಿದ್ಯಾರ್ಥಿಗಳನ್ನು ಸರ್ಕಾರದ ವತಿಯಿಂದ ಹೆಲಿಕಾಫ್ಟರ್ನಲ್ಲಿ ಸುತ್ತಾಡಿಸಲಾಗಿದೆ.
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸುವ ಅವಕಾಶ ನೀಡಲಾಗಿತ್ತು. ಎಂದು ಛತ್ತೀಸ್‌ಗಢ ಸಚಿವ ಪ್ರೇಮಸಾಯಿ ಸಿಂಗ್ ಟೆಕಮ್ ಹೇಳಿದ್ದಾರೆ.
ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸುವ ಅವಕಾಶ ಇದೆ ಎಂದಾಗ ಖುಷಿಯಾಗಿತ್ತು. ನಾವು ಮೊದಲ ಬಾರಿಗೆ ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸಿದ್ದೇವೆ. ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಲು ಸರ್ಕಾರ ನೀಡಿದ ಪ್ರೋತ್ಸಾಹವೂ ಕಾರಣವಾಗಿದೆ. ನಮ್ಮ ಸಾಧನೆಯ ಬಗ್ಗೆ ಪೋಷಕರು ಸಂತಸಗೊಂಡಿದ್ದಾರೆ ಎಂದು ಹೆಲಿಕಾಫ್ಟರ್ನಲ್ಲಿ ಪ್ರಯಾಣಿಸಿದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸಬೇಕೆಂಬುದು ಪ್ರತಿಯೊಬ್ಬರ ಬಯಕೆ. ಆಕಾಶದಲ್ಲಿ ಹಾರಬೇಕೆಂಬ ಮಕ್ಕಳ ಬಯಕೆ ತಮ್ಮ ಸಾಧನೆಯ ಮೂಲಕ ನೆರವೇರಿದೆ. ಈ ಮೂಲಕ ಇನ್ನಷ್ಟು ಸಾಧನೆ ಮಾಡಬೇಕೆಂಬ ಧೃಢ ನಿರ್ಧಾರಕ್ಕೆ ಮಕ್ಕಳು ಬರುತ್ತಾರೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಭಿಪ್ರಾಯ ಪಟ್ಟಿದ್ದಾರೆ.