ನ್ಯೂಸ್

ಫೆ.17ರಂದು ರಾಜ್ಯ ಬಜೆಟ್: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಭಾರೀ ನಿರೀಕ್ಷೆ ಮೂಡಿಸಿದೆ ಬಜೆಟ್​

ಬೆಂಗಳೂರು: ರಾಜ್ಯ ಬಜೆಟ್​ ಮಂಡನೆಗೆ ಫೆ.17ರಂದು ದಿನಾಂಕ ನಿಗದಿಯಾಗಿದ್ದು, ವಿಧಾನಸಭಾ ಚುನಾವಣೆ ಸಮೀಪದಲ್ಲೇ ನಡೆಯಲಿರುವ ಈ ಬಜೆಟ್​ ಬಗ್ಗೆ ಜನರಲ್ಲಿ ಭಾರೀ ಕುತೂಹಲವಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಫೆ.10ರಿಂದ ಅಧಿವೇಶನ ನೆಡಲಿದೆ. ಅಂದು ರಾಜ್ಯಪಾಲರು ಜಂಟಿ ಅಧಿವೇಶನ್ನುದ್ದೇಶಿಸಿ ಭಾಷಣ ಮಾಡುವರು. ಫೆ.17ರಂದು ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಸದನದಲ್ಲಿ ಶಾಸಕರ ಆಸಕ್ತಿ ಮೇಲೆ ವಿಧಾನ ಮಂಡಲದ ಅಧಿವೇಶನದ ಅವಧಿ ನಿರ್ಧಾರ ಆಗಲಿದೆ ಎಂದು ವಿವರಿಸಿದರು. ಫೆ.1ರಂದು ಕೇಂದ್ರ ಬಜೆಟ್​ ಮಂಡನೆಯಲಾಗಿದೆ.