ಆಂಧ್ರಪ್ರದೇಶ: ಇದೇ, ಡಿ.04ರಂದು ಸಂಧ್ಯಾ ಚಿತ್ರಮಂದಿರಲ್ಲಿ ಅಲ್ಲು ಅರ್ಜುನ್ರ ಪುಷ್ಪ-2 ಚಿತ್ರ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ, ಡಿಸಿಎಂ ಪವನ್ ಕಲ್ಯಾಣ್(DCM) 'ಸೂಜಿಗೆ ಹೋಗುವ ಕೆಲಸಕ್ಕೆ ಕೊಡಲಿ ಎತ್ತಿದಂತಾಗಿದೆ' ಎಂದು ಹೇಳಿದ್ದಾರೆ.
ಆಂಧ್ರದಲ್ಲಿ ಈ ಸೋಮವಾರ ಸುದ್ದಿಗಾರರ ಜತೆ ಮಾತನಾಡಿರುವ ಪವನ್, ಘಟನೆ ನಡೆದ ತಕ್ಷಣ ಅಲ್ಲು ಅರ್ಜುನ್ ತಂಡದಿಂದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಯಾರಾದರೂ ಸಾಂತ್ವನ ಹೇಳುವ ಕೆಲಸ ಮಾಡಬೇಕಾಗಿತ್ತು. ಆದರೆ, ಇದು ಆಗಿಲ್ಲ ಎಂದಿದ್ದಾರೆ.
ಪ್ರಕರಣದಲ್ಲಿ ಯಾವುದೇ ವ್ಯಕ್ತಿಯನ್ನು ದೂಷಿಸಿಲ್ಲವಾದರೂ. ಈ ಸಮಸ್ಯೆಯನ್ನು ಅಲ್ಲು ಅರ್ಜುನ್ ಮತ್ತು ಅವರ ತಂಡದಿಂದ ನಿಭಾಯಿಸಿ ಸಮಸ್ಯೆ ಪರಿಹಾರ ಮಾಡಬಹುದಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ಡಾ. ಸಿಂಗ್ ಶೋಕಾಚರಣೆ ಮಧ್ಯೆ ರಾಹುಲ್ ಗಾಂಧಿ ವಿದೇಶ ಪ್ರವಾಸ ಸರಿಯೇ? ಬಿಜೆಪಿ ಕಿಡಿಗೆ ‘ಕೈ’ ತಿರುಗೇಟು | Rahul Gandhi
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಗ್ಗೆ ಮಾತನಾಡಿದ ಡಿಸಿಎಂ, ಸಿನಿಮಾ ಉದ್ಯಮವನ್ನು ಬೆಂಬಲಿಸಲು ಸಿಎಂ ರೇವಂತ್ ರೆಡ್ಡಿ ಬೆನಿಫಿಟ್ ಶೋಗಳು ಮತ್ತು ಟಿಕೆಟ್ ದರಗಳ ಏರಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸಿಎಂ ರೇವಂತ್ ಅವರು ಅತ್ಯಂತ ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದಾರೆ. ಹೀರೋಗಳಾಗಿ ಸಾಮಾನ್ಯರಾಗಲಿ ಕಾನೂನು ಎಂದ ಮೇಲೆ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.
ಇನ್ನು ಪುಷ್ಪ-2 ಸಿನಿಮಾ ಇವೆಂಟ್ ಕಾರ್ಯಕ್ರಮದಲ್ಲಿ ನಟ ಅಲ್ಲು ಅರ್ಜುನ್ ಅವರು ಸಿಎಂ ರೇವಂತ್ ರೆಡ್ಡಿ ಹೆಸರು ಪ್ರಸ್ತಾಪ ಮಾಡಲಿಲ್ಲ. ಹೀಗಾಗಿ, ಈ ಪ್ರಕರಣ ರಾಜಕೀಯ ತಿರುವುಪಡೆದುಕೊಂಡಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪವನ್ ಕಲ್ಯಾಣ್, ಸಿಎಂ ಹೆಸರು ಹೇಳದಿದ್ದಕ್ಕೆ ಬಂಧನವಾಗಿದೆ ಎಂಬುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಡಾ. ಸಿಂಗ್ ಶೋಕಾಚರಣೆ ಮಧ್ಯೆ ರಾಹುಲ್ ಗಾಂಧಿ ವಿದೇಶ ಪ್ರವಾಸ ಸರಿಯೇ? ಬಿಜೆಪಿ ಕಿಡಿಗೆ ‘ಕೈ’ ತಿರುಗೇಟು | Rahul Gandhi
ಚಿರಂಜೀವಿ ಕೂಡ ಅಭಿಮಾನಿಗಳ ಜತೆ ಸಿನಿಮಾ ನೋಡುತ್ತಿದ್ದರು. ಆದರೆ, ಅವರು ಕ್ರಮಗಳನ್ನು ಪಾಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಇದೇ ತಿಂಗಳ 4ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ-2 ಪ್ರೀಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಅಲ್ಲಿಗೆ ಹೋಗಿದ್ದರು. ಆ ಕ್ಷಣದಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್, ಸಿನಿಮಾ ಘಟಕ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)