ನ್ಯೂಸ್

ಯುವಕರಲ್ಲಿ ಹೃದಯಾಘಾತ ಹೆಚ್ಚಳ; ವಿದ್ಯಾರ್ಥಿಗಳಿಗೆ ಸಿಪಿಆರ್​ ಕಲಿಸಿಕೊಡಲು ಆರೋಗ್ಯ ಇಲಾಖೆ ಚಿಂತನೆ

ಬೆಂಗಳೂರು: ಇಂದು ಅನೇಕ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವ ಹಿನ್ನಲೆ ಈ ಸಮಸ್ಯೆಯನ್ನು ನಿಯಂತ್ರಿಸಲು ಇದೀಗ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಯೋಜನೆ ರೂಪಿಸಲು ಮುಂದಾಗಿದೆ.

ಹೃದಯಾಘಾತ ತಪ್ಪಿಸಲು ಮುಂದಾಗಿರುವ ಆರೋಗ್ಯ ಇಲಾಖೆ, ಶಾಲೆ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಿಪಿಆರ್ (CPR) ಕಲಿಸಿಕೊಡಲು ಚಿಂತನೆ ನಡೆಸುತ್ತಿದೆ. ಮುಂದಿನ ವರ್ಷ ಶಾಲಾ ಪಠ್ಯದಲ್ಲಿ ಆರೋಗ್ಯ ಪಠ್ಯ ಸೇರ್ಪಡೆಗೆ ಚರ್ಚಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, "ಯುವ ಸಮೂಹದಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ. ಲೈಫ್ ಸ್ಟೈಲ್ ಖಾಯಿಲೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಆರೋಗ್ಯ ಕಾಳಜಿ ಬಗ್ಗೆ ತಿಳಿಸಿಕೊಡಲು ಪಠ್ಯ ಸೇರ್ಪಡೆ ಮಾಡುವ ಬಗ್ಗೆ ಚಿಂತನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ CPR ಮಾಡಲು ಸಾಧ್ಯವೇ ಎನ್ನುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಶೀಘ್ರವೇ ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ" ಎಂದು ಹೇಳಿದರು.