ಬೆಂಗಳೂರು: 2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಇದೀಗ ಪ್ರಕಟಿಸಿದ್ದು, ಪಿ.ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಮತ್ತು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಲವ್ ಮಾಕ್ ಟೈಲ್ ಮತ್ತು ವೈ.ಶ್ರೀನಿವಾಸ್ರ ಅರ್ಘ್ಯಂ 2019ರ ಅತ್ಯುತ್ತಮ ಕನ್ನಡ ಚಿತ್ರಗಳಾಗಿ ಹೊರ ಹೊಮ್ಮಿವೆ. ಅಲ್ಲದೆ, ಅತ್ಯುತ್ತಮ ನಟನಾಗಿ ಕಿಚ್ಚ ಸುದೀಪ್ ಮತ್ತು ಅತ್ಯುತ್ತಮ ನಟಿಯಾಗಿ ಅನುಪಮಗೌಡ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ನಟ, ನಟಿ, ನಿರ್ದೇಶನ, ನಿರ್ಮಾಪಕ, ಚಿತ್ರಗಳು ಸೇರಿದಂತೆ ವಿವಿಧ ವಿಭಾಗಳಲ್ಲಿ ಒಟ್ಟು 25 ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದೆ.