56 ವರ್ಷದ ಬಳಿಕ ದಕ್ಷಿಣ ಕರ್ನಾಟಕದಲ್ಲಿ ಮಳೆ ಕೊರತೆ 
ನ್ಯೂಸ್

56 ವರ್ಷದಲ್ಲಿ ರಾಜ್ಯದಲ್ಲಿ ಅಧಿಕ ಮುಂಗಾರು ಕೊರತೆ- monsoon deficit in 56 years

ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಹಾಸನ, ಕೊಡಗು, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅ.1,2ರಂದು ಹಾಗೂ ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರಿನಲ್ಲಿ ಮುಂದಿನ 24 ಗಂಟೆ ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಉಳಿದೆಡೆ ಸಾಧಾರಣ ಮಳೆ ಸುರಿಯಲಿದೆ.

ಬೆಂಗಳೂರು: (State faces highest monsoon deficit in 56 years) ಪ್ರಸಕ್ತ ಸಾಲಿನ ನೈಋತ್ಯ ಮಾನ್ಸೂನ್(ಮುಂಗಾರು) ಬುಧವಾರ ಕೊನೆಗೊಂಡಿದ್ದು, ರಾಜ್ಯದಲ್ಲಿ 56 ವರ್ಷಗಳಲ್ಲಿ ಅಧಿಕ ಮಳೆ (ಶೇ.35) ಕೊರತೆಯಾಗಿದೆ. 2012ರಲ್ಲಿ ಶೇ.33 ಮಳೆ ಅಭಾವವಾಗಿತ್ತು.

ಜೂ.1ರಿಂದ ಸೆ.30ರವರೆಗೆ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕಿತ್ತು. ಆದರೆ, 551 ಮಿಮೀ ಮಳೆಯಾಗಿದ್ದು, ಶೇ.35 ಕುಂಠಿತವಾಗಿದೆ. ಈ ಅವಧಿಯಲ್ಲಿ 209 ತಾಲೂಕುಗಳಲ್ಲಿ ಮಳೆ ಅಭಾವವಾಗಿದೆ. ಕರಾವಳಿ ಶೇ.28, ಮಲೆನಾಡು ಶೇ.38, ಉತ್ತರ ಕರ್ನಾಟಕ ಶೇ.61 ಮತ್ತು ದಕ್ಷಿಣ ಕರ್ನಾಟಕದಲ್ಲಿ ಶೇ.40 ಮಳೆ ಕೊರತೆಯಾಗಿದೆ.

ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜೂ.1ರಿಂದ ಶುರುವಾಗುವ ಮಾನ್ಸೂನ್ ಸೆ.30 ರವರೆಗೆ ಕೊನೆಗೊಳ್ಳುತ್ತದೆ. ಈ ಬಾರಿ ಅ.15ರವರೆಗೆ ಮುಂದುವರಿಯಲಿದೆ. ಪ್ರಸ್ತುತ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮಾನ್ಸೂನ್ ಹಿಂಪಡೆಯಲಾಗಿದೆ. ಶುರುವಾಗಿರುವ ಸ್ಥಳದಲ್ಲೇ ಮಾನ್ಸೂನ್ ಕೊನೆಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಮಾನ್ಸೂನ್ ಹಿಂಪಡೆಯಲಾಗುತ್ತದೆ. ಅ.15ರ ಬಳಿಕ ಈಶಾನ್ಯ ಮಾನ್ಸೂನ್(ಹಿಂಗಾರು) ಶುರುವಾಗಲಿದೆ ಎಂದರು.

2 ದಿನ ಮಳೆ ಜೋರು:

ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಹಾಸನ, ಕೊಡಗು, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅ.1,2ರಂದು ಹಾಗೂ ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರಿನಲ್ಲಿ ಮುಂದಿನ 24 ಗಂಟೆ ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಉಳಿದೆಡೆ ಸಾಧಾರಣ ಮಳೆ ಸುರಿಯಲಿದೆ.

ಹಿಂಗಾರು ಸಹ ಕುಂಠಿತ:

ಮುಂಗಾರು ಮೇಲೆ ಪರಿಣಾಮ ಬೀರಿ ಮಳೆ ಕೊರತೆಕ್ಕೆ ಕಾರಣವಾಗಿರುವ ‘ಸೂಪರ್ ಎಲ್‌ನಿನೋ’, ಹಿಂಗಾರು ಮೇಲೆಯೂ ಪ್ರಭಾವ ಬೀರಲಿದೆ. ಈ ಹಿನ್ನೆಲೆಯಲ್ಲಿ ಹಿಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಕ್ಕಿಂತ ಕಡಿಮೆ ಮಳೆ ಬೀಳಲಿದೆ. ಆದರೆ, ಸೂಪರ್ ಎಲ್‌ನಿನೋ ಪ್ರಭಾವವನ್ನು ಹಿಂದೂ ಮಹಾಸಾಗರದ ಡೈಪೋಲ್(ಐಒಸಿ) ತಗ್ಗಿಸುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ವಾಡಿಕೆಕ್ಕಿಂತ ಅಧಿಕ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.